ನವದೆಹಲಿ: ಅಚ್ಚರಿಯ ಘಟನೆಯೊಂದರಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ನ ತೈಲ ಬೆಲೆ ಏರಿಕೆಯನ್ನು ಇಳಿಸಿ ಎಂದು ದೆಹಲಿ ಸರ್ಕಾರದ ವಿರುದ್ದ ಕೇಂದ್ರ ಸಚಿವ ವಿಜಯ್ ಗೋಯಲ್ ಅವರು ಎತ್ತಿನ ಬಂಡಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಅಲ್ಲದೆ ತಮ್ಮ ಪ್ರತಿಭಟನೆ ಕುರಿತಾಗಿ ಟ್ವೀಟ್ ಮಾಡಿರುವ ಕೇಂದ್ರ ಸಚಿವ ವಿಜಯ್ ಗೋಯಲ್ " ಇಂದು ಚಾಂದಿನಿ ಚೌಕ್ ನಲ್ಲಿ ರಾಜ್ಯ ಸರ್ಕಾರವು ಪೆಟ್ರೋಲ್ ಬೆಲೆ ದರವನ್ನು ಕಡಿತಗೊಳಿಸಬೇಕೆಂದು ಇಂದು ಪ್ರತಿಭಟನೆಯಲ್ಲಿ ಪಾಲ್ಗೊಂಡೆ. ಆಮ್ ಆದ್ಮಿ ಪಕ್ಷವು ಎಲ್ಲ ರಾಜ್ಯಗಳ ರೀತಿಯಲ್ಲಿ ಇಂದನ ದರಗಳನ್ನು ಇಳಿಸದಿರುವ ಮೂಲಕ ದೆಹಲಿ ಜನರಿಗೆ ಅನ್ಯಾಯವೆಸಗುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.



ಇತ್ತೀಚಿಗೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ವಿಚಾರವಾಗಿ ಪ್ರತಿಪಕ್ಷಗಳು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಭಾರತ ಬಂದ್ ಗೆ ಸಹ ಕರೆ ನೀಡಿದ್ದವು.