UCC Update: `ನನಗೆ ಏಳು ಮಕ್ಕಳಿದ್ದಾರೆ... ಮುಂದಿನ ಮದುವೆಗೆ ನಿಮ್ಮ ಅನುಮತಿ ಬೇಕಿಲ್ಲ`
Badruddin Ajmal On Himanta Biswa: ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಅಸ್ಸಾಂನಲ್ಲಿ ಏಕರೂಪ ನಾಗರಿಕ ಸಂಹಿತೆ ಅಂದರೆ ಯುಸಿಸಿ (Uniform Civil Code) ಅನುಷ್ಠಾನದ ಬಗ್ಗೆ ಚರ್ಚೆಗಳು ವೇಗಪಡೆದುಕೊಂಡಿವೆ. ಈ ಹಿನ್ನೆಲೆಯಲ್ಲಿ ಆರೋಪ, ಪ್ರತ್ಯಾರೋಪಗಗಳು ಇದೀಗ ಕೇಳಿಬರಲಾರಂಭಿಸಿವೆ. ಈ ಹಿನ್ನೆಲೆ ಇದೀಗ ಬದ್ರುದ್ದೀನ್ ಅಜ್ಮಲ್ ಹಿಮಂತ ಬಿಸ್ವ ಸರ್ಮಾಗೆ (Himant Biswa Sarma) ತಿರುಗೇಟು ನೀಡಿದ್ದಾರೆ (National News In Kannada).
Himant Biswa Sarma: ಯಾವಾಗಲೂ ಜನಮಾನಸದಲ್ಲಿ ಚರ್ಚೆಯಾಗುವ ವ್ಯಕ್ತಿಗಳಲ್ಲಿ ಹಿಮಂತ್ ಬಿಸ್ವ ಸರ್ಮಾ ಕೂಡ ಒಬ್ಬರು. ಪ್ರಸ್ತುತ ವಿವಾಹಕ್ಕೆ ಸಂಬಂಧಿಸಿದ ವಿಚಾರದ ಹಿನ್ನೆಲೆ ಅಸ್ಸಾಂನ ಜನಪ್ರಿಯ ನಾಯಕ ಮತ್ತು ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ (Badruddin Ajmal) ಅವರನ್ನು ಹಿಮಂತ್ ಕೆಣಕಿದ್ದಾರೆ, ಅದಕ್ಕೆ ಬದ್ರುದ್ದೀನ್ ಅಜ್ಮಲ್ ಅವರೂ ಕೂಡ ತಿರುಗೇಟು ನೀಡಿದ್ದಾರೆ. ಮದುವೆ ಆಗಬೇಕಾದರೆ ನಿಮ್ಮ ಬಳಿ ಪರ್ಮಿಷನ್ ತೆಗೆದುಕೊಳ್ಳಲು ಬರುವುದಿಲ್ಲ ಮಾಡಿಕೊಂಡೇ ತೀರುತ್ತೇನೆ ಎಂದು ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ. ಇಷ್ಟೇ ಅಲ್ಲ, ಬದ್ರುದ್ದೀನ್ ಅಜ್ಮಲ್ ಅವರು ಕಾಂಗ್ರೆಸ್ ನಾಯಕ ರಕಿಬುಲ್ ಹುಸೇನ್ (Raquibul Hassan) ಅವರಿಗೂ ತಿರುಗೇಟು ನೀಡಿದ್ದು, ತಮಗೆ ಏಳು ಮಕ್ಕಳಿದ್ದು, ಅವರಿಗೆ ಕೇವಲ ಒಂದೇ ಮಗುವಿಗೆ ಜನ್ಮ ನೀಡುವ ಶಕ್ತಿ ಇದೆ ಎಂದು ಹೇಳಿದ್ದಾರೆ (National News In Kannada).
ಇತ್ತೀಚೆಗಷ್ಟೇ ಅಸ್ಸಾಂ ಸಿಎಂ (Assam CM Himant Biswa Sarma) ಹಿಮಂತ ಬಿಸ್ವಾ ಶರ್ಮಾ ಅವರು ಬದ್ರುದ್ದೀನ್ ಅಜ್ಮಲ್ ವಿರುದ್ಧ ವಾಗ್ದಾಳಿ ನಡೆಸಿ, ಚುನಾವಣೆಗೂ (Lok Sabha Election 2024) ಮುನ್ನವೇ ಅಜ್ಮಲ್ ಮದುವೆಯಾಗಬೇಕು ಏಕೆಂದರೆ ಯುಸಿಸಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲಿದ್ದು, ಜೈಲಿಗೆ ಹೋಗಬೇಕಾದ ಕಾಲ ಬರಲಿದೆ ಎಂದು ಹೇಳಿದಾಗ ಈ ಕೋಲಾಹಲ ಸೃಷ್ಟಿಯಾಗಿದೆ.
