ಉಜ್ಜೈನ್: ಮಧ್ಯ ಪ್ರದೇಶದ ಉಜ್ಜಯಿನಿ ಜಿಲ್ಲಾ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾಕ್ಟರ್ ಮತ್ತು ಸಹೋದ್ಯೋಗಿ ಮಹಿಳೆಯ 'ಚುಂಬನ'ದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಈಗ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ.


COMMERCIAL BREAK
SCROLL TO CONTINUE READING

ಉಜ್ಜಯಿನಿ ಜಿಲ್ಲೆಯ ಜಿಲ್ಲಾಧಿಕಾರಿ ಶಶಾಂಕ್ ಮಿಶ್ರಾ, "ಚುಂಬನ ಪ್ರಕರಣವು ಯಾವುದೇ ಅಧಿಕಾರಿಗೆ ಸೂಕ್ತವಲ್ಲ. ಪ್ರಕರಣದ ಗಂಭೀರತೆಯ ಕಾರಣದಿಂದಾಗಿ ನಾನು ಜಿಲ್ಲೆಯ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ರಾಜು ನಿಡಿಯಾರಿಯ ಹುದ್ದೆಯನ್ನು ತೆಗೆದುಹಾಕಿದೆ" ಎಂದು ಹೇಳಿದರು." ಡಾ. ಪಿ.ಎನ್. ವರ್ಮಾ ಅವರ ಸ್ಥಾನದಲ್ಲಿ ನೇಮಕಗೊಂಡಿದ್ದಾರೆ. 


ನಾನು ಇನ್ಸ್ಪೆಕ್ಟರ್ಗೆ ನೋಟಿಸ್ ನೀಡಿದ್ದೇನೆ. ಕಳೆದ ಎರಡು ದಿನಗಳಿಂದ ಅವರು ರಜೆಯಲ್ಲಿದ್ದಾರೆ. ಅವರ ಉತ್ತರದ ನಂತರ ನಾನು ಈ ವಿಷಯದಲ್ಲಿ ಮತ್ತಷ್ಟು ಕ್ರಮ ಕೈಗೊಳ್ಳಲಿದ್ದೇವೆ. ಜಿಲ್ಲಾ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಂಹೆಚ್ಒ) ಡಾ. ಮೋಹನ್ ಮಾಲ್ವಿಯ ಅವರು ಘಟನೆಯ ಬಗ್ಗೆ ವಿಚಾರಣೆ ನಡೆಸಬೇಕೆಂದು ವಿಭಾಗೀಯ ಆಯುಕ್ತರು ಹೇಳಿದ್ದಾರೆ ಎಂದು ಮಿಶ್ರಾ ಹೇಳಿದರು. 


ಮೂಲಗಳ ಪ್ರಕಾರ, ಈ ವೀಡಿಯೋದಲ್ಲಿ ಕಂಡುಬರುವ ಮಹಿಳೆ ನರ್ಸ್ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಈ ವೀಡಿಯೊವನ್ನು ಜಿಲ್ಲಾ ಆಸ್ಪತ್ರೆಯ ಆಪರೇಷನ್ ಥಿಯೇಟರ್ನಲ್ಲಿ ಮಾಡಲಾಗಿದೆ ಎಂದು ಕಾಣುತ್ತದೆ. ನೀವು ಸಹ ವೀಡಿಯೊವನ್ನು ನೋಡಿ ...



ಈ ವಿಡಿಯೋ ಅಪರೇಷನ್ ಥಿಯೆಟರ್ ನಲ್ಲಿ ಮಾಡಲಾಗಿದೆಯೆ ಎಂದು ಮಾಲ್ವಿಯಾ ಅವರನ್ನು ಪ್ರಶ್ನಿಸಿದಾಗ, ಅದರ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. ಏತನ್ಮಧ್ಯೆ, ಈ ನಿಟ್ಟಿನಲ್ಲಿ ಯಾರೂ ಕೂಡ ಯಾವುದೇ ದೂರು ಸಲ್ಲಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.