UGC Big Announcement: ಇನ್ಮುಂದೆ ಏಕಕಾಲಕ್ಕೆ ವಿದ್ಯಾರ್ಥಿಗಳು ಎರಡೆರಡು ಫುಲ್ ಟೈಮ್ ಡಿಗ್ರಿ ಕೋರ್ಸ್ ಗಳ ಅಧ್ಯಯನ ನಡೆಸಬಹುದು
UGC Big Announcement: ಈ ಕುರಿತು ಮಾಹಿತಿ ನೀಡಿರುವ UGC ಅಧ್ಯಕ್ಷ ಜಗದೇಶ್ ಕುಮಾರ್, ಹೊಸ ನಿರ್ಣಯದ ಅಡಿ ಓರ್ವ ವಿದ್ಯಾರ್ಥಿ ಫಿಸಿಕಲ್ ಮೋಡ್ ನಲ್ಲಿ ಎರಡು ಫುಲ್ ಟೈಮ್ ಕೋರ್ಸ್ ಗಳ ಅಧ್ಯಯನ ನಡೆಸಬಹುದು ಎಂದು ಹೇಳಿದ್ದಾರೆ.
ನವದೆಹಲಿ: ವಿಶ್ವವಿದ್ಯಾನಿಲಯ ಅನುದಾನ ಆಯೋಗ (UGC) ಮಂಗಳವಾರ ಮಹತ್ವದ ಘೋಷಣೆಯೊಂದನ್ನು ಮಾಡಿದೆ. ವಿದ್ಯಾರ್ಥಿಗಳು ಇನ್ಮುಂದೆ ಏಕಕಾಲದಲ್ಲಿ ಎರಡು ಪೂರ್ಣ ಸಮಯದ ಪದವಿ ಕೋರ್ಸ್‌ಗಳ ಅಧ್ಯಯನ ನಡೆಸಲು ಸಾಧಯ್ವಾಗಲಿದೆ ಎಂದು ಯುಜಿಸಿ ಹೇಳಿಕೆ ನೀಡಿದೆ, ಅದೂ ಸಹ ಭೌತಿಕ ಕ್ರಮದಲ್ಲಿ. ಈ ನಿಟ್ಟಿನಲ್ಲಿ ಆಯೋಗವು ಮಾರ್ಗಸೂಚಿಗಳನ್ನು ಸಿದ್ಧಪಡಿಸಿದ್ದು, ನಾಳೆ ಅಂದರೆ ಏಪ್ರಿಲ್ 13ರಂದು ಯುಜಿಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು ಎನ್ನಲಾಗಿದೆ. ಈ ಹಿಂದೆ ಯುಜಿಸಿಯು ವಿದ್ಯಾರ್ಥಿಗಳಿಗೆ ಎರಡು ಪೂರ್ಣಾವಧಿ ಕಾರ್ಯಕ್ರಮಗಳಲ್ಲಿ ಏಕಕಾಲದಲ್ಲಿ ಭಾಗವಹಿಸಲು ಅವಕಾಶ ನೀಡುತ್ತಿರಲಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ.
ನಿಯಮಗಳಲ್ಲಿ ಹಲವು ಬದಲಾವಣೆಗಳು
ಮಾರ್ಗಸೂಚಿಗಳು ದೇಶದಾದ್ಯಂತ ಲಭ್ಯವಿರುವ ಎಲ್ಲಾ ಕಾರ್ಯಕ್ರಮಗಳಿಗೆ ಅನ್ವಯಿಸಲಿವೆ. ವಿದ್ಯಾರ್ಥಿಗಳು ಡಿಪ್ಲೊಮಾ ಪ್ರೋಗ್ರಾಂ ಮತ್ತು ಪದವಿಪೂರ್ವ (UG) ಪದವಿ, ಎರಡು ಸ್ನಾತಕೋತ್ತರ ಕಾರ್ಯಕ್ರಮಗಳು ಅಥವಾ ಎರಡು ಪದವಿ ಕಾರ್ಯಕ್ರಮಗಳ ಸಂಯೋಜನೆಯ ಆಯ್ಕೆ ಮಾಡಬಹುದು. ಒಬ್ಬ ವಿದ್ಯಾರ್ಥಿಯು ಸ್ನಾತಕೋತ್ತರ (UG) ಪದವಿಯನ್ನು ಪಡೆಯಲು ಅರ್ಹರಾಗಿದ್ದರೆ ಮತ್ತು ಬೇರೆ ಡೊಮೇನ್‌ನಲ್ಲಿ ಸ್ನಾತಕೋತ್ತರ ಪದವಿಗೆ ಸೇರಲು ಬಯಸಿದರೆ, ಅವನು/ಅವಳು ಏಕಕಾಲದಲ್ಲಿ UG ಮತ್ತು PG ಪದವಿಗಳನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ಆದರೆ, ಎರಡೂ ಕೋರ್ಸ್‌ಗಳಿಗೆ ತರಗತಿ ಸಮಯ ವಿಭಿನ್ನವಾಗಿರಬೇಕು ಎಂದು ಮಾರ್ಗಸೂಚಿಗಳಲ್ಲಿ ಸ್ಪಷ್ಟಪಡಿಸಲಾಗಿದೆ.
