ನವದೆಹಲಿ: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್  (Union Public Service Commission-UPSC) ಇಂಟರ್ವ್ಯೂ ಪ್ರಾರಂಭವಾಗಿವೆ. ಕರೋನಾ ಸಾಂಕ್ರಾಮಿಕ ರೋಗದಿಂದ ದೀರ್ಘಕಾಲದವರೆಗೆ ಸ್ಥಗಿತಗೊಂಡಿದ್ದ ನಾಗರಿಕ ಸೇವೆಗಳ ಸಂದರ್ಶನ 2019 (Civil Services Exam Interview 2019) ಜುಲೈ 20 ರಿಂದ ಪ್ರಾರಂಭವಾಗಿದೆ.


COMMERCIAL BREAK
SCROLL TO CONTINUE READING

ಸಂಪೂರ್ಣ 10 ದಿನಗಳು ಅಂದರೆ ಜುಲೈ 30 ರವರೆಗೆ ನಡೆಯುತ್ತವೆ. ಈ ಮೊದಲು ಈ ಸಂದರ್ಶನವನ್ನು ಮಾರ್ಚ್ 23 ರಿಂದ ಏಪ್ರಿಲ್ 3 ರವರೆಗೆ ನಡೆಸಬೇಕಿತ್ತು. ಈ ಬಾರಿ ಯುಪಿಎಸ್‌ಸಿ ಸಂದರ್ಶನದಲ್ಲಿ 624 ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ.


ನೀವು ಯುಪಿಎಸ್‌ಸಿ (UPSC) ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ ಯುಪಿಎಸ್‌ಸಿ ವೆಬ್‌ಸೈಟ್ upc.gov.in ಗೆ ಹೋಗಿ ನಿಮ್ಮ ಸಂದರ್ಶನದ ದಿನಾಂಕ ಮತ್ತು ಸಮಯದ ಬಗ್ಗೆ ಮಾಹಿತಿಯನ್ನು ಪಡೆಯಬಹುದು.


ವೇಳಾಪಟ್ಟಿಯಂತೆ ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯ ಸಂದರ್ಶನವು ಬೆಳಿಗ್ಗೆ 9.00 ಕ್ಕೆ ಪ್ರಾರಂಭವಾಗಲಿದೆ. ಸಂದರ್ಶನಗಳು ಎರಡು ಪಾಳಿಯಲ್ಲಿರುತ್ತವೆ. ಮೊದಲ ಶಿಫ್ಟ್ ಬೆಳಿಗ್ಗೆ 9 ರಿಂದ ಪ್ರಾರಂಭವಾಗಲಿದ್ದು, ಎರಡನೇ ಶಿಫ್ಟ್ ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗಲಿದೆ.


2020 ರ ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆ ಅಕ್ಟೋಬರ್ 4 ರಂದು ನಡೆಯಲಿದೆ. ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಈ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿ ಪಡೆಯುವ ಕುರಿತು ಚರ್ಚೆ ನಡೆಯಿತು, ಆದರೆ ಯುಪಿಎಸ್‌ಸಿ 'ಸಿವಿಲ್ ಸರ್ವೀಸಸ್ ಪ್ರಿಲಿಮ್ಸ್ ಪರೀಕ್ಷೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದಾರೆ, ಆದ್ದರಿಂದ ಈ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸುವುದು ಕಷ್ಟ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.