ನವದೆಹಲಿ: ದೇಶಾದ್ಯಂತ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಲೇ ಇದೆ. ಸದ್ಯ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 35 ಸಾವಿರ ಗಡಿ ದಾಟಿದೆ. ಜೊತೆಗೆ ಈ ಕಾಯಿಲೆಗ ಬಲಿಯಾದವರ ಸಂಖ್ಯೆ 1147ಕ್ಕೆ ತಲುಪಿದೆ. ಇದುವರೆಗೆ ಈ ಕಾಯಿಲೆಯಿಂದ ಗುಣಮುಖರಾಗಿ ಮನೆ ತಲುಪಿದವರ ಸಂಖ್ಯೆ 8, 889ಕ್ಕೆ ಮುಟ್ಟಿದೆ. ಹೀಗಾಗಿ ದೇಶಾದ್ಯಂತ ಒಟ್ಟು 25,007 ಪ್ರಕರಣಗಳು ಆಕ್ಟಿವ್ ಉಳಿದಿವೆ. ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 10,498ಕ್ಕೆ ತಲುಪಿದರೆ, ಗುಜರಾತ್ ನಲ್ಲಿ ಒಟ್ಟು 4395 ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 3515 ಕೊರೊನಾ ಸೊಂಕಿತರು ಪತ್ತೆಯಾಗಿದ್ದಾರೆ. ಏತನ್ಮಧ್ಯೆ ಟೆಸ್ಟಿಂಗ್ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಕೇವಲ RTP-CR ಟೆಸ್ಟಿಂಗ್ ಉಪಯೋಗಿಸಲು ಮಾತ್ರ ಸಲಹೆ ನೀಡಿದೆ.


COMMERCIAL BREAK
SCROLL TO CONTINUE READING

ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಕಂಟೆನ್ಮೆಂಟ್ ಝೋನ್ ಗಳ ಫೈನಲ್ ಪಟ್ಟಿ
ಈ ನಡುವೆ ಕೇಂದ್ರ ಆರೋಗ್ಯ ಸಚಿವಾಲಯ ಮೇ 3ನೇ ತಾರೀಖಿಗೆ ಲಾಕ್ ಡೌನ್ ಮುಕ್ತಾಯಕ್ಕೂ ಮುನ್ನ ದೇಶಾದ್ಯಂತ ಇರುವ ಕಂಟೆನ್ಮೆಂಟ್ ಝೋನ್ ಗಳ ಫೈನಲ್ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಎಲ್ಲ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿನ ಕೊವಿಡ್-19 ಗೆ ಸಂಬಂಧಿಸಿದಂತೆ ರೆಡ್, ಆರೆಂಜ್ ಹಾಗೂ ಗ್ರೀನ್ ಝೋನ್ ಗಳ ಜಿಲ್ಲಾವಾರು ವಿವರಗಳನ್ನು ನೀಡಲಾಗಿದೆ.