ನವದೆಹಲಿ: ಗ್ವಾಲಿಯರ್ ನಲ್ಲಿ ಯುವಕರ ಸಮೂಹವೊಂದು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಅದನ್ನು ತಮ್ಮ ಸ್ನೇಹಿತರಿಗೆ ಲೈವ್ ಸ್ಟ್ರೀಮ್ ಮಾಡಿದ ಆಘಾತಕಾರಿ ಘಟನೆ ನಡೆದಿದೆ.ಈಗ ತಲೆಮೆರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಮಧ್ಯಪ್ರದೇಶದ ಪೊಲೀಸರು ಬಲೆ ಬಿಸಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಬಾಲಕಿ ಶುಕ್ರವಾರದಂದು ಸಾಮೂಹಿಕ ಅತ್ಯಾಚಾರದ ಕೃತ್ಯದ ನಂತರ ಪೋಲಿಸರನ್ನು ಸಂಪರ್ಕಿಸಿದ್ದಾಳೆ ಎನ್ನಲಾಗಿದೆ.ಜೂನ್ 2 ರಂದು ಆರೋಪಿಗಳು ಬಾಲಕಿಯನ್ನು ಹೋಟೆಲ್ ಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ.ಈಗ ಅತ್ಯಾಚಾರವೆಸಗಿರುವ ಇಬ್ಬರೂ ಆರೋಪಿಗಳು ಇಪ್ಪತ್ತರ ಹರೆಯದವರು ಎನ್ನಲಾಗಿದೆ.


ಇದನ್ನೂ ಓದಿ: "ಅಲ್ಪಸಂಖ್ಯಾತರು, ದಲಿತರನ್ನು ಬಳಸಿಕೊಂಡು ಸಿದ್ದರಾಮಯ್ಯ ಸಿಎಂ ಆದರು"


ಈ ಕೃತ್ಯದ ಸಮಯದಲ್ಲಿ ಬಾಲಕಿ ಮೇಲಿನ ಅತ್ಯಾಚಾರವನ್ನು ಲೈವ್ ಸ್ಟ್ರೀಮ್ ಮಾಡಿರುವುದಲ್ಲದೆ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಈಗ ಅವರ ವಿರುದ್ಧ ಈ ಹಿಂದೆಯೂ ಇದೇ ರೀತಿಯ ಅಪರಾಧದ ಪ್ರಕರಣಗಳು ದಾಖಲಾಗಿದ್ದವು ಎಂದು ತಿಳಿದುಬಂದಿವೆ.


ಪೊಲೀಸರು ಈಗ ಆರೋಪಿಗಳ ವಿರುದ್ಧ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಅವರ ಪತ್ತೆಗಾಗಿ ಬಲೆ ಬಿಸಿದ್ದಾರೆ ಎನ್ನಲಾಗಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.