ಇದನ್ನೂ ಓದಿ-Natural Gas Price ನಲ್ಲಿ ಭಾರಿ ಕಡಿತಗೊಳಿಸಿದ ಕೇಂದ್ರ ಸರ್ಕಾರ, ಹೊಸ ದರಗಳು ಇಂತಿವೆ!
ಮತ್ತೆ ವಿವಾಹವಾಗಲು ಬಯಸಿದರೆ... (badruddin ajmal takes on himant biswa sarma regarding ucc)
ಎರಡನೇ ಬಾರಿಗೆ ಎಐಯುಡಿಎಫ್ ಸಂಸದ ಬದ್ರುದ್ದೀನ್ ಅಜ್ಮಲ್ ಅವರು ಮರುಮದುವೆಯಾಗಲು ಬಯಸಿದರೆ, ಅವರು ಚುನಾವಣೆಗೆ ಮುನ್ನ ಅದನ್ನು ಮಾಡಿಕೊಳ್ಳಲಿ, ಏಕೆಂದರೆ ನಂತರ ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೆ ಬರಲಿದ್ದು, ಅವರು ಜೈಲಿಗೆ ಹೋಗಬೇಕಾದ ಕಾಲ ಬರಲಿದೆ ಎಂದು ಹಿಮಂತ ಶನಿವಾರ ಹೇಳಿದ್ದರು. ಇದಲ್ಲದೇ, ಧುಬ್ರಿ ಕ್ಷೇತ್ರದ ಕಾಂಗ್ರೆಸ್ ನಾಯಕ ರಕಿಬುಲ್ ಹುಸೇನ್ ಕೂಡ ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರನ್ನು ಹಲವು ವಿಧಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಧುಬ್ರಿ ಕ್ಷೇತ್ರದಿಂದ ರಾಕಿಬುಲ್ ಹುಸೇನ್ ಸ್ಪರ್ಧಿಸುತ್ತಿರುವುದು ಕಾಕತಾಳೀಯ.
ಇದನ್ನೂ ಓದಿ-ಭಾರತದಿಂದ ಗಂಟುಮೂಟೆ ಕಟ್ಟಲಿವೆಯೇ Petrol-Diesel ವಾಹನ ಕಂಪನಿಗಳು, Nitin Gadkari ಹೇಳಿದ್ದೇನು?
ಮುಂದುವರೆದ ಆರೋಪ-ಪ್ರತ್ಯಾರೋಪಗಳು
ಸದ್ಯ ಇಬ್ಬರಿಗೂ ಅಜ್ಮಲ್ ಉತ್ತರ ನೀಡಿದ್ದಾರೆ. ಅಸ್ಸಾಂನಲ್ಲಿ ಲೋಕಸಭೆ ಚುನಾವಣೆ ಮುಗಿದ ತಕ್ಷಣ, ಏಕರೂಪ ನಾಗರಿಕ ಸಂಹಿತೆ ಅಂದರೆ ಯುಸಿಸಿ ಅನುಷ್ಠಾನದ ಬಗ್ಗೆ ಚರ್ಚೆಗಳು ವೇಗ ಪಡೆದುಕೊಂಡಿದ್ದು. ಈ ಹಿನ್ನೆಲೆಯಲ್ಲಿ ಆರೋಪ, ಪ್ರತ್ಯಾರೋಪಗಳು ಮುಂದುವರೆದಿವೆ. ಈ ಸರಣಿಯಲ್ಲಿ, ಉದಲಗುರಿಯಲ್ಲಿ ನಡೆದ ಚುನಾವಣಾ ಸಭೆಯ ನಂತರ, ಚುನಾವಣೆ ನಂತರ ಯುಸಿಸಿ ಜಾರಿಗೆ ತರಲಾಗುವುದು ಮತ್ತು ಅಜ್ಮಲ್ ಮತ್ತೊಮ್ಮೆ ಮದುವೆಯಾದರೆ, ಎಲ್ಲರಿಗೂ ಬಹುವಿವಾಹಗಳು ಕಾನೂನುಬಾಹಿರವೆಂದು ಘೋಷಣೆಯಾಗುವುದರಿಂದ ಜೈಲಿಗೆ ಹೋಗಬೇಕಾಗುತ್ತದೆ ಎಂದು ಸಿಎಂ ಹಿಮಂತ ಹೇಳಿದ್ದರು.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