Uniform Civil Code: `ಅನುಮಾನಾಸ್ಪದ ಮೌನ ಮೊಸಕ್ಕೆ ಸಮಾನ` ಎಂದು ಕೇರಳ ಮುಖ್ಯಮಂತ್ರಿ ಹೇಳಿದ್ದೇಕೆ?
Karala CM On Congress: ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಕಾಂಗ್ರೆಸ್ ಪಕ್ಷಕ್ಕೆ ಆಗ್ರಹಿಸಿದ್ದಾರೆ.
Kerala CM About UCC: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತು ಕಾನೂನು ಆಯೋಗವು ಜನರು ಮತ್ತು ಧಾರ್ಮಿಕ ಸಂಸ್ಥೆಗಳಿಂದ ಅನಿಸಿಕೆಗಳನ್ನು ಕೋರಿದೆ. ಈ ಬಗ್ಗೆ ಇದೀಗ ರಾಜಕೀಯ ಶುರುವಾಗಿದೆ. ಏತನ್ಮಧ್ಯೆ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇಂದು ಯುಸಿಸಿ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಕಾಂಗ್ರೆಸ್‌ಗೆ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲ 'ಪಕ್ಷದ ಅನುಮಾನಾಸ್ಪದ ಮೌನ ಮೊಸಕ್ಕೆ ಸಮಾನ' ಎಂದು ಸಿಎಂ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಕಾಂಗ್ರೆಸ್ ಸ್ಪಷ್ಟ ನಿಲುವು ಹೊಂದಿದೆಯೇ? ಭಾರತದ ಬಹುತ್ವದ ಮೇಲಿನ ಸಂಘಪರಿವಾರದ (ಆರ್‌ಎಸ್‌ಎಸ್) ದಾಳಿಯನ್ನು ವಿರೋಧಿಸುವುದು ಇಂದಿನ ಅಗತ್ಯವಾಗಿರುವಾಗ, ಅವುಗಳ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳಲು ಕಾಂಗ್ರೆಸ್ ಸಿದ್ಧವಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ
ಕಾನೂನು ಆಯೋಗದ ಮನವಿಯ ನಂತರ, ಕಾಂಗ್ರೆಸ್ ಅಧಿಕೃತ ಹೇಳಿಕೆಯನ್ನು ನೀಡಿತ್ತು, ಚುನಾವಣೆಯ ಕಾರಣದಿಂದಾಗಿ ಯುಸಿಸಿ ಬಾಂಬ್ ಸಿಡಿಸಲಾಗಿದೆ ಎಂದು ಅದು ಹೇಳಿದೆ
ಬಿಜೆಪಿ ಮತ್ತು ಕೇಂದ್ರ ಸರ್ಕಾರ ತಮ್ಮ ಅಜೆಂಡಾವನ್ನು ಕಾನೂನುಬದ್ಧಗೊಳಿಸಲು ಈ ರೀತಿ ಮಾಡುತ್ತಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಜೂನ್ 15 ರಂದು ಪಕ್ಷದ ಪರವಾಗಿ ಹೇಳಿಕೆ ನೀಡಿದ್ದಾರೆ. ಕಾನೂನು ಆಯೋಗವು ಹೊಸ ಅಭಿಪ್ರಾಯವನ್ನು ತೆಗೆದುಕೊಳ್ಳುತ್ತಿರುವುದು ವಿಚಿತ್ರವಾಗಿದೆ ಎಂದೂ ಕೂಡ ಅವರು ಈ ಸಂದರ್ಭದಲ್ಲಿ ಹೇಳಿದ್ದರು.
ಇದನ್ನೂ ಓದಿ-Income Tax Update: ಮೃತ ವ್ಯಕ್ತಿಗಳ ಐಟಿಆರ್ ಕೂಡ ದಾಖಲಿಸಬಹುದು, ಇಲ್ಲಿದೆ ವಿಧಾನ
ಪ್ರಧಾನಿ ಮೋದಿ ಉಲ್ಲೇಖ
ಸಮಾಜದಲ್ಲಿ ಒಡಕು ಮೂಡಿಸಲು ಈ ವಿಷಯ ಪ್ರಸ್ತಾಪಿಸಲಾಗಿದೆ ಎಂದು ಮಾಜಿ ಕಾನೂನು ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಬುಧವಾರ ಆರೋಪಿಸಿದ್ದರು. ಇದು ದೇಶವನ್ನು ಅಸ್ಥಿರಗೊಳಿಸಬಹುದು ಮತ್ತು ಭಾರತೀಯ ಸಮಾಜದ ವೈವಿಧ್ಯತೆಯನ್ನು ನಾಶಪಡಿಸಬಹುದು. ಸಂವಿಧಾನದ 25 ನೇ ವಿಧಿಯು ನಂಬಿಕೆಯ ಸ್ವಾತಂತ್ರ್ಯದ ಹಕ್ಕನ್ನು ಖಾತರಿಪಡಿಸುತ್ತದೆ ಎಂದು ಮೊಯ್ಲಿ ತನ್ನ ಹೇಳಿಕೆಯಲ್ಲಿ ಒತ್ತಿ ಹೇಳಿದ್ದಾರೆ.
ಇದನ್ನೂ ಓದಿ-NCP Crisis: 'ನಾನೇ ಪಕ್ಷದ ಅಧ್ಯಕ್ಷ' ಪಕ್ಷದ ಸಭೆಯಲ್ಲಿ ಅಜಿತ್ ಪವಾರ್ ಗೆ ಶರದ್ ಪವಾರ್ ನೇರ ಚಾಲೆಂಜ್
ವಾಸ್ತವದಲ್ಲಿ ಭೂಪಾಲ್ ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಯುಸಿಸಿ ಕುರಿತು ಪ್ರತಿಪಕ್ಷಗಳು ಪ್ರಚೋದನೆಗೆ ಒಳಗಾಗುತ್ತಿವೆ. ಆದರೆ, ಒಂದು ದೇಶದಲ್ಲಿ ಎರಡು ಕಾನೂನುಗಳು ಹೇಗೆ ಇರಲು ಸಾಧ್ಯ? ಯುಸಿಸಿಯನ್ನು ಸಂವಿಧಾನದಲ್ಲಿಯೂ ಉಲ್ಲೇಖಿಸಲಾಗಿದೆ. ಕಾಲಕಾಲಕ್ಕೆ ಸುಪ್ರೀಂ ಕೋರ್ಟ್ ಕೂಡ ಯುಸಿಸಿ ತರಲು ಹೇಳುತ್ತಿದೆ ಎಂದಿದ್ದರು.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/38l6m8543Vk?feature=share
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.