UP Elections 2022: ಪ್ರಿಯಾಂಕಾ ಗಾಂಧಿಯಾ `ಏಳು ಪ್ರತಿಜ್ಞೆಗಳು` ಯಾವುವು ಗೊತ್ತಾ?
UP Election 2022: ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಅವರು ಶನಿವಾರ Uttara Pradeshದ ಬಾರಾಬಂಕಿಯ ಹರಖ್ ಬಜಾರ್‌ನಿಂದ 3 ಪ್ರತಿಜ್ಞಾ ಯಾತ್ರೆಗಳಿಗೆ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ರಾಜ್ಯದ ಜನತೆಗೆ ಹಲವು ಭರವಸೆಗಳನ್ನು ನೀಡಿದ್ದಾರೆ.
UP Election 2022: ಕಾಂಗ್ರೆಸ್‌ನ (Congress) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಯುಪಿ ವ್ಯವಹಾರಗಳ ಉಸ್ತುವಾರಿ ಪ್ರಿಯಾಂಕಾ ಗಾಂಧಿ (Priyanka Gandhi) ವಾದ್ರಾ ಅವರು ಶನಿವಾರ ಬಾರಾಬಂಕಿಯ ಹರಖ್ ಬಜಾರ್‌ನಿಂದ 3 ಪ್ರತಿಜ್ಞೆ ಯಾತ್ರೆಗಳಿಗೆ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ, ಅವರು ರಾಜ್ಯದ ಜನರಿಗೆ ಅನೇಕ ಭರವಸೆಗಳನ್ನು ನೀಡಿದ್ದಾರೆ. ತಮ್ಮ ಪಕ್ಷದ ಸರ್ಕಾರ (UP Elections) ರಚನೆಯಾದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಪ್ರಿಯಾಂಕಾ ಹೇಳಿದ್ದಾರೆ. ಇದರೊಂದಿಗೆ 20 ಲಕ್ಷ ಯುವಕರು ಸರ್ಕಾರಿ ಉದ್ಯೋಗಗಳನ್ನು ಪಡೆಯಲಿದ್ದಾರೆ ಎಂದು ಅವರು ಹೇಳಿದ್ದಾರೆ. ಕೊರೊನಾದಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಹಿಳೆಯರು, ರೈತರು, ನಿರುದ್ಯೋಗಿಗಳು, ಗುತ್ತಿಗೆ ಕಾರ್ಮಿಕರು ಮತ್ತು ಕುಟುಂಬಗಳಿಗೆ ಪ್ರಿಯಾಂಕಾ ಹಲವು ಭರವಸೆಗಳನ್ನು ನೀಡಿದ್ದಾರೆ.
ಟಿಕೆಟ್ ನೀಡುವಾಗ ಶೇ.40ರಷ್ಟು ಮಹಿಳೆಯರಿಗೆ ಆದ್ಯತೆ
ಚುನಾವಣೆಯ ವೇಳೆ ಕಾಂಗ್ರೆಸ್ ಪಕ್ಸ್ಶ ಮಹಿಳೆಯರಿಗೆ ಶೇ 40ರಷ್ಟು ಟಿಕೆಟ್ ನೀಡಲಿದೆ ಎಂದು ಪ್ರಿಯಾಂಕಾ ಹೇಳಿದ್ದಾರೆ. ಹುಡುಗಿಯರು ಸ್ಮಾರ್ಟ್ಫೋನ್ ಮತ್ತು ಸ್ಕೂಟಿಯನ್ನು ಪಡೆಯಲಿದ್ದಾರೆ. ಕಾಂಗ್ರೆಸ್ ಸರ್ಕಾರ ರಚನೆಯಾದರೆ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಲಾಗುವುದು, ಗೋಧಿ-ಭತ್ತವನ್ನು (ಪ್ರತಿ ಕ್ವಿಂಟಾಲ್) ರೂ. 2500 ಕ್ಕೆ ಖರೀದಿಸಲಾಗುವುದು ಮತ್ತು ಕಬ್ಬು ಬೆಳೆಗಾರ ರೈತ ತನ್ನ ಬೆಳೆಗೆ ಪ್ರತಿ ಕ್ವಿಂಟಾಲ್ ಗೆ ರೂ. 400 ದರದಲ್ಲಿ ಬೆಲೆ ಪಡೆಯಲಿದ್ದಾನೆ ಎಂದು ಪ್ರಿಯಾಂಕಾ ಭರವಸೆಗಳನ್ನು ನೀಡಿದ್ದಾರೆ.