ಇದನ್ನೂ ಓದಿ-Hanuman Jayanti 2022: ಶ್ರೀಆಂಜನೇಯನ ಭಕ್ತಿಯಲ್ಲಿ ಲೀನನಾದ ಮುಸ್ಲಿಂ ವ್ಯಕ್ತಿಯ ಶ್ರದ್ಧೆಗೆ ಮಾರುಹೋದ ಜನ
ಯುಜಿಸಿ ಅಧ್ಯಕ್ಷರು ಹೇಳಿದ್ದಾದರು ಏನು?
ಈ ಕುರಿತು ಮಾತನಾಡಿರುವ ಯುಜಿಸಿ ಅಧ್ಯಕ್ಷ ಮಾಮಿದಾಳ ಜಗದೇಶ್ ಕುಮಾರ್, ಕಳೆದ ಮಾರ್ಚ್ 31 ರಂದು ನಡೆದ ಆಯೋಗದ ಸಭೆಯಲ್ಲಿ ಮಾರ್ಗಸೂಚಿಗಳನ್ನು ನೀಡಲು ನಿರ್ಧರಿಸಲಾಗಿದೆ. ಒಬ್ಬ ವಿದ್ಯಾರ್ಥಿಯು ಭೌತಿಕ ಕ್ರಮದಲ್ಲಿ ಎರಡು ಪೂರ್ಣಾವಧಿಯ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮುಂದುವರಿಸಬಹುದು ಎಂದು ಅವರು ಹೇಳಿದ್ದಾರೆ. ಅಂತಹ ಸಂದರ್ಭಗಳಲ್ಲಿ ಒಂದು ಕಾರ್ಯಕ್ರಮದ ತರಗತಿಯ ಸಮಯವು ಇನ್ನೊಂದು ಕೋರ್ಸ್‌ನ ತರಗತಿಯ ಸಮಯದೊಂದಿಗೆ ಕ್ಲಾಶ್ ಆಗಬಾರದು ಎಂದು ಅವರು ಹೇಳಿದ್ದಾರೆ. ಇಂತಹ ಕಾರ್ಯಕ್ರಮಗಳನ್ನು ನೀಡಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯ ವಿಶ್ವವಿದ್ಯಾಲಯಗಳಿಗೆ ಇರಲಿದೆ. ಮಾರ್ಗದರ್ಶನಗಳು ಉಪನ್ಯಾಸ ಆಧಾರಿತ ಕೋರ್ಸ್‌ಗಳಿಗೆ ಮಾತ್ರ ಅನ್ವಯಿಸುತ್ತವೆ, ಇದರಲ್ಲಿ ಪದವಿಪೂರ್ವ, ಸ್ನಾತಕೋತ್ತರ ಮತ್ತು ಡಿಪ್ಲೊಮಾ ಕಾರ್ಯಕ್ರಮಗಳು ಶಾಮೀಲಾಗಿದ್ದು, ಎಂಫಿಲ್ ಮತ್ತು ಪಿಎಚ್‌ಡಿಯನ್ನು ಈ ಯೋಜನೆಯಲ್ಲಿ ಸೇರಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ.
ಆನ್‌ಲೈನ್ ಪದವಿಗಾಗಿ ಶೀಘ್ರದಲ್ಲೇ ಸೂಚನೆಗಳನ್ನು ನೀಡಲಾಗುವುದು
ಎಲ್ಲಾ ಶೈಕ್ಷಣಿಕ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಳ್ಳಲು ಸಾಧ್ಯವಾಗುವಂತೆ ಕನಿಷ್ಠ ಹಾಜರಾತಿ ಅಗತ್ಯವಿರುವುದರಿಂದ, ವಿಶ್ವವಿದ್ಯಾಲಯಗಳು ಈ ಕೋರ್ಸ್‌ಗಳಿಗೆ ಹಾಜರಾತಿ ಮಾನದಂಡಗಳನ್ನು ರೂಪಿಸಬೇಕಾಗುತ್ತದೆ. ಯುಜಿಸಿ ಯಾವುದೇ ಹಾಜರಾತಿ ಅವಶ್ಯಕತೆಗಳನ್ನು ಕಡ್ಡಾಯಗೊಳಿಸುವುದಿಲ್ಲ ಮತ್ತು ಇವು ವಿಶ್ವವಿದ್ಯಾಲಯಗಳ ನೀತಿಗಳಾಗಿವೆ ಎಂದು ಜಗದೇಶ್ ಕುಮಾರ್ ಹೇಳಿದ್ದಾರೆ. ಅನೇಕ ವಿಶ್ವವಿದ್ಯಾಲಯಗಳು ಇದೀಗ ಆಫ್‌ಲೈನ್ ಮತ್ತು ಆನ್‌ಲೈನ್ ಕಾರ್ಯಕ್ರಮಗಳನ್ನು ನೀಡುತ್ತಿವೆ ಎಂದು ಅವರು ಹೇಳಿದ್ದಾರೆ. UGC ಕೆಲವು ವಾರಗಳಲ್ಲಿ ಆನ್‌ಲೈನ್ ಶಿಕ್ಷಣಕ್ಕಾಗಿ ಪರಿಷ್ಕೃತ ನಿಯಮಗಳನ್ನು ಹೊರಡಿಸಲಿದೆ ಮತ್ತು ಅದರ ನಂತರ ಭಾರತದಲ್ಲಿನ ಅನೇಕ ಉನ್ನತ ಗುಣಮಟ್ಟದ ಸಂಸ್ಥೆಗಳು ಆನ್‌ಲೈನ್ ಪದವಿಗಳನ್ನು ನೀಡಲು ಆರಂಭಿಸಲಿವೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.