Ration Card: ಪಡಿತರ ಚೀಟಿ ಹೊಂದಿದವರಿಗೆ ಉಚಿತ ಸಿಗಲಿದೆ ಪಡಿತರ! ಎಲ್ಲಿ, ಯಾವಾಗ ಮತ್ತು ಹೇಗೆ? ಇಲ್ಲಿದೆ ವಿವರ

Ration Card Latest News: ಅಕ್ಟೋಬರ್ 31 ರವರೆಗೆ, ಪಡಿತರ ಚೀಟಿ ಹೊಂದಿದವರಿಗೆ ತಲಾ ಮೂರು ಕೆಜಿ ಗೋಧಿ ಮತ್ತು ಎರಡು ಕೆಜಿ ಅಕ್ಕಿಯನ್ನು ಪ್ರತಿ ನೀಡಲಾಗುತ್ತದೆ. ಇದೆ ಅವಧಿಯಲ್ಲಿ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಪ್ರತಿ ಕಾರ್ಡ್‌ಗೆ 20 ಕೆಜಿ ಗೋಧಿ ಮತ್ತು 15 ಕೆಜಿ ಅಕ್ಕಿ ಸಿಗಲಿದೆ. 

Written by - Nitin Tabib | Last Updated : Oct 23, 2021, 03:02 PM IST
  • ಅಕ್ಟೋಬರ್ 31ರ ವರೆಗೆ ಕಾರ್ಡ್ ಧಾರಕರಿಗೆ ಸಿಗಲಿದೆ ಉಚಿತ ಧಾನ್ಯ.
  • ಪ್ರತಿ ಕಾರ್ಡ್ ಹೊಂದಿದವರಿಗೆ ಸಿಗಲಿದೆ ಪಡಿತರ.
  • ಕಾರ್ಡ್ ಹೊಂದಿದವರಿಗೆ ತಲಾ 3 ಕೆ.ಜಿ ಗೋಧಿ ಹಾಗೂ 2 ಕೆ.ಜಿ ಅಕ್ಕಿ ಸಿಗಲಿದೆ.
Ration Card: ಪಡಿತರ ಚೀಟಿ ಹೊಂದಿದವರಿಗೆ ಉಚಿತ ಸಿಗಲಿದೆ ಪಡಿತರ! ಎಲ್ಲಿ, ಯಾವಾಗ ಮತ್ತು ಹೇಗೆ? ಇಲ್ಲಿದೆ ವಿವರ title=
Ration Card Latest News (File Photo)

ನವದೆಹಲಿ:  Ration Card Latest News - ಕರೋನಾ ಸಾಂಕ್ರಾಮಿಕ ಜನರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಈ ಸಮಯದಲ್ಲಿ, ಆದಾಯದ ಮೂಲವು ಬಹುತೇಕ ಖಾಲಿಯಾದ ಅನೇಕ ಕುಟುಂಬಗಳಿವೆ. ಇಂತಹ ಪರಿಸ್ಥಿತಿಯಲ್ಲಿ, ಅನೇಕ ಕುಟುಂಬಗಳು ಆಹಾರಕ್ಕಾಗಿ ಪರದಾಡುವ ಸ್ಥಿತಿ ಎದುರಾಗಿದೆ. . ಆದರೆ, ಅಂತಹವರಿಗಾಗಿ ಸರ್ಕಾರ ಉಚಿತ ಪಡಿತರವನ್ನು ನೀಡುತ್ತಿದೆ. ಇದರ ಅಡಿಯಲ್ಲಿ, ಪಡಿತರ ಚೀಟಿ ಹೊಂದಿರುವವರಿಗೆ (Ration Cards Holders) ಉಚಿತ ಪಡಿತರ (Free Ration) ವ್ಯವಸ್ಥೆ ಮಾಡಲಾಗಿದೆ.

