Kanhaiya Lal Murder Udaipur : ಉದಯಪುರ ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣದ ಆರೋಪಿ ರಿಯಾಜ್ ಅಟ್ಟಾರಿ ಬಗ್ಗೆ ಭಾರೀ ಮಾಹಿತಿಯೊಂದು ಬಹಿರಂಗವಾಗಿದೆ. ಅಟ್ಟಾರಿಯ ಬೈಕ್ ನಂಬರ್ ಆರ್ ಜೆ 27 ಎಎಸ್ 2611 ಆಗಿದ್ದು, ಇದು ಮುಂಬೈ ದಾಳಿಗೆ ಸಂಬಂಧಿಸಿದ್ದು, ಇದನ್ನು ಆರೋಪಿಗಳು 5000 ರೂಪಾಯಿ ಕೊಟ್ಟು ಖರೀದಿಸಿದ್ದಾರೆ ಎಂಬ ಘಾಕಾರಿ ಮಾಹಿತಿ ಹೊರಬಿದ್ದಿದೆ.


COMMERCIAL BREAK
SCROLL TO CONTINUE READING

ಕನ್ಹಯ್ಯಾಲಾಲ್ ಹತ್ಯೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್


ಕನ್ಹಯ್ಯಾಲಾಲ್ ಹತ್ಯೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆರೋಪಿಗಳು 2611 ನಂಬರ್ ಬೈಕ್ ನಲ್ಲಿ ಬಂದು ಕೊಲೆ ಮಾಡಿ ಪರಾರಿಯಾಗಿದ್ದರು. ಅಷ್ಟೇ ಅಲ್ಲ ಗೌಸ್ ಮೊಹಮ್ಮದ್ ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದ. ಆರೋಪಿ ರಿಯಾಜ್ ಐಸಿಸ್ ನ ಸ್ಲೀಪರ್ ಸೆಲ್ ನೊಂದಿಗೆ ನಂಟು ಹೊಂದಿರುವುದು ಬಯಲಿಗೆ ಬಂದಿದೆ. ರಿಯಾಜ್ ಸುಫಾ ಭಯೋತ್ಪಾದಕ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ. ಈತ ಹಲವು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ : Nupur Sharma Row : ನೂಪುರ್ ಶರ್ಮಾ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್!


ಕೊಲೆಗಾರರ ​​ಸಂಪರ್ಕಿತರ ಬಗ್ಗೆ ಮಾಹಿತಿ ಕಲೆ!


ಸಧ್ಯ ಆರೋಪಿಗಳನ್ನು 14 ದಿನಗಳ ಕಾಲ ಕಸ್ಟಡಿಗೆ ಕಳುಹಿಸಲಾಗಿದೆ ಮತ್ತು NIA ಇದೀಗ ಹಂತಕರ ಎಲ್ಲಾ ಸಂಪರ್ಕಿತರ ಬಗ್ಗೆ ಒಂದೊಂದಾಗಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪಾಕಿಸ್ತಾನದ ಸಂಪರ್ಕವು ಮುನ್ನೆಲೆಗೆ ಬಂದ ನಂತರ, ಉದಯಪುರದಲ್ಲಿ ನಡೆದ ಕೊಲೆ ಘಟನೆಯು ಚೆನ್ನಾಗಿ ಯೋಚಿಸಿ ಮಾಡಿದ ಪಿತೂರಿಯಾಗಿದೆ. ರಿಯಾಜ್ ಮತ್ತು ಗೌಸ್ ಇಬ್ಬರೂ ತಮ್ಮ ಪ್ಲಾನ್ ಮಾಡಿಯೆ ಈ ಕೃತ್ಯವೆಸಗಿದ್ದಾರೆ ಎಂದು ತಿಳಿಸಿದ್ದಾರೆ.


ಇಬ್ಬರು ಆರೋಪಿಗಳ ಗುರಿ ಕನ್ಹಯ್ಯಾ ಮಾತ್ರವಲ್ಲದೆ ಇನ್ನೊಬ್ಬ ವ್ಯಕ್ತಿಯೂ ಇದ್ದಾನೆ ಎಂಬುದು ಎನ್‌ಐಎ ವಿಚಾರಣೆಯಿಂದ ತಿಳಿದುಬಂದಿದೆ. ಆರೋಪಿಗಳು ಇನ್ನೂ ಬಂಧನದಲ್ಲಿದ್ದಾರೆ. ಹಾಗೆ, ಅವರ ಕುಟುಂಬವು ನೇಣು ಹಾಕುವಂತೆ ಒತ್ತಾಯಿಸುತ್ತಿದ್ದಾರೆ. ಹಂತಕರಿಗೆ ಆದಷ್ಟು ಬೇಗ ಶಿಕ್ಷೆಯಾಗುವ ಬಗ್ಗೆಯೂ ಸರ್ಕಾರ ನಿರ್ಧರಿಸಲಿದೆ.


ಕನ್ಹಯ್ಯಾಲಾಲ್ ಹತ್ಯೆ ಪ್ರಕರಣದಲ್ಲಿ ಮತ್ತಿಬ್ಬರ ಬಂಧನ


ಉದಯಪುರದಲ್ಲಿ ಟೈಲರ್ ಕನ್ಹಯ್ಯಾಲಾಲ್ ಹತ್ಯೆಗೆ ಸಂಚು ರೂಪಿಸಿದ್ದ ಇಬ್ಬರನ್ನು ಗುರುವಾರ ರಾತ್ರಿ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದಾರೆ. ಉದಯಪುರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ಮಾತನಾಡಿ, “ಇಬ್ಬರನ್ನು ಬಂಧಿಸಲಾಗಿದೆ. ಇವರಿಬ್ಬರೂ ಟೈಲರ್ ಕನ್ಹಯ್ಯಾಲಾಲ್ ಹತ್ಯೆಯ ಸಂಚಿನಲ್ಲಿ ಭಾಗಿಗಳಾಗಿದ್ದು, ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.ಬಂಧಿತ ಆರೋಪಿಗಳನ್ನು ಮೊಹ್ಸಿನ್ ಮತ್ತು ಆಸಿಫ್ ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. 


ಇದನ್ನೂ ಓದಿ : Udaipur Murder Case : ISIS ನ ವಿಡಿಯೋ ನೋಡಿ ಕನ್ಹಯ್ಯಾ ಲಾಲ್ ಕೊಂದ ಪಾಪಿಗಳು!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.