Nitin Gadkari: ಸರ್ಕಾರಿ ನೌಕರರಿಗೆ `ಎಲೆಕ್ಟ್ರಿಕ್ ವಾಹನಗಳ ಬಳಕೆ ಕಡ್ಡಾಯ`..!
ಸರ್ಕಾರಿ ಸಚಿವಾಲಯ ಮತ್ತು ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದು ಕಡ್ಡಾಯ
ನವದೆಹಲಿ: ಸರ್ಕಾರಿ ಸಚಿವಾಲಯ ಮತ್ತು ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದು ಕಡ್ಡಾಯಗೊಳಿಸುವುದಾಗಿ ಸಾರಿಗೆ ಸಚಿವ ನಿತಿನ್ ಗಡ್ಕರಿ ಇಂದು ಪ್ರಕರಣ ದಾಖಲಿಸಿದ್ದಾರೆ.
ಇದೇ ವೇಳೆ ಅವರು ಮಾತನಾಡುತ್ತ ಮನೆಗಳಿಗೆ ಅಡುಗೆ ಅನಿಲ(LPG Gas) ಖರೀದಿಗೆ ಸಹಾಯಧನ ನೀಡುವ ಬದಲು ವಿದ್ಯುತ್ ಅಡುಗೆ ಉಪಕರಣಗಳನ್ನು ಖರೀದಿಸಲು ಸರಕಾರ ಸಹಾಯಧನ ನೀಡಬೇಕು ಎಂದು ಸಲಹೆ ನೀಡಿದರು.
CBSE CTET Answer Key 2021 ಬಿಡುಗಡೆ : Download ಮಾಡುವುದು ಹೇಗೆ?
ಗೋ ಎಲೆಕ್ಟ್ರಿಕ್(Go Electric) ಉದ್ಘಾಟನಾ ಅಭಿಯಾನದಲ್ಲಿ ಮಾತನಾಡಿದ ಗಡ್ಕರಿ, 'ನಾವು ವಿದ್ಯುತ್ ಅಡುಗೆ ಉಪಕರಣಗಳಿಗೆ ಸಬ್ಸಿಡಿ ಏಕೆ ನೀಡುವುದಿಲ್ಲ. ಅಡುಗೆ ಅನಿಲಕ್ಕೆ ಸಬ್ಸಿಡಿ ನೀಡುತ್ತಿದ್ದೇವೆ ಅಂತ ಹೇಳಿದರು. ಇನ್ನೂ ವಿದ್ಯುತ್ ಅಡುಗೆ ಯು ಶುದ್ಧವಾಗಿದ್ದು, ಅನಿಲದ ಆಮದು ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
Coronavirus: ಈ ನಗರಗಳಲ್ಲಿ ಮತ್ತೆ ಕರ್ಫ್ಯೂ ಜಾರಿ : ಶಾಲಾ ಕಾಲೇಜುಗಳು ಬಂದ್
ಇದೇ ವೇಳೆ ಎಲ್ಲ ಸರ್ಕಾರಿ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಕಡ್ಡಾಯಗೊಳಿಸಬೇಕು ಎಂದು ಗಡ್ಕರಿ(Nitin Gadkari) ಸಲಹೆ ನೀಡಿದರು. ಇದೇ ವೇಳೇ ಇಲಾಖೆಯ ನೌಕರರಿಗೆ ಎಲೆಕ್ಟ್ರಿಕ್ ವಾಹನಗಳನ್ನು ಕಡ್ಡಾಯವಾಗಿ ಬಳಸುವಂತೆ ವಿದ್ಯುತ್ ಸಚಿವ ಆರ್.ಕೆ.ಸಿಂಗ್ ಅವರಿಗೆ ಮನವಿ ಮಾಡಿದ ಅವರು ದೆಹಲಿಯಲ್ಲಿ 10 ಸಾವಿರ ಎಲೆಕ್ಟ್ರಿಕ್ ವಾಹನಗಳನ್ನು ಬಳಸಿದರೆ ತಿಂಗಳಿಗೆ 30 ಕೋಟಿ ರೂ.ಉಳಿತಾಯವಾಗುತ್ತದೆ ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತೆ ದಿಶಾ ರವಿ ಮೂರು ದಿನಗಳ ಕಾಲ ಪೋಲಿಸ್ ಕಸ್ಟಡಿಗೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.