ನವದೆಹಲಿ: ಶ್ವಾನವೊಂದು ಬೈಕ್ ಸವಾರಿ ಮಾಡುವುದನ್ನು ನೀವು ಎಂದಾದರು ಗಮನಿಸಿದ್ದೀರಾ? ನೋಡಿರಲಿಕ್ಕಿಲ್ಲ. ಆದರೆ. ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೊಂದು ಭಾರಿ ವೈರಲ್ ಆಗುತ್ತಿದ್ದು, ಇದನ್ನು ನೋಡಿ ನೀವೂ ಕೂಡ ನಿಬ್ಬೇರಗಾಗುವಿರಿ. ನಿಜ ಹೇಳುವುದೆಂದರೆ ಈ ವಿಡಿಯೋದಲ್ಲಿ ಶ್ವಾನವೊಂದು ಬೈಕ್ ಚಲಾಯಿಸುತ್ತಿದೆ. ಅಷ್ಟೇ ಅಲ್ಲ ತನ್ನ ಬೈಕ್ ಮೇಲೆ ಇಬ್ಬರು ಸವಾರರನ್ನು ಕೂಡ ಈ ನಾಯಿ ಕರೆದೊಯ್ಯುತ್ತಿದೆ.
ಇದನ್ನು ಓದಿ- Viral Video: ವಿಮಾನಗಳ ಮೇಲೆ ಜೇನುನೊಣಗಳ ಹಲ್ಲೆ, ಮುಂದೇನಾಯ್ತು? ನೀವೇ ನೋಡಿ
ಸುದ್ದಿ ಸಂಸ್ಥೆ ರಾಯಿಟರ್ಸ್ 'ಬೋಗಿ' ಹೆಸರಿನ ನಾಯಿಯ ವೀಡಿಯೊವನ್ನು ಹಂಚಿಕೊಂಡಿದೆ. ಈ ರೈಡರ್ ಡಾಗ್ ಫಿಲಿಪೈನ್ಸ್ನಲ್ಲಿ ವಾಸಿಸುತ್ತಿದೆ. ಬೈಕು ಸವಾರಿ ಮಾಡುವಲ್ಲಿ ಈ ನಾಯಿ ಮನುಷ್ಯರನ್ನು ಸಹ ಹಿಂದಿಕ್ಕಿದೆ.
They see me rollin pic.twitter.com/59HxNpqLPA
— Klara Sjöberg (@klara_sjo) October 26, 2019
ನಾಯಿಗೆ ಬೈಕ್ ಓಡಿಸುವ ಹವ್ಯಾಸ
ಹೆಲ್ಮೆಟ್ ಮತ್ತು ಬಟ್ಟೆಗಳನ್ನು ಧರಿಸಿ ಬೈಕು ಸವಾರಿ ಮಾಡಲು ನಾಯಿಗೆ ಎಷ್ಟು ಇಷ್ಟ ಎಂಬುದನ್ನು ನೀವು ವೀಡಿಯೊದಲ್ಲಿ ಗಮನಿಸಬಹುದು. ಈ ಡಾಗ್ ಬೈಕ್ ಸವಾರಿಯನ್ನು ಆನಂದಿಸುತ್ತಿರುವ ಇಬ್ಬರು ಸಹ ಬೈಕ್‌ನ ಹಿಂಭಾಗದಲ್ಲಿ ಕುಳಿತಿದ್ದಾರೆ. ಈ ನಾಯಿಯ ಹೆಸರು ಬೋಗಿ. ಬೋಗಿಯ ಮಾಲೀಕ ಗಿಲ್ಬರ್ಟ್ ಡೆಲೋಸ್ ರೆಯೆಸ್ ತಮ್ಮ ನಾಯಿಗಾಗಿಯೇ ವಿಶೇಷ ಹೆಲ್ಮೆಟ್ ಅನ್ನು ವಿನ್ಯಾಸಗೊಳಿಸಿದ್ದು, ಹೆಲ್ಮೆಟ್ ನಲ್ಲಿ ನಾಯಿಯ ಕಿವಿಗಳು ಸಿಳುಕಿಕೊಳ್ಳುವುದಿಲ್ಲ.
ಇದನ್ನು ಓದಿ-ಮನೆ ಸಿಬ್ಬಂದಿಯೊಂದಿಗೆ ಜಬರ್ದಸ್ತ್ ಸ್ಟೆಪ್ಸ್ ಹಾಕಿದ Elli Avrram, Video Viral
28 ನವೆಂಬರ್ 2020ರಂದು ಸುದ್ದಿ ಸಂಸ್ಥೆಯ ಈ ವಿಡಿಯೋ (Viral Video) ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ತುಂಬಾ ವೈರಲ್ ಆಗಿದೆ. ಸದ್ಯ ಬೋಗಿಗೆ 11 ವರ್ಷಗಳು ಪೂರ್ಣಗೊಂಡಿವೆ. ಚಿಕ್ಕಂದಿನಿಂದಲೂ ಕೂಡ ಈ ಶ್ವಾನಕ್ಕೆ ಬೈಕ್ ಸವಾರಿ ಮಾಡುವ ಹವ್ಯಾಸವಿದೆಯಂತೆ.
Meet Bogie: The Filipino biker dog who rides with his owner pic.twitter.com/P87A0f4LPK
— Reuters (@Reuters) November 27, 2020
ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್
ಬೋಗಿಯ ಬೈಕ್ ಪ್ರೀತಿಯನ್ನು ನೋಡಿರುವ ಅದರ ಮಾಲೀಕರು ಸಹ ಅದಕ್ಕೆ ಬೈಕು ಸವಾರಿ ಮಾಡಲು ಕಳಿಸಿದ್ದಾರೆ. ಈ ವೀಡಿಯೊ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ. ಈ ವೀಡಿಯೊಗೆ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ವಿಡಿಯೋ ಕುರಿತು ಕಾಮೆಂಟ್ ಮಾಡಿರುವ ಓರ್ವ ಬಳಕೆದಾರರು 'ಬೋಗಿ ನಿಜವಾಗಿಯೂ ಕಮಾಲ್ ಮಾಡಿದೆ' ಎಂದು ಬರೆದಿದ್ದಾರೆ ಇದೆ ವೇಳೆ ಮತ್ತೋರ್ವ ಬಳಕೆದಾರರು. ಇತ್ತೀಚಿನ ದಿನಗಳಲ್ಲಿ ಏನೂ ಅಸಾಧ್ಯವಲ್ಲ' ಎಂದಿದ್ದಾರೆ. ಈ ವಿಡಿಯೋವನ್ನು ಇದುವರೆಗೆ ಸುಮಾರು 28 ಸಾವಿರಕ್ಕೂ ಹೆಚ್ಚು ಜನರು ವಿಕ್ಷೀಸಿದ್ದಾರೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಭರಾಟೆಯನ್ನು ಮುಂದುವರೆಸಿದೆ.