ಉಗ್ರರ ಮೃತದೇಹಗಳನ್ನು ತೋರಿಸದ ಹೊರತು ಹೇಗೆ ನಂಬಬೇಕು? ಯೋಧರ ಕುಟುಂಬ ಪ್ರಶ್ನೆ
ಬಾಲ್ ಕೋಟ್ ನಲ್ಲಿ ಭಾರತೀಯ ವಾಯುಸೇನೆ ದಾಳಿಯಿಂದಾಗಿ 300 ಉಗ್ರರು ಹತ್ಯೆಯಾಗಿದ್ದಾರೆ ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿದ ಯೋಧರ ಕುಟುಂಬಗಳು ಈಗ ಅದಕ್ಕೆ ಪುರಾವೆಯನ್ನು ಕೇಳಿವೆ.
ನವದೆಹಲಿ: ಬಾಲ್ ಕೋಟ್ ನಲ್ಲಿ ಭಾರತೀಯ ವಾಯುಸೇನೆ ದಾಳಿಯಿಂದಾಗಿ 300 ಉಗ್ರರು ಹತ್ಯೆಯಾಗಿದ್ದಾರೆ ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿದ ಯೋಧರ ಕುಟುಂಬಗಳು ಈಗ ಅದಕ್ಕೆ ಪುರಾವೆಯನ್ನು ಕೇಳಿವೆ.
ಉತ್ತರ ಪ್ರದೇಶದ ಪ್ರದೀಪ್ ಕುಮಾರ್ ಹಾಗೂ ರಾಮ್ ವಕೀಲ್ ಎನ್ನುವ ಇಬ್ಬರು ಸಿಆರ್ಪಿಎಫ್ ಸೈನಿಕರು ಪುಲ್ವಾಮಾ ಉಗ್ರರ ದಾಳಿಯಯಲ್ಲಿ ಮೃತಪಟ್ಟಿದ್ದರು.ಈಗ ವಾಯುಸೇನೆ ದಾಳಿಯಲ್ಲಿ ಉಗ್ರರು ಮೃತಪಟ್ಟಿದ್ದಾರೆ ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿದ ರಾಮ ವಕೀಲ್ ಸಹೋದರಿ "ನಮ್ಮ ಪ್ರಕರಣದಲ್ಲಿ (ಪುಲ್ವಾಮಾ) ನಾವು ಒಬ್ಬರ ಕೈಗಳನ್ನು, ಯಾರೊಬ್ಬರ ಕಾಲುಗಳನ್ನು ನೋಡಿದ್ದೇವೆ, ಆದರೆ ಈಗ ವಾಯುಸೇನೆ ಮಾಡಿರುವ ದಾಳಿಯಲ್ಲಿ ನಾವು ಏನನ್ನಾದರೂ ನೋಡಬೇಕಾಗಿದೆ. ಬಾಂಬ್ ದಾಳಿಯಾದ ತಕ್ಷಣವೇ ಯಾರೋ ಒಬ್ಬರು ಹೊಣೆ ಹೊತ್ತಿದ್ದಾರೆ ..ಹೌದು ವಾಯುದಾಳಿ ಆಗಿದೆ ನಿಜ, ಆದರೆ ಅದಕ್ಕೆ ಸ್ಪಷ್ಟ ಪುರಾವೆ ಬೇಕು, ಪುರಾವೆ ಇಲ್ಲದ ಹೊರತು ಅದನ್ನು ಹೇಗೆ ಒಪ್ಪಿಕೊಳ್ಳಬಹುದು? ಪಾಕಿಸ್ತಾನದವರಿಗೆ ಯಾವುದೇ ಹಾನಿಯಾಗಿಲ್ಲ ಎಂದು ರಾಮ್ ವೇಕೀಲ್ ನ ಸಹೋದರಿ ರಾಮ್ ರಕ್ಷಾ ಪ್ರಶ್ನಿಸಿದ್ದಾರೆ.
ಇನ್ನೊಂದೆಡೆ ಪ್ರದೀಪ ಕುಮಾರ್ ತಾಯಿ ಸುಲೆಲತಾ ಪ್ರತಿಕ್ರಿಯಿಸಿ 'ನಮಗೆ ನಿಜಕ್ಕೂ ಸಮಾಧಾನವಾಗಿಲ್ಲ,ಸಾಕಷ್ಟು ಮಕ್ಕಳು ಮೃತಪಟ್ಟಿದ್ದಾರೆ,ಆದರೆ ನಾವು ಒಬ್ಬರೇ ಒಬ್ಬರು ಮೃತಪಟ್ಟಿರುವುದನ್ನು ನೋಡಿಲ್ಲ, ಪಾಕ್ ಕಡೆ ಯಾವುದೇ ಮೃತದೇಹಗಳಿಲ್ಲ. ಮತ್ತು ಈ ಸುದ್ದಿ ಇನ್ನು ಧೃಡಪಟ್ಟಿಲ್ಲ, ನಾವು ಇಉಗ್ರರ ಮೃತದೇಹಗಳನ್ನು ಟಿವಿಯಲ್ಲಿ ನೋಡಬೇಕಾಗಿದೆ ಎಂದರು.