ವಾಶಿಂಗ್ಟನ್: American Dream & Promise Act - ಅಮೆರಿಕಾದಲ್ಲಿ ವಾಸಿಸುತ್ತಿರುವ ಸುಮಾರು ಅರ್ಧ ಮಿಲಿಯನ್ಗೂ ಹೆಚ್ಚು ಭಾರತೀಯರಿಗೆ ನೇರ ಲಾಭ ನೀಡುವ 'ಅಮೇರಿಕನ್ ಡ್ರೀಮ್ ಅಂಡ್ ಪ್ರಾಮಿಸ್ ಆಕ್ಟ್'ಗೆ (American Dream & Promise Act)ಅಮೆರಿಕಾದ ಸಂಸತ್ತು ಅಂಗೀಕಾರ ನೀಡಿದೆ.  ಪ್ರಸ್ತುತ ಸಂಸತ್ತಿನ ಕೆಳಮನೆ ಪ್ರತಿನಿಧಿಗಳ ಸದನದಲ್ಲಿ ಇದಕ್ಕೆ ಅಂಗೀಕಾರ ನೀಡಲಾಗಿದೆ. ಬಾಲ್ಯದಿಂದಲೂ ಅಮೆರಿಕಾದಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗರಿಗೆ ಪೌರತ್ವ ಪಡೆಯಲು ಇದು ಅನುಕೂಲ ಮಾಡಿಕೊಡಲಿದೆ. ಭಾರತೀಯರ ಕುರಿತು ಹೇಳುವುದಾರೆ, ಪ್ರಸ್ತುತ ಅಮೆರಿಕಾದಲ್ಲಿ (America) ನೆಲೆಸಿರುವ ಸುಮಾರು ಐದು ಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಇದರಿಂದ ನೇರ ಲಾಭವಾಗಲಿದೆ. 


COMMERCIAL BREAK
SCROLL TO CONTINUE READING

'ಹಿಂದೂಸ್ತಾನ್'ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಅಮೆರಿಕಾದ ಕೆಳಮನೆ 'ಅಮೇರಿಕನ್ ಡ್ರೀಮ್ ಅಂಡ್ ಪ್ರಾಮಿಸ್ ಆಕ್ಟ್ ಅನ್ನು 228-197 ಮತಗಳ ಅಂತರದಿಂದ ಅಂಗೀಕರಿಸಿ ಅದನ್ನು ಸೆನೆಟ್ ಗೆ ಕಳುಹಿಸಿದೆ.  ಸೆನೆಟ್ ನಲ್ಲಿ ಒಂದೊಮ್ಮೆ ಈ ಮಸೂದೆಗೆ ಅಂಗೀಕಾರ ದೊರೆತರೆ ಅದು ಕಾನೂನಿನ ರೂಪ ಪಡೆದುಕೊಳ್ಳಲಿದೆ. ಕಾನೂನಿನ ನಿಗಾದಲ್ಲಿರಬೇಕಾದ ಹಾಗೂ ತಮ್ಮ ದೇಶಕ್ಕೆ ಮರಳುವ ತೂಗುಗತ್ತಿ ಎದುರಿಸುತ್ತಿರುವವರಿಗೆ ಈ ಮಸೂದೆಯಿಂದ ನೇರ ಲಾಭವಾಗಲಿದೆ.