ಎಲ್ಲಿ ಮತ್ತು ಯಾವಾಗ ಪಡಿತರ ವಿತರಣೆಯಾಗಲಿದೆ?
ಲಾಕ್‌ಡೌನ್‌ನಲ್ಲಿ ಪಡಿತರಕ್ಕಾಗಿ (Ration) ಜನರು ಬಹಳಷ್ಟು ತೊಂದರೆಗಳನ್ನು  ಅನುಭವಿಸುತ್ತಿದ್ದಾರೆ. ಆದರೆ ಸರ್ಕಾರ ಈ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇಟ್ಟಿದ್ದು, ಪಡಿತರ ಚೀಟಿ ಇಲ್ಲದವರಿಗೆ ಪಡಿತರ ನೀಡಲು ಯೋಜನೆ ರೂಪಿಸಿದೆ. ಇದರ ಅಡಿಯಲ್ಲಿ ಇದೀಗ ಎರಡನೇ ಹಂತದ ಉಚಿತ ಪಡಿತರ ವಿತರಣೆಯನ್ನು ಅಕ್ಟೋಬರ್‌ನಲ್ಲಿ ಆರಂಭಿಸಲಾಗಿದೆ. ನೀವೂ ಇದರಲ್ಲಿ ಪಾಲ್ಗೊಂಡರೆ ನೀವೂ ಈ ಯೋಜನೆಯ ಲಾಭವನ್ನು ಪಡೆಯಬಹುದು. ಪಡಿತರ ವಿತರಣೆಯ ಸಮಯ, ಹಾಗೂ ಪ್ರತಿ ಕಾರ್ಡ್‌ಗೆ ಎಷ್ಟು ಪಡಿತರ ನೀಡಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಪ್ರತಿ ಕಾರ್ಡ್ ಆಧಾರದ ಮೇಲೆ ಪಡಿತರ ಸಿಗಲಿದೆ
ಯುಪಿಯಲ್ಲಿ (Ration Cards Holders Uttarpradesh) ಅಕ್ಟೋಬರ್ 31 ರವರೆಗೆ, ಕಾರ್ಡ್ ಹೊಂದಿರುವವರಿಗೆ ತಲಾ ಮೂರು ಕೆಜಿ ಗೋಧಿ ಮತ್ತು ಎರಡು ಕೆಜಿ ಅಕ್ಕಿ ನೀಡಲಾಗುತ್ತದೆ. ಆದರೆ, ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಪ್ರತಿ ಕಾರ್ಡ್‌ಗೆ 20 ಕೆಜಿ ಗೋಧಿ ಮತ್ತು 15 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ. ಕರೋನಾದ ಮಾರ್ಗಸೂಚಿಗಳನ್ನು ಅನುಸರಿಸಿ ಜನರು  ಅಲ್ಲಿಗೆ ಹೋಗುವ ಮೂಲಕ ಪಡಿತರವನ್ನು ತೆಗೆದುಕೊಳ್ಳಬಹುದು. ವಾಸ್ತವವಾಗಿ ಕಾರ್ಡ್ ಹೊಂದಿರುವವರು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಹೋಗಿ ಗೋಧಿ ಮತ್ತು ಅಕ್ಕಿಯನ್ನು ತೆಗೆದುಕೊಳ್ಳಬಹುದು.

ಇದನ್ನೂ ಓದಿ-ದೀಪಾವಳಿಗೂ ಮೊದಲೆ ರೈತರಿಗೆ ಭರ್ಜರಿ ಗಿಫ್ಟ್! ಡಬಲ್ ಆಗಲಿದೆ PM Kisan ಯೋಜನೆಯ ಹಣ 

ಎಲ್ಲಿಯವರೆಗೆ ಈ ಪಡಿತರ ಸಿಗಲಿದೆ?
ಕರೋನಾ ಬಿಕ್ಕಟ್ಟಿನಲ್ಲಿ, ಬಡ ಜನರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಈ ಯೋಜನೆಯನ್ನು ಆರಂಭಿಸಿದೆ. ಇದರ ಅಡಿಯಲ್ಲಿ ಪಡಿತರ ಚೀಟಿದಾರರಿಗೆ ಮೂರು ಕೆಜಿ ಗೋಧಿ ಮತ್ತು ಎರಡು ಕೆಜಿ ಅಕ್ಕಿ ನೀಡಲಾಗುತ್ತಿದೆ. ನೀವು ಕೂಡ ಈ ಯೋಜನೆಗೆ ಅರ್ಹರಾಗಿದ್ದರೆ, ನೀವು ಈ ಯೋಜನೆಯ ಲಾಭವನ್ನು ಅಕ್ಟೋಬರ್ 31 ರೊಳಗೆ ಪಡೆಯಬಹುದು. ನೀವು ಅಕ್ಟೋಬರ್ 31 ರವರೆಗೆ ಉಚಿತ ಆಹಾರ ಧಾನ್ಯಗಳನ್ನು ಪಡೆಯಬಹುದು.

ಇದನ್ನೂ ಓದಿ-Viral Video: ನೋಡುಗರ ಎದೆ ಝಲ್ ಎನ್ನಿಸುವಂತಿದೆ ಈ ದೈತ್ಯ ಹೆಬ್ಬಾವು..!

ಎಷ್ಟು ಧಾನ್ಯ ಸಿಗಲಿದೆ?
ಸರ್ಕಾರದ ಈ ಯೋಜನೆಯಡಿ ಅಕ್ಟೋಬರ್ 31ರವರೆಗೆ ಪಡಿತರ ಸಿಗುವುದರಿಂದ ಹಬ್ಬ ಹರಿದಿನಗಳಲ್ಲಿ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ. ಅಲ್ಲದೆ, ದೀಪಾವಳಿ ಮತ್ತು ಛತ್ ಪೂಜೆ ಸಮಯದಲ್ಲಿ ಪ್ರತಿ ಮನೆಗೆ ಪಡಿತರ ತಲುಪಲಿದೆ.

ಇದನ್ನೂ ಓದಿ-ಉತ್ತರಾಖಂಡದಲ್ಲಿ ಹಿಮದುರಂತ: ದಾರಿತಪ್ಪಿದ್ದ 17 ಚಾರಣಿಗರಲ್ಲಿ 11 ಮಂದಿ ಶವವಾಗಿ ಪತ್ತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News