ನವದೆಹಲಿ: ಆಧಾರ್ ಮತ್ತು ಆಧಾರ್ ನೊಂದಿಗೆ ಲಿಂಕ್ ಮಾಡಬೇಕಾದ ಸೇವೆಗಳ ಕುರಿತು ಇಲ್ಲಿಯವರೆಗೆ ಗೊಂದಲಗಳೇ ಇವೆ. ಆಧಾರ್ ಅನ್ನು ಯಾವಾಗ ಲಿಂಕ್ ಮಾಡಬೇಕು? ಆಧಾರ್ ಸಂಖ್ಯೆ ಇಲ್ಲದಿದ್ದರೆ ಯಾವ ಸೇವೆಗಳಿಂದ ನಾವು ವಂಚಿತರಾಗುತ್ತೇವೆ ಎಂಬ ಕಳವಳ ಸಹ ಮನೆಮಾಡಿದೆ. ಆಧಾರ್ ಸಂಖ್ಯೆಯನ್ನು PAN ಕಾರ್ಡ್, ಮೊಬೈಲ್ ಫೋನ್, ಬ್ಯಾಂಕ್ ಖಾತೆ ಸೇರಿದಂತೆ ಹಲವು ಸೇವೆಗಳ ಜೊತೆ ಲಿಂಕ್ ಮಾಡಲು ಮಾರ್ಚ್ 31ರವರೆಗೆ ಗಡುವು ನೀಡಲಾಗಿದೆ. ಆದರೆ ವಾಸ್ತವಿಕತೆ ಬೇರೆಯೇ ಆಗಿದೆ. ಕಾರಣ ಯುಐಡಿಎಐ ಈ ಬಗ್ಗೆ ಕ್ಲೀನ್ ಸ್ವೀಪ್ ಮಾಡಿದೆ.


COMMERCIAL BREAK
SCROLL TO CONTINUE READING

ಮಾರ್ಚ್ 31 ರ ನಂತರವೂ ಆಧಾರ್ ನವೀಕರಣ ಸಾಧ್ಯ
ವಾಸ್ತವವಾಗಿ ಆಧಾರ್ ಅನ್ನು ನವೀಕರಿಸಲು ಮಾರ್ಚ್ 31 ಅಂತಿಮ ದಿನಾಂಕ ಎಂದು ಹೇಳಲಾಗಿದೆ. ಆದರೆ, ಆಧಾರ್ ಅನ್ನು ಯಾವುದೇ ಸಮಯದಲ್ಲಿ ಬೇಕಾದರೂ ನವೀಕರಿಸಬಹುದು ಎಂದು ಯುಐಡಿಎಐ ಸ್ಪಷ್ಟಪಡಿಸಿದೆ.


ಆಧಾರ್ ಅನ್ನು ನವೀಕರಿಸಲು ಯಾವುದೇ ಗಡುವು ಇಲ್ಲ
ಆಧಾರ್ ಅನ್ನು ನವೀಕರಿಸಲು ಯಾವುದೇ ಗಡುವು ಇಲ್ಲ ಎಂದು ಯುಐಡಿಎಐ ಹೇಳಿದೆ. ನಿಮ್ಮ ಸೌಕರ್ಯದ ಪ್ರಕಾರ, ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಿ ಆಧಾರ್ ಅನ್ನು ನೊಂದಾಯಿಸಬಹುದು. ಅಗತ್ಯವಿದ್ದಲ್ಲಿ ನಿಮ್ಮ ಆಧಾರ್ ಸಂಖ್ಯೆಗೆ ಒದಗಿಸಿರುವ ಮಾಹಿತಿಯನ್ನು ನವೀಕರಿಸಬಹುದು.  ಇದಕ್ಕೆ ಯಾವುದೇ ಕಾಲ ಮಿತಿ ನಿಗದಿಯಾಗಿಲ್ಲ ಎಂದು UIDAI ಸ್ಪಷ್ಟಪಡಿಸಿದೆ.