"ಅಲ್ಪಸಂಖ್ಯಾತರು, ದಲಿತರನ್ನು ಬಳಸಿಕೊಂಡು ಸಿದ್ದರಾಮಯ್ಯ ಸಿಎಂ ಆದರು"

ಬಿಜೆಪಿ ಏಕತೆಯಿಂದ ಸುಸಂಘಟಿತವಾಗಿ ಕೆಲಸ ಮಾಡ್ತಿದೆ. ರಾಜ್ಯದ ಜನ ನಮಗೆ ಬಹುಮತದ ಹತ್ತಿರಕ್ಕೆ ಬೆಂಬಲ ಕೊಡ್ತಾರೆ. ಆದರೆ ಅಧಿಕಾರ ನಡೆಸಲು ಕೆಲವೇ ಸ್ಥಾನಗಳ ಕೊರತೆ ಆಗುತ್ತದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜ‌ನ ಪೂರ್ಣ ಬಹುಮತ ನೀಡಬೇಕು ಎಂದು ಕೇಳಿಕೊಳ್ಳುತ್ತೇನೆ.

Written by - Zee Kannada News Desk | Edited by - Bhavishya Shetty | Last Updated : Jun 11, 2022, 01:00 PM IST
  • ಬಿಜೆಪಿ ಏಕತೆಯಿಂದ ಸುಸಂಘಟಿತವಾಗಿ ಕೆಲಸ ಮಾಡ್ತಿದೆ.
  • ರಾಜ್ಯದ ಜ‌ನ ಪೂರ್ಣ ಬಹುಮತ ನೀಡಬೇಕು
  • ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ
"ಅಲ್ಪಸಂಖ್ಯಾತರು, ದಲಿತರನ್ನು ಬಳಸಿಕೊಂಡು ಸಿದ್ದರಾಮಯ್ಯ ಸಿಎಂ ಆದರು" title=
KS Eshwappa

ಶಿವಮೊಗ್ಗ: ಬಿಜೆಪಿ ಮೂರು ಸ್ಥಾನ ಗೆಲ್ಲೋದಕ್ಕೆ, ಮನ್ಸೂರ್ ಅಲಿಖಾನ್ ಮತ್ತು ಜೆಡಿಎಸ್ ಅಭ್ಯರ್ಥಿ ಸೋಲೋದಕ್ಕೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಅವರೇ ಕಾರಣ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಬಿಜೆಪಿ ಏಕತೆಯಿಂದ ಸುಸಂಘಟಿತವಾಗಿ ಕೆಲಸ ಮಾಡ್ತಿದೆ. ರಾಜ್ಯದ ಜನ ನಮಗೆ ಬಹುಮತದ ಹತ್ತಿರಕ್ಕೆ ಬೆಂಬಲ ಕೊಡ್ತಾರೆ. ಆದರೆ ಅಧಿಕಾರ ನಡೆಸಲು ಕೆಲವೇ ಸ್ಥಾನಗಳ ಕೊರತೆ ಆಗುತ್ತದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜ‌ನ ಪೂರ್ಣ ಬಹುಮತ ನೀಡಬೇಕು ಎಂದು ಕೇಳಿಕೊಳ್ಳುತ್ತೇನೆ. ಇನ್ನು ಕಟೀಲ್ ನೇತೃತ್ವದಲ್ಲಿ ಸಂಘಟನೆ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ನಿನ್ನೆಯೇ ಫಲಿತಾಂಶವೇ ಸಾಕ್ಷಿ. ಅಭಿವೃದ್ಧಿ ಕೆಲಸ ಮಾಡಲು ರಾಜ್ಯದ ಜನರ ಆಶೀರ್ವಾದಬೇಕು ಎಂದರು.  

ಇದನ್ನು ಓದಿ: ಆನೆದಂತ ಸ್ವಾಧೀನ ಪ್ರಕರಣ: ಖ್ಯಾತ ನಟ ಮೋಹನ್ ಲಾಲ್ ಗೆ ಸಂಕಷ್ಟ..!

