Unbelievable!: ಆನ್ಲೈನ್ ಹರಾಜಿನಲ್ಲಿ 10 ಕೋಟಿ ರೂ. ಗಿಟ್ಟಿಸಿದ 1 ರೂ. ನಾಣ್ಯ..!
ಸುಮಾರು ಜನರು ಆನ್ಲೈನಲ್ಲಿ ಅಪರೂಪದಲ್ಲಿಯೇ ಅಪರೂಪವನ್ನುವ, ವಿಶೇಷ ಸರಣಿಯ ನೋಟುಗಳು ಮತ್ತು ನಾಣ್ಯಗಳನ್ನು ಮಾರಾಟ ಮಾಡಿ ಮನೆಯಲ್ಲಿಯೇ ಕುಳಿತು ಉತ್ತಮ ಆದಾಯ ಗಳಿಸುತ್ತಾರೆ.
ನವದೆಹಲಿ: ಅನೇಕ ಜನರು ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿರುತ್ತಾರೆ. ಅವುಗಳನ್ನು ಸರಿಯಾದ ಸಮಯದಲ್ಲಿ ಮಾರಾಟ ಮಾಡಿ ಲಕ್ಷ ಲಕ್ಷ ದುಡ್ಡು ಎಣಿಸುತ್ತಾರೆ. ವಿಶಿಷ್ಟ ಗುರುತಿನ, ವಿಶೇಷತೆ ಹೊಂದಿರುವ ನೋಟುಗಳು ಮತ್ತು ನಾಣ್ಯಗಳಿಗೆ ಆನ್ಲೈನ್ ಮಾರುಕಟ್ಟೆ(Online Market)ಯಲ್ಲಿ ಭಾರೀ ಬೇಡಿಕೆ ಇದೆ. ಸುಮಾರು ಜನರು ಆನ್ಲೈನಲ್ಲಿ ಅಪರೂಪದಲ್ಲಿಯೇ ಅಪರೂಪವನ್ನುವ, ವಿಶೇಷ ಸರಣಿಯ ನೋಟುಗಳು ಮತ್ತು ನಾಣ್ಯಗಳನ್ನು ಮಾರಾಟ ಮಾಡಿ ಮನೆಯಲ್ಲಿಯೇ ಕುಳಿತು ಉತ್ತಮ ಆದಾಯ ಗಳಿಸುತ್ತಾರೆ.
ಇತ್ತೀಚೆಗೆ 1 ರೂ. ನಾಣ್ಯ(One Rupee Coin)ವನ್ನು ಹರಾಜಿನಲ್ಲಿ ಮಾರಾಟ ಮಾಡಲಾಯಿತು. ಈ ನಾಣ್ಯಕ್ಕೆ ಸಿಕ್ಕ ಮೊತ್ತವನ್ನು ಕೇಳಿದರೆ ನೀವು ನಿಜಕ್ಕೂ ದಂಗಾಗುವುದು ಗ್ಯಾರೆಂಟಿ. ಹೌದು, ಕೇವಲ ಒಂದೇ ಒಂದು ರೂ. ನಾಣ್ಯವು ಹರಾಜಿನಲ್ಲಿ ಬರೋಬ್ಬರಿ 10 ಕೋಟಿ ರೂ. ಗಿಟ್ಟಿಸಿದೆ. ಇದು ಅಚ್ಚರಿಯಾದರೂ ನಿಜ. ಇದಕ್ಕೆ ಇಷ್ಟೊಂದು ಡೊಡ್ಡ ಮೊತ್ತ ಸಿಗಲು ಕಾರಣವೇನೆಂದು ಅನೇಕರು ತಲೆಕೆಡಿಸಿಕೊಂಡಿರುತ್ತಾರೆ. ವಿಶೇಷತೆಯಿಲ್ಲದೆ ಏನೂ ಸಿಗುವುದಿಲ್ಲ. ಕೇವಲ ಹಳೆಯ ನಾಣ್ಯ, ನೋಟುಗಳು ಮಾತ್ರವಲ್ಲ, ಪುರಾತನ ವಸ್ತುಗಳಿಗೂ ಈ ಜಗತ್ತಿನಲ್ಲಿ ಬಹುಬೇಡಿಕೆ ಇದೆ.
