Pakistan: ಭಾರತದ ರಫೇಲ್ ಎದುರಿಸಲು ಚೀನಾದಿಂದ J-10C ಖರೀದಿಸಿದ ಪಾಕಿಸ್ತಾನ!

Pakistan Buy J-10C Fighter Jets From China: ಯಾವುದೇ ದೇಶವು ಪಾಕಿಸ್ತಾನದ ಮೇಲೆ ದಾಳಿ ಮಾಡುವ ಮೊದಲು ಎರಡು ಬಾರಿ ಯೋಚಿಸಬೇಕಾಗುತ್ತದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. J-10C ಫೈಟರ್ ಜೆಟ್ ಅನ್ನು ಹೊಂದಿರುವುದು ಪಾಕಿಸ್ತಾನದ ವಾಯುಪಡೆಯನ್ನು ಬಲಪಡಿಸುತ್ತದೆ.

Written by - Yashaswini V | Last Updated : Mar 12, 2022, 01:19 PM IST
  • ಭಾರತದ ಹೆಸರನ್ನು ಉಲ್ಲೇಖಿಸದೆ ಭಾರತವನ್ನು ಗುರಿಯಾಗಿಸಿದ ಪಾಕ್ ಪ್ರಧಾನಿ
  • ಪಾಕಿಸ್ತಾನ ವಾಯುಪಡೆಯ ಬಲದಲ್ಲಿ ಹೆಚ್ಚಳ
  • ಯಾವುದೇ ದೇಶವು ಪಾಕಿಸ್ತಾನದ ಮೇಲೆ ದಾಳಿ ಮಾಡುವ ಮೊದಲು ಎರಡು ಬಾರಿ ಯೋಚಿಸಬೇಕಾಗುತ್ತದೆ ಎಂದ ಪಾಕ್ ಪ್ರಧಾನಿ
Pakistan: ಭಾರತದ ರಫೇಲ್ ಎದುರಿಸಲು ಚೀನಾದಿಂದ  J-10C ಖರೀದಿಸಿದ ಪಾಕಿಸ್ತಾನ! title=
Pakistan Buy J-10C Fighter Jets From China

Pakistan Buy J-10C Fighter Jets From China: ಇಸ್ಲಾಮಾಬಾದ್: ಪಾಕಿಸ್ತಾನವು ತನ್ನ  ಮಿಲಿಟರಿ ಶಕ್ತಿಯನ್ನು ಬಲಪಡಿಸಲು ವಾಯುಪಡೆಗೆ ಜೆ-10 ಸಿ ಫೈಟರ್ ಜೆಟ್ ಅನ್ನು ಸೇರಿಸಿಕೊಂಡಿದೆ. ಭಾರತದ ಯುದ್ಧ ವಿಮಾನ ರಫೇಲ್ ಅನ್ನು ಎದುರಿಸಲು ಪಾಕಿಸ್ತಾನ ಚೀನಾದಿಂದ ಜೆ-10ಸಿ ಯುದ್ಧ ವಿಮಾನಗಳನ್ನು ಖರೀದಿಸಿದೆ ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನದ ವಾಯುಪಡೆಯಲ್ಲಿ ಸೇರ್ಪಡೆಗೊಂಡ J-10C:
ಪಾಕಿಸ್ತಾನ ಚೀನಾದಿಂದ ಜೆ-10 ಸಿ ಫೈಟರ್ ಜೆಟ್ (J-10C Fighter Jet) ಅನ್ನು ಖರೀದಿಸಿದೆ. ಆದರೆ, ಪಾಕಿಸ್ತಾನ ಚೀನಾದಿಂದ ಎಷ್ಟು ಯುದ್ದ ವಿಮಾನಗಳನ್ನು ಖರೀದಿಸಿದೆ ಎಂದು ತಿಳಿದುಬಂದಿಲ್ಲ. ಶುಕ್ರವಾರ, J-10C ಫೈಟರ್ ಜೆಟ್ ಪಾಕಿಸ್ತಾನ ವಾಯುಪಡೆಗೆ ಸೇರ್ಪಡೆಗೊಳ್ಳುವ ಸಂದರ್ಭದಲ್ಲಿ  ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಪಂಜಾಬ್‌ನ ಅಟೋಕ್ ಜಿಲ್ಲೆಯ ಪಾಕಿಸ್ತಾನದ ವಾಯುಪಡೆ ನೆಲೆ ಮಿನ್ಹಾಸ್ ಕಮ್ರಾದಲ್ಲಿ ನಡೆದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಇದನ್ನೂ ಓದಿ- ಪಾಕಿಸ್ತಾನದತ್ತ ಸಿಡಿಯಿತಾ ಭಾರತದ ಕ್ಷಿಪಣಿ..! ವಾಸ್ತವ ಏನು ?