ಸಿದ್ದರಾಮಯ್ಯ ಯಾವಾಗ ಯಾರಿಗೆ ಒಳ್ಳೆಯದು ಮಾಡಿದ್ದಾರೆ? ಕುರುಬ ಸಮುದಾಯದ ವಿಶ್ವನಾಥ್, ಎಚ್.ಎಂ. ರೇವಣ್ಣ, ಮೇಟಿ, ಎಂಟಿಬಿ ನಾಗರಾಜ್ ಎಲ್ಲರನ್ನೂ ಕೈ ಬಿಟ್ಟರು. ರಾಜ್ಯದಲ್ಲಿ ಒಬ್ಬ ಕುರುಬರನ್ನು ಬೆಳೆಸಲಿಲ್ಲ. ವೀರಶೈವ ಲಿಂಗಾಯತರನ್ನು ಹೊಡೆದು ಹಾಕಿದರು. ಅವರ ಶಾಪದಿಂದಲೇ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 

ಇನ್ನು ಹಿಜಾಬ್‌ ವಿಷಯದಲ್ಲಿ ಮುಸಲ್ಮಾನ್ ವಿದ್ಯಾರ್ಥಿಗಳಿಗೆ ಯಾವುದೇ ಬುದ್ದಿವಾದ ಹೇಳಲಿಲ್ಲ. ಮುಸಲ್ಮಾನರನ್ನು ಬೆಳೆಯಲು ಬಿಡಲಿಲ್ಲ. ಮುಸಲ್ಮಾನ್ ನಾಯಕರನ್ನು ಸಿದ್ದರಾಮಯ್ಯ ಹಾಳು ಮಾಡಿದರು. ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರನ್ನು ಬಳಸಿಕೊಂಡು ಮುಖ್ಯಮಂತ್ರಿಯಾದರು.  ಆ ಬಳಿಕ ಅವರನ್ನು ತುಳಿಯುವ ಕೆಲಸ ಮಾಡಿದರು. ಬೇರೆ ಬೇರೆ ಪಕ್ಷದ ವ್ಯಕ್ತಿಗಳು ಬಿಜೆಪಿ ಪಕ್ಷದ ತತ್ವ, ಸಿದ್ದಾಂತ ಒಪ್ಪಿ ಬರುವುದಾದರೆ ನಮ್ಮ ಪಕ್ಷಕ್ಕೆ ಬನ್ನಿ ಎಂದು ಈಶ್ವರಪ್ಪ ನುಡಿದರು. 

ಇದನ್ನು ಓದಿ: ಆಗ್ರಾ ಕೋರ್ಟ್‌ ಅಲಹಾಬಾದ್‌ ಹೈಕೋರ್ಟ್‌ ಆಗಿದ್ಹೇಗೆ? ಇದರ ಹಿಂದಿದೆ ರೋಚಕ ಕಥೆ

ಸಿದ್ದರಾಮಯ್ಯ ಒಬ್ಬ ದೇಶದ್ರೋಹಿ, ಗೋಹತ್ಯೆ ಮಾಡುವವರಿಗೆ ಬೆಂಬಲ ನೀಡುವ ವ್ಯಕ್ತಿ. ರಾಷ್ಟ್ರದ್ರೋಹಿ ಪಕ್ಷದ ನಾಯಕ ಸಿದ್ದರಾಮಯ್ಯ.  ಅಂತಹವರ ಜೊತೆಗೆ ಯಾವುದೇ ಕಾರಣಕ್ಕೂ ಹೊಂದಾಣಿಕೆ ಇಲ್ಲ. ಸಿದ್ದರಾಮಯ್ಯನ ಧೂಳು ನನಗೆ ಅವಶ್ಯಕತೆ ಇಲ್ಲ. ಸಮಾಜವನ್ನು ಹೊಡೆಯುವ ಕೆಲಸ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News