ಆಂಧ್ರ ಪ್ರದೇಶ: ಹೆತ್ತ ಪಾಲಕರಿಗೆ ಗಾಬರಿ ಹುಟ್ಟಿಸುವಂಥ ಘಟನೆಯೊಂದು ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ನಡೆದಿದೆ. ಅದೇನೆಂದರೆ ಶಾಲೆಯ ಒಳಗೇ ವಿದ್ಯಾರ್ಥಿಯೊಬ್ಬ, ತನ್ನ ಕ್ಲಾಸ್​ಮೇಟ್​ ವಿದ್ಯಾರ್ಥಿನಿಗೆ ತಾಳಿ ಕಟ್ಟಿ ಮದುವೆ ಮಾಡಿಕೊಂಡಿದ್ದಾನೆ!


COMMERCIAL BREAK
SCROLL TO CONTINUE READING

ಆಂಧ್ರಪ್ರದೇಶದ ಪೂರ್ವಗೋದಾವರಿ ಜಿಲ್ಲೆಯ ರಾಜಮಂಡ್ರಿ(Rajahmundry) ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ, ಕಳೆದ ತಿಂಗಳ 17ರಂದು ಅಪ್ರಾಪ್ತ ವಿದ್ಯಾರ್ಥಿಗಳು ಕ್ಲಾಸ್ ರೂಂನಲ್ಲೇ ಮದುವೆಯಾಗಿದ್ದಾರೆ. ಹೀಗೆ ಅಪ್ರಾಪ್ತ ವಿದ್ಯಾರ್ಥಿಗಳು ಮದುವೆಯಾಗುತ್ತಿರುವ ದೃಶ್ಯ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ರೈತರ ಪ್ರತಿಭಟನೆಗೆ ಬೆಂಬಲಿಸಿ 'ಪದ್ಮ ವಿಭೂಷಣ' ವಾಪಸ್ ನೀಡಿದ ಮಾಜಿ ಸಿಎಂ!


ತಮ್ಮ ಮಕ್ಕಳು ಈ ರೀತಿ ಮಾಡಿದ್ದಾರೆ ಎಂದು ಪಾಲಕರಿಗೆ ಅರಿವೇ ಇರಲಿಲ್ಲ. ಯಾವಾಗ ಈ ಫೋಟೋ ವೈರಲ್​ ಆಗಿ ಅವರ ಕಣ್ಣಿಗೂ ಬಿತ್ತೋ, ವಿದ್ಯಾರ್ಥಿಗಳ ಪಾಲಕರು ದಂಗಾಗಿಹೋಗಿದ್ದಾರೆ. ವಿವಾಹವು ವಿನೋದಕ್ಕಾಗಿ ನಡೆದಿದೆಯೆ, ಯಾರಿಗಾದರೂ ಚಾಲೆಂಜ್​ ಮಾಡಿರುವುದಕ್ಕೆ ನಡೆದಿದೆಯೇ ಅಥವಾ ನಿಜವಾಗಿಯೂ ಇವರಿಬ್ಬರು ಪ್ರೇಮಿಗಳಾಗಿದ್ದು, ನಿಜವಾಗಿಯೂ ಮದುವೆ ಮಾಡಿಕೊಂಡಿದ್ದಾರೆಯ? ಈ ಫೋಟೋದ ಅಸಲಿಯತ್ತೇನು ಎಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.


PUBG ಗೆ ಟಕ್ಕರ್ ನೀಡಿದ FAU-G: ಮೂರೇ ದಿನದಲ್ಲಿ 10 ಲಕ್ಷಕ್ಕೂ ಹೆಚ್ಚು ನೋಂದಣಿ


ಸದ್ಯ ವಿಷಯ ಕಾಲೇಜು ಪ್ರಾಂಶುಪಾಲರಿಗೆ ತಿಳಿದಿದ್ದು, ಇಬ್ಬರನ್ನೂ ಶಾಲೆಯಿಂದ ಟಿ.ಸಿ ಕೊಟ್ಟು ಕಳುಹಿಸಿರುವುದಾಗಿ ತಿಳಿದುಬಂದಿದೆ.


Viral Video: ತನ್ನ ಮಾಲೀಕನನ್ನು Bike Ride ಮಾಡಿಸುತ್ತಿದೆ ಈ ಶ್ವಾನ, Swag ನೀವು ನೋಡಿ