Aadhaar Card Update- ನವದೆಹಲಿ: 12 ಅಂಕಿಗಳನ್ನೊಳಗೊಂಡ ಆಧಾರ್ ಸಂಖ್ಯೆಯು ನಮ್ಮ ಜೀವನದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ. ಆದರೆ, ಹಲವು ಜನರು ಈ ಸಂಖ್ಯೆಯನ್ನು ತಪ್ಪಾಗಿ ಬಳಸುತ್ತಾರೆ. ಇದರಿಂದ ಅವರು ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ವೈಯಕ್ತಿಕ ಆರ್ಥಿಕ ಕೆಲಸಗಳಿಗೆ ಆಧಾರ್ ಅನ್ನು ಬಳಸಲಾಗುತ್ತಿದೆ. ಆದಾಯ ತೆರಿಗೆ ರಿಟರ್ನ್ ತುಂಬಲು ಆಧಾರ್ ಸಂಖ್ಯೆಯನ್ನು ಹೊಂದಿರುವುದು ಅನಿವಾರ್ಯ. ಆಧಾರ್‌ನಿಂದ ವಂಚನೆಗಳ ಸಂಖ್ಯೆ ವೇಗವಾಗಿ ಹೆಚ್ಚಾಗಲು ಇದು ಒಂದು ಕಾರಣ.


COMMERCIAL BREAK
SCROLL TO CONTINUE READING

ಇದನ್ನು ಓದಿ- mAadhaar Appನಲ್ಲಿ ಹೆಚ್ಚಿನ ಸೇವೆ ಪಡೆಯುವುದು ಹೇಗೆ ಎಂದು ತಿಳಿಯಿರಿ


UIDAI ಜಾರಿಗೊಳಿಸಿದೆ ಈ ಸಲಹೆ
ವಿಶಿಷ್ಠ ಗುರುತು ಚೀಟಿ ಪ್ರಾಧಿಕಾರ (UIDAI), ಆಧಾರ್ ಸಂಖ್ಯೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳದಂತೆ ಸಲಹೆ ನೀಡಿದೆ. ಆಧಾರ್ ಕಾರ್ಡ್ ಒಂದು ಮಹತ್ವದ ದಾಖಲೆಯಾಗಿದ್ದು, ಬಳಕೆದಾರರು ತಮ್ಮ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಮಾಹಿತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಬಾರದು ಎಂದು ಪ್ರಾಧಿಕಾರ ಸಲಹೆ ನೀಡಿದೆ. ಈ ಕುರಿತು ತನ್ನ ಟ್ವಿಟ್ಟರ್ ಖಾತೆಯಲ್ಲಿ ಅಲರ್ಟ್ ಜಾರಿಗೊಳಿಸಿರುವ ಪ್ರಾಧಿಕಾರ, ಸಾಮಾಜಿಕ ಮಾಧ್ಯಮಗಳಂತಹ ಸಾರ್ವಜನಿಕ ವೇದಿಕೆಗಳಲ್ಲಿ ಬಳಕೆದಾರರು ತಮ್ಮ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ಹೇಳಿದೆ. ಆಧಾರ್ (Aadhaar Card) ಗೆ ಸಂಬಂಧಿಸಿದ ಸಮಸ್ಯೆಗಳಿಗಾಗಿ ಬಳಕೆದಾರರು ತಮ್ಮ ವೈಯಕ್ತಿಕ ಇನ್ ಬಾಕ್ಸ್ ಮಾತ್ರ ಬಳಸಬೇಕು ಎಂದು ಪ್ರಾಧಿಕಾರ ಹೇಳಿದೆ.


ಇದನ್ನು ಓದಿ-Big Aadhaar card update! ನಿಮ್ಮ ಮಾಹಿತಿಯನ್ನು ಆನ್ ಲೈನ್ ನಲ್ಲಿಯೇ ಬದಲಾಯಿಸಬಹುದು...!


ಆಧಾರ್ ಕಾರ್ಡ್ ಅನ್ನು ಮೊಬೈಲ್ ಜೊತೆಗೆ ಲಿಂಕ್ ಮಾಡಿ
UIDAI ವತಿಯಿಂದ ನೀಡಲಾಗಿರುವ ಮಾಹಿತಿಯ ಪ್ರಕಾರ ಆಧಾರ್ ಗೆ ಸಂಬಂಧಿಸಿದ ಆನ್ಲೈನ್ ಸೇವೆಗಳನ್ನು ಪ್ರಮಾಣೀಕರಿಸಲು ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. ಅದಲ್ಲದೆ ಎಲ್ಲ ಮಾಹಿತಿಗಳನ್ನು SMS ಹಾಗೂ ಇ-ಮೇಲ್ ಗಳ ಮೂಲಕ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಇದರ ಲಾಭ ಪಡೆಯಲು ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕು. ಅಲ್ಲಿಯೇ ಕಾರ್ಡ್ ಧಾರಕರು ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ಮಾಹಿತಿಯನ್ನು ಅಪ್ಡೇಟ್ ಮಾಡಿಸಬಹುದು. ಆಧಾರ್ ಕಾರ್ಡ್ ವತಿಯಿಂದ ನೀಡಲಾಗಿರುವ ಮಾಹಿತಿಯ ಅನುಸಾರ ಬಳಕೆದಾರರು ಇದೀಗ ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ತಮ್ಮ ಆಧಾರ್ ಕಾರ್ಡ್ ನಲ್ಲಿನ ದತ್ತಾಂಶಗಳನ್ನು ಅಪ್ಡೇಟ್ ಮಾಡಬಹುದಾಗಿದೆ. ಮನೆಯಲ್ಲಿಯೇ ಕುಳಿತು ನಿಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ ಹಾಗೂ ಲಿಂಗ ಇತ್ಯಾದಿ ಮಾಹಿತಿಗಳನ್ನು ಅಪ್ಡೇಟ್ ಮಾಡಬಹುದು.


ಇದನ್ನು ಓದಿ- Aadhaar ಮೂಲಕ ನಿಮಿಷಗಳಲ್ಲಿ ಉಚಿತವಾಗಿ ಪಡೆಯಿರಿ PAN Card


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.