ನವದೆಹಲಿ : ಮಿಲನದ ಅವಧಿಯ ಸುಮಾರು ಮೂರು ತಿಂಗಳ ನಂತರ, ಎರಡು ಸರ್ಪಗಳ (Snake Video) ನಡುವೆ ಘೋರವಾದ ಕಾದಾಟ ನಡೆಯಿತು.  ಎರಡು ಸರ್ಪಗಳ ನಡುವೆ ಈ ಕಾದಾಟ ನಡೆದದ್ದು ,  ನಾಗಿಣಿಯನ್ನು ಮೆಚ್ಚಿಸುವ ಸಲುವಾಗಿ. ಕಾಡಿನಲ್ಲಿದ್ದ  ನಾಗಿಣಿಯನ್ನು ಆಕರ್ಷಿಸಲು, ನಾಗರಹಾವೊಂದು ಬುಸುಗುಟ್ಟುತ್ತಿತ್ತು. ಇದರ ಪರಿಮಳದಿಂದ ನಾಗಿಣಿ ಹತ್ತಿರ ಬರುತ್ತದೆ ಎಂದುಕೊಂಡಿತ್ತು ನಾಗರಹಾವು. ಆದರೆ ಅಷ್ಟರಲ್ಲಿಯೇ ಅಲ್ಲಿಗೆ ಇನ್ನೊಂದು ಸರ್ಪ ಬಂದಾಗಿತ್ತು.  ಇದಾದ ನಂತರ, ಎರಡು ನಾಗರಹಾವಿನ ಮಧ್ಯೆ ಕಾಳಗ ನಡೆದಿದೆ (Snake fighting video). ನಾಗಿಣಿಯ ಎದುರಿನಲ್ಲಿಯೇ ಎರಡು ನಾಗರಹಾವಿನ ಮಧ್ಯೆ ಘರ್ಷಣೆ ನಡೆದಿದೆ. 


COMMERCIAL BREAK
SCROLL TO CONTINUE READING

ಕಾಡಿನಲ್ಲಿ ಎರಡು ನಾಗರ ಹಾವುಗಳು ಮಧ್ಯೆ ಕಾಳಗ : 
ಭಾರತದ ಕಾಡಿನಲ್ಲಿ ಕಿಂಗ್ ಕೋಬ್ರಾ (King Cobra video) ಸಾಕಷ್ಟು ಸಂಖ್ಯೆಯಲ್ಲಿ ಇವೆ. ಇವುಗಳ ಬಗ್ಗೆ ಸಾಕ್ಷ್ಯಚಿತ್ರಗಳನ್ನು ಮಾಡಲು ವಿದೇಶದಿಂದ ಅನೇಕ ಜನರು ಬರುತ್ತಾರೆ. ಹೀಗೆಯೇ ಕಿಂಗ್ ಕೊಬ್ರಾಗಳ ವಿಡಿಯೋವನ್ನು (King Cobra video) ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಜನರು ಕೂಡಾ ಈ ವೀಡಿಯೊವನ್ನು ತುಂಬಾ ಇಷ್ಟಪಡುತ್ತಿದ್ದಾರೆ. 


ಇದನ್ನೂ ಓದಿ : Cobra Video: ನಾಗರಹಾವನ್ನು ಹಿಡಿದ ಮಹಿಳೆಯ ಸ್ಟೈಲ್ ಕಂಡರೆ ನೀವೂ ಸೆಲ್ಯೂಟ್ ಹೊಡೆಯುತ್ತೀರಿ!


ನಾಗಿಣಿಯನ್ನು ತನ್ನತ್ತ ಆಕರ್ಷಿಸಲು ಬುಸುಗುಟ್ಟುತ್ತಿರುವ ನಾಗರಾಜ. ಅದೇ ಜಾಗಕ್ಕೆ ಮತ್ತೊಂದು ಹಾವಿನ ಎಂಟ್ರಿಯಾಗುವುದನ್ನು ಈ ವಿಡಿಯೋದಲ್ಲಿ ಕಾಣಬಹುದು (Snake video). ಎರಡೂ ಗಂಡು ನಾಗರ ಹಾವುಗಳ ಮಧ್ಯೆ ನಡೆಯುತ್ತಿರುವ ಕಾಳಗವನ್ನು ಇಲ್ಲಿ ನೋಡಬಹುದು. ಸುಮಾರು 5 ಗಂಟೆಗಳವರೆಗೆ ಎರಡೂ ಹಾವುಗಳ ಮಧ್ಯೆ ಘರ್ಷಣೆ ನಡೆದಿದೆ.


Snake Video: ಹಕ್ಕಿ ಗೂಡಿನ ಮೇಲೆ ದಾಳಿ ಮಾಡಿದ ಹಾವು; ಮುಂದೇನಾಯ್ತು, ನೀವೇ ನೋಡಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.