ನವದೆಹಲಿ : ನೀವು ಪಾಸ್‌ಪೋರ್ಟ್ ಪಡೆಯಲು ಒದ್ದಾಡುತ್ತಿದ್ದೀರಾ? ಮತ್ತೆ ಪಾಸ್‌ಪೋರ್ಟ್ ಕಚೇರಿಯಲ್ಲಿ ಪ್ರಕ್ರಿಯೆಯನ್ನು ಮುಗಿಸುವ ಗಡಿಬಿಡಿಯ ಬಗ್ಗೆ ಚಿಂತಿಸುತ್ತಿದ್ದರೆ, ನಿಮಗೆ ಇಲ್ಲಿ ಒಂದು ಸಂತಸದ ಸುದ್ದಿ ಇದೆ. ಈ ಸರಳ ಪ್ರಕ್ರಿಯೆಯನ್ನ ಅನುಸರಿಸುವ ಮೂಲಕ ನೀವು ನಿಮ್ಮ ಪಾಸ್‌ಪೋರ್ಟ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ನಿಮ್ಮ ಹತ್ತಿರದ ಅಂಚೆ ಕಚೇರಿಯಿಂದಲೂ ನೀವು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು.
ನೀವು ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್(Passport)ಗೆ ನೋಂದಾಯಿಸಲು ಬಯಸಿದರೆ, ನೀವು ಅಧಿಕೃತ ವೆಬ್‌ಸೈಟ್ passportindia.gov.in. ನಲ್ಲಿ ನೋಂದಾಯಿಸಿಕೊಳ್ಳಬಹುದು.
ಇದನ್ನೂ ಓದಿ : SBI ಗ್ರಾಹಕರ ಗಮನಕ್ಕೆ! ನೀವು ATM Card ಹೊಂದಿದ್ದರೆ ಎಚ್ಚರ : ಬ್ಯಾಂಕ್ ಪ್ರಮುಖ ಮಾಹಿತಿಯೊಂದನ್ನ ನೀಡಿದೆ
ಪಾಸ್‌ಪೋರ್ಟ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಈ ಹಂತಗಳನ್ನ ಅನುಸರಿಸಿ :
- ಪಾಸ್‌ಪೋರ್ಟ್ ಸೇವೆಯ ಅಧಿಕೃತ ವೆಬ್‌ಸೈಟ್‌ಗೆ, passpindindia.gov.in ಗೆ ಹೋಗಿ
- ನಂತರ ವೆಬ್‌ಸೈಟ್(Website) ನಲ್ಲಿ ನೋಂದಾಯಿಸಿ, ಪರಿಶೀಲನೆಗಾಗಿ captcha ಕೋಡ್ ನಮೂದಿಸಿ
- ನೋಂದಾಯಿತ ಲಾಗಿನ್ ID ಮೂಲಕ ವೆಬ್‌ಸೈಟ್‌ಗೆ ಲಾಗಿನ್ ಆಗಿ
- 'Fresh Passport / Re-issue of Passport' ಮೇಲೆ ಕ್ಲಿಕ್ ಮಾಡಿ
ಇದನ್ನೂ ಓದಿ : Changes from 1 September : ಸೆ.1 ರಿಂದ PF ಬ್ಯಾಂಕ್ ಬಡ್ಡಿ, LPG ಸೇರಿದಂತೆ ಹಲವು ನಿಯಮಗಳಲ್ಲಿ ಭಾರೀ ಬದಲಾವಣೆ!
- ಅರ್ಜಿ ನಮೂನೆಯಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಮತ್ತು ಅಪಾಯಿಂಟ್‌ಮೆಂಟ್ ವೇಳಾಪಟ್ಟಿ(schedule an appointment) ಮಾಡಲು 'Upload e-Form' Pay & Schedule Appointment' ಮೇಲೆ ಕ್ಲಿಕ್ ಮಾಡಿ
- 'Print Application Receipt'ಯ ಮೇಲೆ ಕ್ಲಿಕ್ ಮಾಡಿ ಮತ್ತು ಅರ್ಜಿಯ ರಸೀದಿಯ ಪ್ರಿಂಟ್ ಔಟ್ ತೆಗೆದುಕೊಳ್ಳಿ ಮತ್ತು ಭವಿಷ್ಯದ ಪ್ರಯೋಜನಕ್ಕೆ ಸುರಕ್ಷಿತವಾಗಿರಿಸಿಕೊಳ್ಳಿ
ಅಂಚೆ ಕಚೇರಿಯ CSC ಕೌಂಟರ್‌ನಲ್ಲಿ ನೀವು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು
ಪಾಸ್‌ಪೋರ್ಟ್‌ನ ನೋಂದಣಿ ಮತ್ತು ಪರಿಶೀಲನೆ ಪ್ರಕ್ರಿಯೆಗೆ, ನಿಮಗೆ ಆಧಾರ್ ಕಾರ್ಡ್(Aadhar Card), ಚುನಾವಣಾ ಮತದಾರರ ಗುರುತಿನ ಚೀಟಿ, ಜನನ ಪ್ರಮಾಣಪತ್ರ, ಶಾಲಾ ಪ್ರಮಾಣಪತ್ರ, ವಯಸ್ಸು ಪುರಾವೆ, ಪ್ಯಾನ್ ಕಾರ್ಡ್, ಚಾಲನಾ ಪರವಾನಗಿ, ಮತ್ತು ವಿದ್ಯುತ್ ಬಿಲ್, ಮೊಬೈಲ್ ಬಿಲ್, ನೀರಿನ ಬಿಲ್, ಗ್ಯಾಸ್ ಬಿಲ್ ನಂತಹ ವಿಳಾಸ ಪುರಾವೆ ಅಗತ್ಯವಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.