Uttarakhand UCC: ಏಕರೂಪ ನಾಗರಿಕ ಸಂಹಿತೆಯ ಕರಡು ಪ್ರತಿ ಸಿದ್ಧ, ತಜ್ಞರ ಸಮಿತಿಯಿಂದ ಘೋಷಣೆ
Uniform Civil Code: ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಕರಡನ್ನು ಸಿದ್ಧಪಡಿಸಲಾಗಿದೆ. ಶೀಘ್ರದಲ್ಲೇ ಈ ವರದಿಯನ್ನು ಧಾಮಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಜ್ಞರ ಸಮಿತಿ ತಿಳಿಸಿದೆ.
Uniform Civil Code Draft: ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಕರಡನ್ನು ಸಿದ್ಧಪಡಿಸಲಾಗಿದೆ. ಈ ಕುರಿತು ಅಲ್ಲಿನ ತಜ್ಞರ ಸಮಿತಿ ಘೋಷಣೆ ಮಾಡಿದೆ. ಯುಸಿಸಿ ಕಾನೂನನ್ನು ರಚಿಸಿದರೆ, ಅಲ್ಪಸಂಖ್ಯಾತರ ವೈಯಕ್ತಿಕ ಕಾನೂನಿಗೆ ಕಡಿವಾಣ ಬೀಳುತ್ತದೆ ಮತ್ತು ನಾಗರಿಕ ವಿಷಯಗಳಲ್ಲಿ ಎಲ್ಲರೂ ಒಂದೇ ಕಾನೂನನ್ನು ಅನುಸರಿಸಬೇಕಾಗುತ್ತದೆ. ಈ ಕುರಿತು ಮಾಹಿತಿಯನ್ನು ನೀಡಿರುವ ಯುಸಿಸಿ ಕರಡು ಸಮಿತಿಯ ಸದಸ್ಯ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ, ಸಮಿತಿಯು ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ರಾಜ್ಯ ಶಾಸನಬದ್ಧ ಆಯೋಗ ಮತ್ತು ವಿವಿಧ ಧಾರ್ಮಿಕ ಪಂಗಡಗಳ ಮುಖಂಡರೊಂದಿಗೆ ಮಾತುಕತೆ ನಡೆಸಿದೆ ಎಂದು ಹೇಳಿದ್ದಾರೆ. ಉತ್ತರಾಖಂಡದ ಪ್ರಸ್ತಾವಿತ ಏಕರೂಪ ನಾಗರಿಕ ಸಂಹಿತೆಯ ಕರಡು ಇದೀಗ ಪೂರ್ಣಗೊಂಡಿದೆ ಎಂದು ನಿಮಗೆ ತಿಳಿಸಲು ನನಗೆ ಅತೀವ ಸಂತಸವಾಗುತ್ತದೆ ಎಂದಿದ್ದಾರೆ. ಕರಡು ಸಹಿತ ತಜ್ಞರ ಸಮಿತಿಯ ವರದಿಯನ್ನು ಉತ್ತರಾಖಂಡ ಸರಕಾರಕ್ಕೆ ಶೀಘ್ರವೇ ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಏಕರೂಪ ನಾಗರಿಕ ಸಂಹಿತೆಯ ಮೇಲೆ ರಾಜಕೀಯ ಕದನ ಆರಂಭ!
ಏಕರೂಪ ನಾಗರಿಕ ಸಂಹಿತೆ ಕುರಿತು ದೇಶದಲ್ಲಿ ರಾಜಕೀಯ ಹೋರಾಟ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯ ನಂತರ ವಿರೋಧ ಪಕ್ಷಗಳು ಯುಸಿಸಿಯ ವಿರೋಧಕ್ಕೆ ಮುಗಿಬಿದ್ದಿವೆ. ಪ್ರಧಾನಿಯವರು ಯುಸಿಸಿಯನ್ನು ಬಹಿರಂಗವಾಗಿ ಪ್ರತಿಪಾದಿಸಿದಾಗ, ಕಾನೂನು ಆಯೋಗಕ್ಕೆ ಸಲಹೆಗಳನ್ನು ನೀಡುವುದರಿಂದ ಏನು ಪ್ರಯೋಜನ? ಏತನ್ಮಧ್ಯೆ, ಬಿಜೆಪಿ ಆಡಳಿತವಿರುವ ಉತ್ತರಾಖಂಡದಲ್ಲಿ ಯುಸಿಸಿ ಜಾರಿಗೆ ತರಲು ಸಿದ್ಧತೆಗಳು ತೀವ್ರಗೊಂಡಿವೆ. ಜನರಿಂದ ಬಂದ ಸಲಹೆಗಳ ಆಧಾರದ ಮೇಲೆ ಸರ್ಕಾರ ರಚಿಸಿರುವ ಸಮಿತಿ ಕರಡು ಸಿದ್ಧಪಡಿಸಿದೆ.
ಇದನ್ನೂ ಓದಿ-ಸUniform Civil Code ಕುರಿತು ಕೇಂದ್ರ ಕಾನೂನು ಸಚಿವರ ಹೇಳಿಕೆ ಪ್ರಕಟ, ಹೇಳಿದ್ದೇನು ಗೊತ್ತಾ?
ಸರ್ಕಾರ ಧಾರ್ಮಿಕ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದೆ ಎಂಬ ಆರೋಪ
ಮುಸ್ಲಿಮರಿಂದ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಸರ್ಕಾರ ಬಯಸುತ್ತಿದೆ ಮತ್ತು ಅದು ನಡೆಯುತ್ತಿದೆ ಎಂದು ಜಮೀಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಹೇಳಿದ್ದಾರೆ. ನೋಡುವುದನ್ನು ಬಿಟ್ಟು ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಇನ್ನೊಂದೆಡೆ ಈ ಕುರಿತು ಮಾತನಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಾವು ಯಾವುದೇ ಧರ್ಮವನ್ನು ನಿಷೇಧಿಸಿಲ್ಲ, ಸಂವಿಧಾನದಲ್ಲಿ ಏನು ಬರೆಯಲಾಗಿದೆಯೋ ಅದನ್ನು ಮಾಡಲಿದ್ದೇವೆ ಎಂದಿದ್ದಾರೆ, ಒಂದು ದೇಶದಲ್ಲಿ ಒಂದೇ ಕಾನೂನು ಇರಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-UCC: ಏಕರೂಪ ನಾಗರಿಕ ಸಂಹಿತೆ, ಮೋದಿ ಸರ್ಕಾರಕ್ಕೆ ಕೆಜ್ರಿವಾಲ್ ಬೆಂಬಲ
ಎಸ್ಪಿ ಸಂಸದರು ಈ ಬೇಡಿಕೆ ಇಟ್ಟಿದ್ದಾರೆ
ಇದರ ಹೊರತಾಗಿ ಮುಸ್ಲಿಮರು ಯಾವುದೇ ನಿರ್ಧಾರವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಎಸ್ಪಿ ಸಂಸದ ಶಫೀಕರ್ ರಹಮಾನ್ ಬರ್ಕೆ ಹೇಳಿದ್ದಾರೆ. ಇದು ನಮ್ಮ ಧರ್ಮದ ವಿಚಾರ. ಉಲೇಮಾ-ಮುಫ್ತಿಗಳ ನಿರ್ಧಾರವನ್ನು ಮಾತ್ರ ಅಂಗೀಕರಿಸಲಾಗುವುದು. ಸರ್ಕಾರ ಉಲೇಮಾ-ಮುಫ್ತಿಗಳೊಂದಿಗೆ ಚರ್ಚಿಸಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.