ಭಾರತದ ಹೆಸರನ್ನು ಉಲ್ಲೇಖಿಸದೆ ಭಾರತವನ್ನು ಗುರಿಯಾಗಿಸಿದ ಪಾಕ್ ಪ್ರಧಾನಿ :
ಈ ಸಂದರ್ಭದಲ್ಲಿ ಭಾರತದ ಹೆಸರನ್ನು ಉಲ್ಲೇಖಿಸದೆ ಭಾರತವನ್ನು ಗುರಿಯಾಗಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ (Imran Khan),  ಭಾರತದ ರಫೇಲ್ ಯುದ್ಧ ವಿಮಾನಗಳ ಖರೀದಿಯನ್ನು ಸೂಚಿಸುತ್ತಾ, "ದುರದೃಷ್ಟವಶಾತ್, ಈ ಪ್ರದೇಶದಲ್ಲಿ ಶಾಂತಿ ಕದಡಲು ಪ್ರಯತ್ನಿಸಲಾಗುತ್ತಿದೆ ಮತ್ತು ಇದನ್ನು ಸಮರ್ಥವಾಗಿ ಎದುರಿಸಲು ನಮ್ಮ ರಕ್ಷಣಾ ವ್ಯವಸ್ಥೆಯಲ್ಲಿ ಇಂದು ದೊಡ್ಡ ಹೆಜ್ಜೆ ಇಡಲಾಗಿದೆ" ಎಂದು ಹೇಳಿದರು. 

ಚೀನಾ 8 ತಿಂಗಳಲ್ಲಿ ಯುದ್ಧ ವಿಮಾನಗಳನ್ನು ತಯಾರಿಸಿದೆ:
ಇದೇ ವೇಳೆ J-10C ಫೈಟರ್ ಜೆಟ್ (Fighter Jet) ಖರೀದಿಯನ್ನು ಸುಮಾರು 40 ವರ್ಷಗಳ ನಂತರ ಇದು ಪಾಕಿಸ್ತಾನದ ಪ್ರಮುಖ ಸಾಧನೆ ಎಂದು ಬಣ್ಣಿಸಿದ ಪಾಕಿಸ್ಥಾನದ ಪ್ರಧಾನ ಮಂತ್ರಿ, ಸುಮಾರು ಎಂಟು ತಿಂಗಳ ಕಡಿಮೆ ಅವಧಿಯಲ್ಲಿ ವಿಮಾನವನ್ನು ಒದಗಿಸಿದ್ದಕ್ಕಾಗಿ ಚೀನಾಕ್ಕೆ ಧನ್ಯವಾದ ಅರ್ಪಿಸಿದರು.

ಯಾವುದೇ ಸವಾಲು ಎದುರಿಸಲು ಸೇನೆ ಸಿದ್ಧವಾಗಿದೆ. ಯಾವುದೇ ದೇಶವು ಪಾಕಿಸ್ತಾನದ ಕಡೆಗೆ ಆಕ್ರಮಣಕಾರಿಯಾಗಿ ಚಲಿಸುವ ಮೊದಲು ಎರಡು ಬಾರಿ ಯೋಚಿಸಬೇಕು ಎಂದು ಇಮ್ರಾನ್ ಖಾನ್ ಹೇಳಿದರು. 

ಇದನ್ನೂ ಓದಿ- China: ಸರ್ಕಾರದಲ್ಲಿ No.2 ಸ್ಥಾನದಲ್ಲಿರುವ ಮುಖಂಡ ನಿವೃತ್ತಿಯಾಗುತ್ತಿದ್ದಾರೆ, Jinping ಸ್ಟೇಟಸ್ ಕೂಡ ತಿಳಿದುಕೊಳ್ಳಿ

ಪಾಕಿಸ್ತಾನ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಜಹೀರ್ ಅಹ್ಮದ್ ಬಾಬರ್ ಸಿಧು ಮಾತನಾಡಿ, ವಾಯುಪಡೆಯಲ್ಲಿ ಜೆ-10 ಸಿ ಸೇರ್ಪಡೆಯು ವಾಯುಪಡೆಯ ವೃತ್ತಿಪರ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದರು. 

J-10C 4.5 ನೇ ತಲೆಮಾರಿನ ಯುದ್ಧ ವಿಮಾನವಾಗಿದೆ ಮತ್ತು JF-17 ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ, ಇದು ಚೀನಾ-ಪಾಕ್ ಜಂಟಿಯಾಗಿ ಅಭಿವೃದ್ಧಿಪಡಿಸಿದ ಲಘು ಯುದ್ಧ ವಿಮಾನವಾಗಿದೆ, ಇದನ್ನು ಪ್ರಸ್ತುತ ಪಾಕಿಸ್ತಾನವು ಬಳಸುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News