ನವದೆಹಲಿ:ಶಾಂತಿ ಮತ್ತು ಅಹಿಂಸಾ ತತ್ವಗಳಿಗೆ ಮಹಾತ್ಮಾ ಗಾಂಧಿ ನೀಡಿರುವ ಕೊಡುಗೆಯನ್ನು ಗುರುತಿಸಿ ಅಮೆರಿಕಾದ ಕಾಂಗ್ರೆಸ್ ಅವರಿಗೆ ಮರಣೋತ್ತರವಾಗಿ ಚಿನ್ನದ ಪದಕವನ್ನು ನೀಡಿದೆ. 


COMMERCIAL BREAK
SCROLL TO CONTINUE READING

ಇದೆ ಸೆಪ್ಟೆಂಬರ್ 23 ರಂದು ನ್ಯೂಯಾರ್ಕ್ನ ಕಾಂಗ್ರೆಸಿನ  ಕ್ಯಾರೊಲಿನ್ ಮ್ಯಾಲೊನಿ ಅವರು ಅಮೇರಿಕಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಚಿನ್ನದ ಪದಕ ನಿಡುವ ಪ್ರಸ್ತಾವನೆಯನ್ನು ಪರಿಚಯಿಸಿದರು, ಇದಕ್ಕೆ ಉಳಿದ ಸದಸ್ಯರೆಲ್ಲರೂ ಸಹಿತ ಒಪ್ಪಿಗೆ ನೀಡಿದರು.


ಯುಎಸ್ ಕಾಂಗ್ರೆಸ್ಸಿನ ಚಿನ್ನದ ಪದಕ ಅತ್ಯುನ್ನತ ನಾಗರಿಕ ಗೌರವವಾಗಿದೆ ಮತ್ತು ಕೆಲವೇ ವಿದೇಶಿಯರಿಗೆ ಈ ಪ್ರಶಸ್ತಿ ದೊರಕಿದೆ. ಮದರ್ ತೆರೇಸಾ (1997), ನೆಲ್ಸನ್ ಮಂಡೇಲಾ (1998), ಪೋಪ್ ಜಾನ್ ಪಾಲ್ II (2000), ದಲೈಲಾಮಾ (2006), ಆಂಗ್ ಸಾನ್ ಸ್ಸು ಕಿ (2008), ಮುಹಮ್ಮದ್ ಯೂನಸ್ (2010) ಮತ್ತು ಶಿಮನ್ ಪೆರೆಸ್ (2014) ರವರು ಇದುವರೆಗೆ  ಈ ಗೌರವಕ್ಕೆ ಪಾತ್ರರಾಗಿದ್ದಾರೆ.


ಮಹಾತ್ಮ ಗಾಂಧಿಯವರ ಐತಿಹಾಸಿಕ ಅಹಿಂಸಾತ್ಮಕ  ಸತ್ಯಾಗ್ರಹವು ಇಡೀ ರಾಷ್ಟ್ರವೊಂದಕ್ಕೆ ಮತ್ತು ಪ್ರಪಂಚಕ್ಕೆ ಸ್ಫೂರ್ತಿ ನೀಡಿದೆ, ಆ ಮೂಲಕ ಅವರು ಇತರರನ್ನು ಸೇವೆಗೆ ತೊಡಗಿಸಿಕೊಳ್ಳುವಲ್ಲಿ ಸ್ಪೂರ್ತಿದಾಯಕರಾಗಿದ್ದಾರೆ ಎಂದು ಯುಎಸ್ ಕಾಂಗ್ರೆಸ್ ತನ್ನ  ಪ್ರಕಟಣೆಯಲ್ಲಿ ತಿಳಿಸಿದೆ.ಅಲ್ಲದೆ ಗಾಂಧಿಜಿಯವರ ಹೋರಾಟವು ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಹೋರಾಟಗಾರರಿಗೆ ಮಾದರಿಯಾಗಿದೆ ಎಂದು ಯುಎಸ್ ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.