ಕೇಂದ್ರ ಬಜೆಟ್ ನಿಂದ ಟಿಡಿಪಿ ಅಸಮಾಧಾನ, ತುರ್ತು ಸಭೆಗೆ ಕರೆ
ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಕೇಂದ್ರ ಬಜೆಟ್ ಮಂಡಿಸಿದ ಬೆನ್ನಲ್ಲೇ ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕರು ಫೆಬ್ರವರಿ 4 ರ ಭಾನುವಾರದಂದು ಪಕ್ಷದ ತುರ್ತು ಸಭೆ ಕರೆದಿದ್ದಾರೆ.
ಅಮರಾವತಿ: ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಕೇಂದ್ರ ಬಜೆಟ್ ಮಂಡಿಸಿದ ಬೆನ್ನಲ್ಲೇ ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕರು ಫೆಬ್ರವರಿ 4 ರ ಭಾನುವಾರದಂದು ಪಕ್ಷದ ತುರ್ತು ಸಭೆ ಕರೆದಿದ್ದಾರೆ.
ರಾಷ್ಟ್ರೀಯ ಡೆಮಾಕ್ರಟಿಕ್ ಒಕ್ಕೂಟ (NDA) ದಲ್ಲಿರುವ ಬಿಜೆಪಿಯ ಟಿಡಿಪಿ, ಆಂಧ್ರಪ್ರದೇಶಕ್ಕೆ ಬಜೆಟ್ನಲ್ಲಿ ಮೀಸಲಾಗಿರುವ "ಕಚ್ಚಾ ವ್ಯವಹಾರ"ದ ಬಗ್ಗೆ ಕೋಪಗೊಂಡಿದ್ದು, ಈ ಕುರಿತು ವ್ಯಕ್ತವಾಗಿರುವ ಅಸಮಾಧಾನವನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲು ಪಕ್ಷ ನಿರ್ಧರಿಸಿದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
ಕಳೆದ ವಾರ, ರಾಜ್ಯ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಶನಿವಾರದಂದು ಟಿಡಿಪಿ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಸುಳಿವು ನೀಡಿದ್ದರು. ಒಂದು ವೇಳೆ ಬಿಜೆಪಿ ಮೈತ್ರಿ ಮುಂದುವರಿಸಲು ಬಯಸದಿದ್ದರೆ ಟಿಡಿಪಿ ತನ್ನಪಾಡಿಗೆ ಇರುವುದಾಗಿ ಅವರು ಹೇಳಿದ್ದರು.
ಅಂದು ನಡೆದ ಪ್ರತಿಭಟನೆದಲ್ಲಿ ಅವರು ಪಕ್ಷದ ಇಬ್ಬರು ಸಂಸದರು ಸ್ಥಾನ ತೊರೆಯುವುದಾಗಿ ಎಚ್ಚರಿಸಿದ್ದರು. ಆದರೆ ನಾಯ್ಡು ಅವರು ಭಾನುವಾರ ನಡೆಯಲಿರುವ ಟಿಡಿಪಿ ಪಾರ್ಲಿಮೆಂಟರಿ ಸಭೆಯಲ್ಲಿ ಎಲ್ಲ ಸಮಸ್ಯೆಯೂ ಬಗೆಯರಿಯಲಿದ್ದು, ಎಲ್ಲವೂ ಸರಿಯಾಗಲಿದೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
"ಕೇಂದ್ರದಿಂದ ರಾಜ್ಯಕ್ಕೆ ಅಗತ್ಯವಿರುವ ನಿಧಿಗಳ ಬಗ್ಗೆ ವಿವರವಾದ ವರದಿ ನೀಡಿದ್ದರೂ, ಈ ಬಾರಿಯ ಬಜೆಟ್ ನಲ್ಲಿ ಹಣಕಾಸು ಸಚಿವ ಜೇಟ್ಲಿ ಆಂಧ್ರಪ್ರದೇಶವನ್ನು ಸಂಪೂರ್ಣವಾಗಿ ಮರೆತಿದ್ದಾರೆ ಎಂದು ತೋರುತ್ತದೆ" ಎಂದು ಕೃಷಿ ಸಚಿವ ಸೋಮಿರೆಡ್ಡಿ ಚಂದ್ರಮೋಹನ್ ರೆಡ್ಡಿ ಅವರು ಮುಖ್ಯಮಂತ್ರಿಯೊಂದಿಗೆ ಸಭೆಯ ಬಳಿಕ ಹೇಳಿದರು.
"ಕೇಂದ್ರವು ಆಂಧ್ರದ ಅಗತ್ಯತೆಗಳನ್ನು ಕಂಡೂ ಕಾಣದಂತಿರುವುದು ಕಂಡು ನಮಗೆ ಬಹಳ ಬೇಸರ ತಂದಿದೆ. ಕೇಂದ್ರವು ನಮ್ಮ ಅಸಮಾಧಾನವನ್ನು ಅರಿಯುವಂತಾಗಬೇಕು. ಇದಕ್ಕೆ ಕೇಂದ್ರ ಸ್ಪಂದಿಸಿದರೆ ನಾವೂ ಮೊದಲಿನಂತೆಯೇ ಇರುತ್ತೇವೆ. ಒಂದು ವೇಳೆ ಕೇಂದ್ರ ಕಳೆದ ನಾಲ್ಕು ವರ್ಷಗಳಂತೆಯೇ ವರ್ತಿಸಿದರೆ, ಅದು ಸಮರ್ಥನೀಯವಲ್ಲ ಎಂದು ಸೋಮಿರೆಡ್ಡಿ ಹೇಳಿದ್ದಾರೆ.