Aadhaar Cardಗೆ ಸಂಬಂಧಿಸಿದ ನಿಯಮಗಳಲ್ಲಿ ಭಾರಿ ಬದಲಾವಣೆ ಮಾಡಿದ UIDAI
Aadhaar Card Latest Update - Aadhaar Card ವಿವರಗಳನ್ನು ನವೀಕರಿಸುವ ನಿಯಮಗಳಲ್ಲಿ UIDAI ದೊಡ್ಡ ಬದಲಾವಣೆಯನ್ನು ಮಾಡಿದೆ. ಈಗ ಜನರು ಈ ಕೆಲಸವನ್ನು ಬಹಳ ಸುಲಭವಾಗಿ ಮಾಡಲು ಸಾಧ್ಯವಾಗಲಿದೆ.
UIDAI Slot Book Service - ಯಾವುದೇ ವ್ಯಕ್ತಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಮತ್ತು ಸಹಾಯಧನದ ಲಾಭವನ್ನು ಪಡೆಯಲು ಬಯಸಿದರೆ ಅವರು ಮೊದಲು ಆಧಾರ್ ಕಾರ್ಡ್ ಅನ್ನು ಹೊಂದಿರಬೇಕು. ಅಷ್ಟೇ ಅಲ್ಲ, ಇದಕ್ಕಾಗಿ ಅವರ ಆಧಾರ್ ಕಾರ್ಡ್ ಕೂಡ ಅಪ್‌ಡೇಟ್ (Aadhaar Card Update) ಆಗಿರಬೇಕು ಮತ್ತು ಈ ನಿಟ್ಟಿನಲ್ಲಿ ಇದೀಗ UIDAI ಆಧಾರ್ ಕಾರ್ಡ್ ಅನ್ನು ನವೀಕರಿಸಲು ಹೊಸ ಸೇವೆಯನ್ನು ಪ್ರಾರಂಭಿಸಿದೆ, ಇದು ನವೀಕರಿಸುವಾಗ ಬಳಕೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಹುತೇಕ ನಿವಾರಿಸುತ್ತದೆ, ಹಾಗಾದರೆ ಏನಿದು ಹೊಸ ಸೇವೆ ತಿಳಿದುಕೊಳ್ಳೋಣ ಬನ್ನಿ.
ಆಧಾರ್ ಕಾರ್ಡ್ ನವೀಕರಣ ಅಗತ್ಯ
ಆಧಾರ್ ಕಾರ್ಡ್‌ನಲ್ಲಿನ ಮೊಬೈಲ್ ಸಂಖ್ಯೆಯಿಂದ ಮನೆಯ ವಿಳಾಸ ಬದಲಾಯಿಸಲು ಜನರು ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತಿತ್ತು ಮತ್ತು ನವೀಕರಣ ಇಲ್ಲದಿರುವುದರಿಂದ ಸರ್ಕಾರದ ಸೌಲಭ್ಯಗಳ ಪ್ರಯೋಜನ ಜನರಿಗೆ ಸಿಗುತ್ತಿರಲಿಲ್ಲ. ಇದಕ್ಕಾಗಿ ಜನರು ಉದ್ದನೆಯ ಸರತಿಯಲ್ಲಿ ನಿಲ್ಲಬೇಕಾಗುತ್ತಿತ್ತು. ಹಲವಾರು ಬಾರಿ ಸರತಿಯಲ್ಲಿ ಇನ್ತರೂ ಕೂಡ ನಂಬರ್ ಬರುವುದು ಮಾತ್ರ ಸಾಧ್ಯವಾಗುತ್ತಿರಲಿಲ್ಲ. ಆದರೆ ಇದೀಗ UIDAI ಈ ವ್ಯವಸ್ಥೆಯಲ್ಲಿ ಸ್ಲಾಟ್ ಬುಕಿಂಗ್ ನಿಯಮವನ್ನು ಜಾರಿಗೆ ತಂದಿದೆ.
ವಾಸ್ತವದಲ್ಲಿ ಇದೀಗ ನೀವು ಮನೆಯಲ್ಲಿ ಕುಳಿತು ಅಪಾಯಿಂಟ್‌ಮೆಂಟ್ ಅನ್ನು ಬುಕ್ ಮಾಡಬಹುದು ಮತ್ತು ಆಧಾರ್ ಸೇವಾ ಕೇಂದ್ರದಲ್ಲಿ ದೀರ್ಘ ಸರತಿಯಲ್ಲಿ ನಿಲ್ಲುವುದನ್ನು ತಪ್ಪಿಸಬಹುದು. ಈ ಹೊಸ ಸೇವೆಗೆ ಸಂಬಂಧಿಸಿದಂತೆ ಯುಐಡಿಎಐ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದು, ಇನ್ನು ಮುಂದೆ ಜನರು ದೀರ್ಘ ಸರತಿ ಸಾಲಿನಲ್ಲಿ ನಿಲ್ಲದೆ ಸ್ಲಾಟ್ ಬುಕಿಂಗ್ ಮೂಲಕ ತಮ್ಮ ಆಧಾರ್ ಕಾರ್ಡ್ ನವೀಕರಣವನ್ನು ಬುಕ್ ಮಾಡಬಹುದು.
