ಜಿನಿವಾ : ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಭೆಯಲ್ಲಿ (UNHRC Meet) ವಿಶ್ವರಾಷ್ಟ್ರಗಳ ಎದುರು ಪಾಕಿಸ್ತಾನದ ಮರ್ಯಾದೆ ಹರಾಜು ಹಾಕಿದೆ ಭಾರತ. ಪಾಕಿಸ್ತಾನದ (Pakistan) ಸುಳ್ಳುಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ಅದನ್ನು ಬೆತ್ತಲೆ (Expose) ಮಾಡಿದೆ. ವಿಶ್ವಸಂಸ್ಥೆ ಮಾನವಾಧಿಕಾರ ಸಭೆಯಲ್ಲಿ  ಕಾಶ್ಮೀರ (Kashmir) ಕುರಿತಂತೆ  ಪಾಕಿಸ್ತಾನವು ಭಾರತದ ವಿರುದ್ಧ ಹಲವು ಆರೋಪಗಳನ್ನು ಮಾಡಿತ್ತು. ಅದಕ್ಕೆ ಭಾರತ ನೀಡಿದ ಉತ್ತರ ಹೇಗಿತ್ತು ಗೊತ್ತಾ.?


COMMERCIAL BREAK
SCROLL TO CONTINUE READING

ವಿಶ್ವ ಸಂಸ್ಥೆಯಲ್ಲಿ ಆರ್ಭಟಿಸಿದ ಭಾರತ : 
ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಭೆಯಲ್ಲಿ ಪಾಕಿಸ್ತಾನ ವಿರುದ್ಧ ಆರ್ಭಟಿಸಿದ ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಕಾರ್ಯದರ್ಶಿ ಸೀಮಾ ಪೂಜನಿ (Seema Pujani), ಜಮ್ಮು ಕಾಶ್ಮೀರ ಮತ್ತು ಲಡಾಖ್ (Ladakh) ಭಾರತದ ಅವಿಭಾಜ್ಯ ಅಂಗ. ಅಲ್ಲಿಯ ಆಡಳಿತ ಭಾರತದ ಆಂತರಿಕ ವಿಚಾರ. ಭಾರತವನ್ನು ದೂಷಿಸುವ ಮೊದಲು, ಪಾಕಿಸ್ತಾನವು (Pakistan) ತನ್ನ ನೆಲದಲ್ಲಾಗುವ ದಾಖಲೆ ಮಾನವ ಹಕ್ಕುಗಳ ಉಲ್ಲಂಘನೆ (Human rights violation) ಬಗ್ಗೆ ಗಮನ ನೀಡಬೇಕು ಎಂದು ಗುಡುಗಿದ್ದಾರೆ.


 Bharat Bundh Tomorrow :ನಾಳೆ ಭಾರತ ಬಂದ್! ಏನೆಲ್ಲಾ ಬಂದ್ ಆಗಬಹುದು, ಅತ್ಯಗತ್ಯ ಮಾಹಿತಿ ಇಲ್ಲಿದೆ


ಪಾಕಿಸ್ತಾನದಲ್ಲಿ ಅಲ್ಪ ಸಂಖ್ಯಾತರ ಮೇಲೆ ದೌರ್ಜನ್ಯ.!
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ (Minorities in Pakistan) ವಿರುದಇದನ್ನೂ ಓದಿ  :್ಧ ನಿರಂತರ ದೌರ್ಜನ್ಯ ನಡೆಯುತ್ತಿದೆ. ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಅಲ್ಪಸಂಖ್ಯಾತ ವರ್ಗದ ಮಹಿಳೆಯರ (Women) ಸ್ಥಿತಿ ದಯನೀಯವಾಗಿದೆ ಎಂದು ಭಾರತ ಆರೋಪಿಸಿದೆ. ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗದ ವರದಿಯೊಂದನ್ನು ತೋರಿಸಿದ ಭಾರತ, ಪಾಕಿಸ್ತಾನದಲ್ಲಿ ಪ್ರತಿವರ್ಷ ಹೆಚ್ಚು ಕಡಿಮೆ ಒಂದು ಸಾವಿರ ಅಲ್ಪ ಸಂಖ್ಯಾತ ವರ್ಗದ ಮಹಿಳೆಯರನ್ನು ಅಪಹರಿಸಿ, ಬಲವಂತದ ಮತಾಂತರಗೊಳಿಸಲಾಗುತ್ತಿದೆ (Forced Conversion) ಎಂದು ಆರೋಪಿಸಿದರು. 


ಭಯೋತ್ಪಾದನೆ ಬಗ್ಗೆ ಕ್ಲಾಸ್ : 
ಬಲೂಚಿಸ್ತಾನದಲ್ಲಿ (Baluchistan) ರಾಜಕಾರಣಿಗಳ ಧಮನ, ಚಳವಳಿಕಾರರ ಅಪಹರಣ ಮುಂತಾದ ಕೃತ್ಯಗಳು ನಿರಂತರ ನಡೆಯುತ್ತಿದೆ. ಪಾಕಿಸ್ತಾನ ಭಯೋತ್ಪಾದಕರಿಗೆ (Terrorist) ಆಶ್ರಯ ನೀಡುತ್ತಿದೆ. ಪಾಕ್ ಪ್ರಾಯೋಜಿತ ಭಯೋತ್ಪಾದನೆ (Pak sponsored terrorism) ಭಾರತಕ್ಕೆ ಮಾತ್ರ ಅಲ್ಲ, ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಎಲ್ಲಾ ದೇಶಗಳಿಗೂ ಅಪಾಯ ತಂದೊಡ್ಡಿದೆ ಎಂದು ಪೂಜನಿ ಅಪಾದಿಸಿದರು. 


ಇದನ್ನೂ ಓದಿ  : ರಾಷ್ಟ್ರ ರಾಜಧಾನಿಯಲ್ಲಿ 8ನೇ ತರಗತಿವರೆಗಿನ Students Exam ಬರೆಯಬೇಕಿಲ್ಲ, ಆದರೂ ಪಾಸ್!


ಟರ್ಕಿ ಮೇಲೂ ವಾಗ್ದಾಳಿ : 
ಪಾಕಿಸ್ತಾನದ ಪರಮ ಮಿತ್ರ ಟರ್ಕಿ (Turkey) ಮೇಲೆ ವಾಗ್ದಾಳಿ ನಡೆಸಿದ ಭಾರತ, ಟರ್ಕಿಯು ಸೈಪ್ರಸ್ ನ (Cypress)  ಒಂದು ಭೂಭಾಗವನ್ನು ಆಕ್ರಮಿಸಿಕೊಂಡಿದೆ. ವಿಶ್ವಸಂಸ್ಥೆಯ ಮಧ್ಯಪ್ರವೇಶದ ಬಳಿಕವೂ ಅತಿಕ್ರಮಿತ ಪ್ರದೇಶ ಬಿಟ್ಟುಕೊಡಲು ಟರ್ಕಿ ಸಿದ್ದ ಇಲ್ಲ ಎಂದು ಭಾರತ ಆರೋಪಿಸಿದೆ. ಭಾರತದ ಆಂತರಿಕ ವಿಷಯಗಳಲ್ಲಿ ಟರ್ಕಿಯ ಹಸ್ತಕ್ಷೇಪವನ್ನು ಭಾರತ ಎಂದೂ ಸಹಿಸುವುದಿಲ್ಲ ಎಂದು ಟರ್ಕಿಗೆ ಭಾರತ ನೇರ ಶಬ್ದಗಳಲ್ಲಿ ಎಚ್ಚರಿಕೆ ನೀಡಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.