ನವದೆಹಲಿ: ಕೈರನಾ ಲೋಕಸಭಾ ಉಪಚುನಾವಣೆಯಲ್ಲಿ  ಪ್ರತಿಪಕ್ಷಗಳ ಒಗ್ಗಟ್ಟಿನ ಮಂತ್ರ ಕೊನೆಗೂ ಯಶಸ್ವಿಯಾಗಿದೆ. ಆ ಮೂಲಕ ಮುಂಬರುವ 2019 ಚುನಾವಣೆಗೆ ಈ ಕ್ಷೇತ್ರ ಪೂರ್ವ ಪೀಠಿಕೆಯನ್ನು ಹಾಕಿದೆ. 


COMMERCIAL BREAK
SCROLL TO CONTINUE READING

ಹೌದು, ಕೈರನಾ ಕ್ಷೇತ್ರ ಇಡೀ ರಾಷ್ಟ್ರವನ್ನು ಗಮನಸೆಳೆದ ಕ್ಷೇತ್ರ ಇದಕ್ಕೆ ಕಾರಣ ಇಲ್ಲಿ ಎಲ್ಲ ಪ್ರಾದೇಶಿಕ ಪಕ್ಷಗಳು  ಬಿಜೆಪಿ ವಿರುದ್ದ ಒಗ್ಗಟ್ಟಿನ ಮಂತ್ರವನ್ನು ಜಪಿಸಿವೆ.ಇದೇ ಕಾರಣದಿಂದಲೇ ಈಗ ಅಲ್ಲಿ ಆರ್ ಎಲ್ ಡಿ ಪಕ್ಷದ ಅಭ್ಯರ್ಥಿ ತಬಸ್ಸುಮ್ ಹಸ್ಸನ್ ಗೆಲವು ಸಾಧಿಸಿದ್ದಾರೆ.



ರಾಷ್ಟ್ರಿಯ ಲೋಕದಳದ ತಬಸ್ಸುಮ್ ಹಸ್ಸನ್  ಬಿಜೆಪಿ ಅಭ್ಯರ್ಥಿ ಮೃಗಂಕಾ ಸಿಂಗ್ ಅವರನ್ನು ಸುಮಾರು 55 ಸಾವಿರ ಮತಗಳ ಅಂತರದಿಂದ ಸೋಲಿಸಿದರು. ಇನ್ನೊಂದೆಡೆ ಸಮಾಜವಾದಿ ಪಕ್ಷದ ಅಭ್ಯರ್ಥಿ ನೈಮುಲ್ ಹಸನ್ ಅವರು ನೂರಪುರ್  ಕ್ಷೇತ್ರದಲ್ಲಿ  6,211 ಮತಗಳ ಅಂತರದಿಂದ ಬಿಜೆಪಿಯ ಅವಾನಿ ಸಿಂಗ್ ಅವರನ್ನು ಸೋಲಿಸಿದರು.


ಉತ್ತರ ಪ್ರದೇಶದ ಕೈರಾನಾ ಕ್ಷೇತ್ರವನ್ನು ಬಿಜೆಪಿಯು ಪ್ರತಿಷ್ಟತೆಯ ಕಣವಾಗಿ ತೆಗೆದುಕೊಂಡಿತ್ತು ಆದ್ದರಿಂದ ಚುನಾವಣಾ ಪ್ರಚಾರದ ವೇಳೆ ಹಲವಾರು ನಾಯಕರು ಇಲ್ಲಿಗೆ ಪದೇ ಪದೇ  ಭೇಟಿ ನೀಡಿದ್ದರು.ಅದರಲ್ಲೂ ಉತ್ತರ ಪ್ರದೇಶದ ಮುಖ್ಯಮಂತ್ರಿ  ಈ ಕ್ಷೇತ್ರಕ್ಕೆ ಹಲವಾರು ಬಾರಿ ಭೇಟಿ ನೀಡಿ ಗೆಲ್ಲೇಲೆ ಬೇಕೆಂದು ಪಣತೊಟ್ಟಿದ್ದರು.ಆದರೆ ವಿರೋಧ ಪಕ್ಷಗಳ ಒಗ್ಗಟ್ಟಿನಿಂದ ಬಿಜೆಪಿ ಪ್ರಾಬಲ್ಯವನ್ನು  ತಡೆಗಟ್ಟುವಲ್ಲಿ ಯಶಸ್ವಿಯಾಗಿವೆ ಎನ್ನಬಹುದು.