ನವದೆಹಲಿ: ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ ಬಿಹಾರದ ಬಕ್ಸಾರ್ ಜಿಲ್ಲೆಯ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಕೆ.ಕೆ. ಉಪಾಧ್ಯಾಯೊಂದಿಗೆ ಕೇಂದ್ರ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಚೌಬೆ ಅಸಭ್ಯವಾಗಿ ವರ್ತಿಸಿದ್ದಾರೆ.


COMMERCIAL BREAK
SCROLL TO CONTINUE READING

ಮೂಲಗಳು ಹೇಳುವಂತೆ ಕೇಂದ್ರ ಸಚಿವರಿಗೆ ಅವಕಾಶ ನೀಡಿದ ವಾಹನಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರಿಂದ ಅವರ ಕಾರಿಗೆ ತಡೆಯೊಡ್ಡಲಾಯಿತು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸಚಿವರು ಅಧಿಕಾರಿಗಳೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.ಈಗ ಈ ವಿಡಿಯೋವನ್ನು ಎಎನ್ಐ ಸುದ್ದಿ ಸಂಸ್ಥೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ.



ಇದರಲ್ಲಿ ಅನಗತ್ಯ ವಿಷಯ ಸೃಷ್ಟಿಸಬೇಡಿ ಎಂದು ಸಚಿವರು ಹೇಳಿದ್ದಾರೆ.ಇದಕ್ಕೆ ಉತ್ತರಿಸಿದ ಅಧಿಕಾರಿ ತಾವು ಚುನಾವಣಾ ಆದೇಶ ಪಾಲಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.ಇದಕ್ಕೆ ಆಕ್ರೋಶ್ ಗೊಂಡ ಕೇಂದ್ರ ಸಚಿವ ಹಾಗಾದರೆ ನನ್ನನ್ನು ಜೈಲಿಗೆ ಹಾಕಿ ಎಂದು ಹೇಳಿ ಅಧಿಕಾರಿಗಳ ಜೊತೆ ಅಸಭ್ಯ ವರ್ತನೆ ತೋರಿದ್ದಾರೆ ಎನ್ನಲಾಗಿದೆ. ನಂತರ ಇದಕ್ಕೆ ಶಾಂತವಾಗಿ ಉತ್ತರಿಸಿದ ಅಧಿಕಾರಿ ಚುನಾವಣಾ ಆಯೋಗದ ನಿಯಮ ವಾಹನಗಳನ್ನು ವಶಪಡಿಸಿಕೊಳ್ಳುವುದೇ ಹೊರತು ಸಚಿವರನ್ನಲ್ಲ ಎಂದು ಉತ್ತರಿಸಿದ್ದಾರೆ.ಇದರಿಂದ ಕೆರಳಿದ ಸಚಿವರು ಅವೆಲ್ಲವೂ ಕೂಡ ತಮ್ಮ ವಾಹನಗಳು ನೀನು ವಶಪಡಿಸಿಕೊಳ್ಳುವ ಹಾಗಿಲ್ಲ ಎಂದು ಹೇಳಿದ್ದಾರೆ.


ಇದೇ ವೇಳೆ ಚೌಬೆ ಬೆಂಬಲಿಗರು ಘೋಷಣೆಗಳನ್ನು ಮುಂದುವರೆಸಿದ್ದಾರೆ. ಆಗ ಸಚಿವರ ಬೆಂಗಾವಲು ವಾಹನಗಳು ಅಧಿಕಾರಿಗಳ ಎಚ್ಚರಿಕೆಯನ್ನು ಗಮನಿಸದೆ ಹೋಗಿವೆ ಎಂದು ತಿಳಿದುಬಂದಿದೆ. ಚುನಾವಣಾ ಆಯೋಗದ ನಿಯಮದ ಅನುಗುಣವಾಗಿ ತಾವು ಕ್ರಮ ಜರುಗಿಸುವುದಾಗಿ ಉಪಾಧ್ಯಾಯ ಅವರು ಹೇಳಿದ್ದಾರೆ.