Jaggery Tips: ಬೆಲ್ಲದ ಈ ಉಪಾಯಗಳನ್ನು ಅನುಸರಿಸಿದರೆ, ಹಣಕಾಸಿನ ಮುಗ್ಗಟ್ಟು ತಕ್ಷಣ ದೂರಾಗುತ್ತದೆ
ಆಧಾರ್ ಕಾರ್ ಅಪ್ಡೇಟ್ ಮಾಡಲು ಸ್ಲಾಟ್ ಬುಕ್ ಮಾಡುವುದು ತುಂಬಾ ಸುಲಭವಾಗಿದೆ
>> ಮೊದಲು ನೀವು https://uidai.gov.in/ ಗೆ ಹೋಗಿ. ನಂತರ My Aadhaar ಅನ್ನು ಕ್ಲಿಕ್ ಮಾಡಿ ಮತ್ತು Book a appointmen ಆಯ್ಕೆಯನ್ನು ಆಯ್ದುಕೊಳ್ಳಿ.
>> ಆಧಾರ್ ಸೇವಾ ಕೇಂದ್ರಗಳಲ್ಲಿ ಅಪಾಯಿಂಟ್ಮೆಂಟ್ ಬುಕ್ ಮಾಡಿ ಆಯ್ಕೆ ಮಾಡಿದ ನಂತರ ಡ್ರಾಪ್‌ಡೌನ್‌ನಲ್ಲಿ ನಿಮ್ಮ ನಗರ ಮತ್ತು ಸ್ಥಳವನ್ನು ಆಯ್ಕೆಮಾಡಿ. Proceed to book appointment ಮೇಲೆ ಕ್ಲಿಕ್ ಮಾಡಿ.
>> ಮೊಬೈಲ್ ಸಂಖ್ಯೆಯನ್ನು ನಮೂದಿಸಿ, 'ಹೊಸ ಆಧಾರ್' ಅಥವಾ 'ಆಧಾರ್ ಅಪ್‌ಡೇಟ್' ಟ್ಯಾಬ್ ಕ್ಲಿಕ್ ಮಾಡಿ. ಕ್ಯಾಪ್ಚಾವನ್ನು ನಮೂದಿಸಿ ಮತ್ತು OTP ಅನ್ನು ರಚಿಸಿ ಕ್ಲಿಕ್ ಮಾಡಿ.
>> ಇದರ ನಂತರ OTP ನಿಮಗೆ ಬರುತ್ತದೆ. ಅದನ್ನು ನಮೂದಿಸಿ ಮತ್ತು ಪರಿಶೀಲಿಸು ಕ್ಲಿಕ್ ಮಾಡಿ.
>> ನಿಮ್ಮ ಪುರಾವೆಯೊಂದಿಗೆ ನಿಮ್ಮ ವೈಯಕ್ತಿಕ ವಿವರಗಳು ಮತ್ತು ವಿಳಾಸದ ವಿವರಗಳನ್ನು ನಮೂದಿಸಿ. ಸಮಯದ ಸ್ಲಾಟ್ ಅನ್ನು ಆಯ್ಕೆ ಮಾಡಿ ಮತ್ತು ಮುಂದೆ ಕ್ಲಿಕ್ ಮಾಡಿ ಮತ್ತು ನಿಮ್ಮ ಬುಕಿಂಗ್ ಮಾಡಲಾಗುತ್ತದೆ.
ಇದನ್ನೂ ಓದಿ-ನಿಮಗೂ ಫೇಮಸ್ ಆಗುವ ಬಯಕೆಯೇ? ಈ ಸುಲಭ ಉಪಾಯಗಳನ್ನು ಅನುಸರಿಸಿ ಝಟ್ ಅಂತ ಪ್ರಸಿದ್ಧಿ ಪಡೆಯಿರಿ
ಇಲ್ಲಿ ವಿಶೇಷ ಎಂದರೆ, ಇದರಲ್ಲಿ ನೀವು ಹೊಸ ಆಧಾರ್ ಕಾರ್ಡ್ ಮಾಡಿಸಲು ಕೂಡ ನೋಂದಣಿ ಮಾಡಬಹುದು. ಇದಲ್ಲದೆ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಇ-ಮೇಲ್, ಬಯೋಮೆಟ್ರಿಕ್ ಅಪ್ಡೇಟ್ ಕೂಡ ಮಾಡಬಹುದು ಹಾಗೂ ಇದೀಗ ಈ ಪ್ರಕ್ರಿಯೆ ಮತ್ತಷ್ಟು ಸುಲಭವಾಗಿದೆ.
ಇದನ್ನೂ ಓದಿ-3ನೇ ಮಹಾಯುದ್ಧದ ಮುನ್ಸೂಚನೆಯೇ ಇದು! ಪೂರ್ವ ಯುರೋಪ್ ಗೆ NATO ವತಿಯಿಂದ ಯುದ್ಧ ಸಾಮಗ್ರಿಗಳ ರವಾನೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.