ಇದನ್ನೂ ಓದಿ: PAN-Aadhaar linking: ಅಂತಿಮ ಗಡುವಿನ ಸಮಯ ವಿಸ್ತರಿಸಿದ ಕೇಂದ್ರ ಸರ್ಕಾರ
ಈ ಅಪರೂಪದ ನಾಣ್ಯ(Coin)ವು ಅಷ್ಟು ದೊಡ್ಡ ಮೊತ್ತ ಪಡೆಯಲು ಕಾರಣ ಇದನ್ನು 1885 ರಲ್ಲಿ ಭಾರತದಲ್ಲಿ ಬ್ರಿಟಿಷ್ ರಾಜ್ ಆಡಳಿತದ ಸಮಯದಲ್ಲಿ ತಯಾರಿಸಲಾಗಿತ್ತು. ಹೀಗಾಗಿಯೇ ಇದಕ್ಕೆ ದೊಡ್ಡ ಮೊತ್ತದ ಹಣ ಸಿಕ್ಕಿದೆ. ಇದು ಪಕ್ಕಾ ಲಾಟರಿ ಟಿಕೆಟ್ ಗಿಂತಲೂ ಕಡಿಮೆ ಇಲ್ಲ. ನೀವು ಹಳೆಯ ನಾಣ್ಯಗಳು ಮತ್ತು ಕರೆನ್ಸಿಯನ್ನು ಸಂಗ್ರಹಿಸುವ ಉತ್ಸಾಹ ಹೊಂದಿದ್ದರೆ, ಮನೆಯಲ್ಲಿ ಕುಳಿತುಕೊಂಡು ಲಕ್ಷಾಂತರ ಮತ್ತು ಕೋಟಿ ರೂ.ವರೆಗೂ ಗಳಿಸುವ ಅವಕಾಶ ಇದೆ.
ಈ ಸುವರ್ಣಾವಕಾಶ ಪಡೆಯಲು ನಿಮ್ಮ ಬಳಿ ವಿಶೇಷತೆ ಹೊಂದಿರುವ, ಅಪರೂಪದಲ್ಲಿಯೇ ಅಪರೂಪವೆನ್ನುವ, ವಿಶೇಷ ಸರಣಿ ಸಂಖ್ಯೆ(786) ಹೊಂದಿರುವ ನಾಣ್ಯಗಳು ಅಥವಾ ನೋಟುಗಳು ಇರಬೇಕು. ಇವುಗಳನ್ನು ನೀವು Coin Bazaar, Quikr, OLX, CollectorBazar.com ಮುಂತಾದ ವೆಬ್‌ಸೈಟ್‌ಗಳಲ್ಲಿ ಮಾರಾಟ ಮಾಡಬಹುದು.
ಇದನ್ನೂ ಓದಿ: Online Passport Apply : ಈಗ ಮನೆಯಿಂದಲೇ Passport ಗೆ ಅರ್ಜಿ ಸಲ್ಲಿಸಬಹುದು - ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ!
ಆಸಕ್ತರು ವೆಬ್‌ಸೈಟ್‌ಗಳಲ್ಲಿ ಪ್ರೊಫೈಲ್‌ಗಳನ್ನು ರಚಿಸುವ ಮೂಲಕ ಅಲ್ಲಿ ಹಳೆಯ ನೋಟು(Old Note) ಮತ್ತು ನಾಣ್ಯಗಳನ್ನು ಮಾರಾಟ ಮತ್ತು ಖರೀದಿ ಮಾಡಬಹುದು. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ, ಮೊದಲು ವೆಬ್‌ಸೈಟ್ ಗೆ ಭೇಟಿ ನೀಡಿ, ಅಲ್ಲಿ ಬಳಕೆದಾರರು ಹೆಸರು, ವಿಳಾಸ, ಇಮೇಲ್, ಫೋನ್ ಸಂಖ್ಯೆ ಮತ್ತು ಮೂಲ ವಿವರಗಳನ್ನು ನೀಡುವ ಮೂಲಕ ನಿಮ್ಮ ಹೆಸರು ನೋಂದಾಯಿಸಬೇಕು. ಬಳಿಕ ನಿಮ್ಮ ಬಳಿ ಇರುವ ಹಳೆಯ ನಾಣ್ಯಗಳು ಅಥವಾ ನೋಟುಗಳ ಸರಿಯಾದ ಫೋಟೋ ತೆಗೆದು ಅಲ್ಲಿ ಅಪ್ಲೋಡ್ ಮಾಡಬೇಕು. ಖರೀದಾರರು ನೇರವಾಗಿಯೇ ನಿಮ್ಮ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ನಿಮ್ಮ ಬಳಿ ಇರುವ ನಾಣ್ಯ ಮತ್ತು ನೋಟುಗಳನ್ನು ಖರೀದಿಸುತ್ತಾರೆ.
ಈ ಹಿಂದೆ ಜೂನ್ ನಲ್ಲಿ 1933ನೇ ಇಸವಿಯ ಅಮೆರಿಕದ ನಾಣ್ಯವೊಂದು ನ್ಯೂಯಾರ್ಕ್ ನಲ್ಲಿ ನಡೆದ ಹರಾಜಿನಲ್ಲಿ18.9 ಮಿಲಿಯನ್ ಯುಎಸ್ ಡಾಲರ್ (ಅಂದರೆ 138 ಕೋಟಿ ರೂ.)ಗೆ ಮಾರಾಟವಾಗಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.