UGC Big Announcement - ದೇಶದ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ (Central University) ಬೋಧನೆ ಮಾಡುವ ಕನಸು ಕಾಣುತ್ತಿರುವ ಯುವಕರಿಗೆ ನೆಮ್ಮದಿಯ ಸುದ್ದಿಯೊಂದು ಸಿಕ್ಕಿದೆ. ಇನ್ನು ಮುಂದೆ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಬೋಧನೆಗೆ PhD Degree ಕಡ್ಡಾಯವಾಗಿಲ್ಲ. ಹೌದು, ವಿಶ್ವವಿದ್ಯಾನಿಲಯ ಅನುದಾನ ಆಯೋಗ (UGC) ಪಿಎಚ್‌ಡಿ (PhD) ಅಗತ್ಯವನ್ನು ತೆಗೆದುಹಾಕಲು ನಿರ್ಧರಿಸಿದೆ. ಯುಜಿಸಿಯ ಈ ನಿರ್ಧಾರದಿಂದ ಸಂಬಂಧಿಸಿದ ವಿಷಯದ ತಜ್ಞರು ವಿಶ್ವವಿದ್ಯಾಲಯದಲ್ಲಿ ಪಾಠ ಹೇಳಿಕೊಡಲು ಸಾಧ್ಯವಾಗಲಿದೆ. ಅಷ್ಟೇ ಅಲ್ಲ ವಿದ್ಯಾರ್ಥಿಗಳೂ ಕೂಡ ಇದರ ಪ್ರಯೋಜನ ಪಡೆಯಲಿದ್ದಾರೆ.

COMMERCIAL BREAK
SCROLL TO CONTINUE READING

ವಾಸ್ತವದಲ್ಲಿ ಹಲವು ಹೊಸ ಮತ್ತು ವಿಶೇಷ ಹುದ್ದೆಗಳನ್ನು ಸೃಷ್ಟಿಸಲು ಯುಜಿಸಿ ಮುಂದಾಗಿದೆ. ಈ ಹುದ್ದೆಗಳಿಗೆ ನೇಮಕಾತಿಗೆ PhD ಅಗತ್ಯವಿರುವುದಿಲ್ಲ. ಆಂಗ್ಲ ಮಾಧ್ಯಮದ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ, ಈ ಹುದ್ದೆಗಳು ಪ್ರಾಕ್ಟೀಸ್ ಪ್ರೊಫೆಸರ್ ಮತ್ತು ಅಸೋಸಿಯೇಟ್ ಪ್ರೊಫೆಸರ್ ಆಫ್ ಪ್ರಾಕ್ಟೀಸ್ ಆಗಿರಬಹುದು. ಈ ಕುರಿತು ಮಾತನಾಡಿರುವ ಯುಜಿಸಿ ಅಧ್ಯಕ್ಷ ಎಂ.ಜಗದೇಶ್‌ಕುಮಾರ್‌, ‘ಬೋಧನೆ ಮಾಡಲು ಬಯಸುವ ಹಲವು ತಜ್ಞರಿದ್ದಾರೆ. ದೊಡ್ಡ ಯೋಜನೆಗಳನ್ನು ಜಾರಿಗೆ ತಂದವರು ಮತ್ತು ನೆಲಮಟ್ಟದ ಕೆಲಸವನ್ನು ಮಾಡಿದ ಅನುಭವವನ್ನು ಹೊಂದಿರುವವರು ಮತ್ತು ನೃತ್ಯಗಾರ ಅಥವಾ ಸಂಗೀತಗಾರನಾಗಿರಬಹುದು' ಎಂದಿದ್ದಾರೆ.


'ಆದರೆ ಈಗಿರುವ ನಿಯಮಗಳ ಪ್ರಕಾರ ಅವರನ್ನು ನೇಮಕ ಮಾಡಲು ಸಾಧ್ಯವಿಲ್ಲ ಎಂದು ಜಗದೇಶ್ ಕುಮಾರ್ ಹೇಳಿದ್ದಾರೆ. ಆದ್ದರಿಂದ PhD ಪದವಿ ಅನಿವಾರ್ಯವಲ್ಲದ ವಿಶೇಷ ಹುದ್ದೆಗಳನ್ನು ರಚಿಸಲು ನಿರ್ಧರಿಸಲಾಗಿದೆ. ಇದರಲ್ಲಿ ತಜ್ಞರು ತಮ್ಮ ಅನುಭವವನ್ನು ಮಾತ್ರ ತೋರಿಸಬೇಕು' ಎಂದು ಜಗದೆಶ್ ಕುಮಾರ್ ಹೇಳಿದ್ದಾರೆ.


ಇದನ್ನೂ ಓದಿ-Pakistan: ಭಾರತದ ರಫೇಲ್ ಎದುರಿಸಲು ಚೀನಾದಿಂದ J-10C ಖರೀದಿಸಿದ ಪಾಕಿಸ್ತಾನ!

ಈ ಕುರಿತು ಯುಜಿಸಿ ಅಧ್ಯಕ್ಷರೊಂದಿಗೆ ಕೇಂದ್ರೀಯ ವಿಶ್ವವಿದ್ಯಾಲಯಗಳ ಉಪಕುಲಪತಿಗಳ (VC) ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಚರ್ಚಿಸಲಾಗಿದೆ. ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಸಮಿತಿ ರಚಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಅನುಷ್ಠಾನದಲ್ಲಿ ಇತರ ವಿಷಯಗಳ ಜೊತೆಗೆ ಪ್ರಗತಿಯನ್ನು ಚರ್ಚಿಸಲು ಈ ಸಭೆಯನ್ನು ಕರೆಯಲಾಗಿದೆ.


ಇದನ್ನೂ ಓದಿ-Omicron ಹಾಗೂ Delta ಸೇರಿ ಹುಟ್ಟಿಕೊಂಡಿದೆ ಹೊಸ ವೈರಸ್, ಮೊದಲಿನಿಂದಲೇ ಭೀತಿ ಇತ್ತು ಎಂದ WHO


ಇದೆಲ್ಲದರ ಹೊರತಾಗಿ, ಶಿಕ್ಷಕರ ನೇಮಕಾತಿಯ ಕುರಿತು ಸಂಪೂರ್ಣ ಮಾಹಿತಿ  ನೀಡಲು ಪೋರ್ಟಲ್ ಅನ್ನು ಪ್ರಾರಂಭಿಸಲು ಯುಜಿಸಿ ಯೋಜಿಸಿದೆ. ಇದರಿಂದ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬವಾಗುವುದಿಲ್ಲ. ಶಿಕ್ಷಣ ಸಚಿವಾಲಯದ ಪ್ರಕಾರ, ಡಿಸೆಂಬರ್ 2021 ರ ಹೊತ್ತಿಗೆ, ಕೇಂದ್ರೀಯ ಅನುದಾನಿತ ಸಂಸ್ಥೆಗಳಲ್ಲಿ 10,000 ಕ್ಕೂ ಹೆಚ್ಚು ಶೈಕ್ಷಣಿಕ ಹುದ್ದೆಗಳು ಖಾಲಿಯಾಗಿವೆ.


ಇದನ್ನೂ ಓದಿ-Apple, Realme, Samsung, Xiaomi ಫೋನ್‌ಗಳ ಮೇಲೆ ಫ್ಲಿಪ್‌ಕಾರ್ಟ್‌ ಭರ್ಜರಿ ಡಿಸ್ಕೌಂಟ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.