7th Pay Commission : ಕೇಂದ್ರ ನೌಕರರೆ ಗಮನಿಸಿ : DA 3% ಹೆಚ್ಚಳದಿಂದ ಸಂಬಳ ₹95,000 ವರೆಗೆ ಹೆಚ್ಚಳ! ಹೇಗೆ ಇಲ್ಲಿದೆ ಲೆಕ್ಕಾಚಾರ
ರಾಜ್ಯದ ಜನತೆಗೆ ಈ ಭರವಸೆಗಳನ್ನು ನೀಡಿದ್ದಾಳೆ ಪ್ರಿಯಂಕಾ
'ಎಲ್ಲರ ವಿದ್ಯುತ್ ಬಿಲ್ ಹಾಫ್ ಆಗಲಿದೆ, ಕೊರೊನಾ ಕಾಲದ ಬಾಕಿ ಸಾಫ್ ಆಗಲಿದೆ' ಅಂದರೆ, ಪ್ರತಿಯೊಬ್ಬ ವ್ಯಕ್ತಿಯ ವಿದ್ಯುತ್ ಬಿಲ್ ಅರ್ಧಕ್ಕೆ ಇಳಿಕೆಯಾಗಲಿದೆ ಹಾಗೂ ಅವರು ಉಳಿಸಿಕೊಂಡ ಬಾಕಿ ಹಣ ಪಾವತಿ ಕೂಡ ಮನ್ನಾ ಮಾಡಲಾಗುವುದು ಎಂದರ್ಥ. ಕೊರೊನಾದಿಂದ ಪ್ರಭಾವಕ್ಕೆ ಒಳಗಾಗದ ಕುಟುಂಬಗಳ ಕುರಿತು ಮಾತನಾಡಿರುವ ಪ್ರಿಯಾಂಕಾ, 'ಕೊರೊನಾದಿಂದಾದ ಆರ್ಥಿಕ ನಷ್ಟ ಭರಿಸಲಾಗುವುದು, ಪ್ರಭಾವಕ್ಕೆ ಒಳಗಾದ ಪ್ರತಿ ಕುಟುಂಬದವರಿಗೆ 25 ಸಾವಿರ ಆರ್ಥಿಕ ಸಹಾಯ ಒದಗಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ-Ration Card: ಪಡಿತರ ಚೀಟಿ ಹೊಂದಿದವರಿಗೆ ಉಚಿತ ಸಿಗಲಿದೆ ಪಡಿತರ! ಎಲ್ಲಿ, ಯಾವಾಗ ಮತ್ತು ಹೇಗೆ? ಇಲ್ಲಿದೆ ವಿವರ
20 ಲಕ್ಷ ಯುವಕರಿಗೆ ಸರ್ಕಾರಿ ನೌಕರಿ
ಮುಂಬರುವ ಒಂದು ವಾರದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಘೋಷಣಾ ಪತ್ರವನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿರುವ ಪ್ರಿಯಾಂಕಾ, ತಮ್ಮ ಸರ್ಕಾರ ಒಂದು ವೇಳೆ ಅಸ್ತಿತ್ವಕ್ಕೆ ಬಂದರೆ, ರಾಜ್ಯದ 20 ಲಕ್ಷ ಯುವಕರಿಗೆ ಸರ್ಕಾರಿ ನೌಕರಿ ಸಿಗಲಿದೆ ಎಂಬ ದೊಡ್ಡ ಭರವಸೆಯನ್ನೇ ನೀಡಿದ್ದಾರೆ. ಇನ್ನೊಂದೆಡೆ ಮಹಿಳೆಯರಿಗೆ ಆಹ್ವಾನ ನೀಡಿರುವ ಪ್ರಿಯಾಂಕಾ ಗಾಂಧಿ, ರಾಜ್ಯದ ಅಭಿವೃದ್ಧಿಗೆ ಮಹಿಳೆಯರು ಕೂಡ ಕೊಡುಗೆ ನೀಡಲು ಮುಂದಕ್ಕೆ ಬರಬೇಕು ಎಂದು ಮನವಿ ಮಾಡಿದ್ದಾರೆ. ಉತ್ತರ ಪ್ರದೇಶದ (UP) ಕಾಂಗ್ರೆಸ್ ಪ್ರದೇಶ ಅದ್ಯಕ್ಷ ಅಜಯ್ ಕುಮಾರ್ ಲಲ್ಲೂ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ-ದೀಪಾವಳಿಗೂ ಮೊದಲೆ ರೈತರಿಗೆ ಭರ್ಜರಿ ಗಿಫ್ಟ್! ಡಬಲ್ ಆಗಲಿದೆ PM Kisan ಯೋಜನೆಯ ಹಣ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