Joe Biden ಅವರಿಂದ ಬೆಂಬಲ
ಅಮೇರಿಕಾ ಸರ್ಕಾರದ ಈ ಹೆಜ್ಜೆಯಿಂದ ಅಲ್ಲಿರುವ ಸುಮಾರು 5 ಲಕ್ಷಕ್ಕೂ ಹೆಚ್ಚು ಭಾರತೀಯರು ಸೇರಿದಂತೆ ಸುಮಾರು ಒಂದು ಕೋಟಿ 10 ಲಕ್ಷ ವಲಸಿಗರಿಗೆ ಯಾವುದೇ ರೀತಿಯ ದಾಖಲೆಗಳಿಲ್ಲದ ಅಮೆರಿಕದ ಪೌರತ್ವ ಪಡೆಯಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಲಾಗುತ್ತಿದೆ.  ಸುಮಾರು 1.1 ಕೋಟಿ ವಲಸಿಗರಿಗೆ ದೇಶದ ಪೌರತ್ವ ಪಡೆಯಲು ದಾರಿ ಮಾಡಿಕೊಡುವ ಮಸೂದೆಯನ್ನು ಕಾಂಗ್ರೆಸ್ ಅಂಗೀಕರಿಸಬೇಕೆಂದು ತಾನು ಬಯಸುತ್ತೇನೆ ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಜೋ ಬಿಡನ್ ಈ ಮಸೂದೆಯನ್ನು ಬೆಂಬಲಿಸಿದ್ದಾರೆ. ಇದನ್ನು ಅಮೆರಿಕದ ವಲಸೆ ನೀತಿ ಸುಧಾರಣೆಯ ಪ್ರಮುಖ ಹೆಜ್ಜೆ ಎಂದೇ ಭಾವಿಸಲಾಗುತ್ತಿದೆ.


ಇದನ್ನೂ ಓದಿ- ಅಮೇರಿಕಾದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೇಮ್ಸ್ ಆಸ್ಟಿನ್ ಗೆ Guard Of Honour ಗೌರವ


ಪ್ರತಿನಿಧಿ ಸಭೆಯ ಕುರಿತು ಶ್ಲಾಘನೆ ವ್ಯಕ್ತಪಡಿಸಿದ ಪ್ರೆಸಿಡೆಂಟ್
ನಾನು ಈ ಮಸೂದೆಯನ್ನು ಬೆಂಬಲಿಸುತ್ತೇನೆ ಮತ್ತು ಈ ಮಹತ್ವದ ಕಾನೂನನ್ನು ಅಂಗೀಕರಿಸಿದ ಪ್ರತಿನಿಧಿಗಳ ಸದನವನ್ನು ಶ್ಲಾಘಿಸುತ್ತೇನೆ. ಇದು ತಾತ್ಕಾಲಿಕ ಸಂರಕ್ಷಣೆಯ ಸ್ಥಿತಿಯಲ್ಲಿರುವವರಿಗೆ  (ಟಿಪಿಎಸ್)  ಮತ್ತು ಅಮೆರಿಕಾದಲ್ಲಿ ಉಳಿಯಲು ಬಯಸುವವರಿಗೆ ಮತ್ತು ಬಾಲ್ಯದಲ್ಲಿ ಅಮೆರಿಕಕ್ಕೆ ಬಂದು ನೆಲೆಸಿದ ಯುವಕರಿಗೆ ಪರಿಹಾರ ನೀಡಲಿದೆ ಎಂದು ಅವರು ಹೇಳಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಬಿಡೆನ್ ಕ್ಯಾಂಪೇನ್ ಬಿಡುಗಡೆ ಮಾಡಿರುವ ಒಂದು ನೀತಿ ದಾಖಲೆಯ ಪ್ರಕಾರ, ಭಾರತದ ಸುಮಾರು 500,000 ಕ್ಕೂ ಹೆಚ್ಚು ಜನರು (American Indians) ಸೇರಿದಂತೆ  ಅಮೆರಿಕಾದಲ್ಲಿ ಸುಮಾರು 11 ಮಿಲಿಯನ್ ವಲಸಿಗರು ನೆಲೆಸಿದ್ದಾರೆ ಎಂದು ಹೇಳಲಾಗಿರುವುದು ಇಲ್ಲಿ ಉಲ್ಲೇಖನೀಯ.


ಇದನ್ನೂ ಓದಿ-ಭಾರತ- ಅಮೇರಿಕಾದ ದ್ವೀಪಕ್ಷೀಯ ಸಂಬಂಧದಲ್ಲಿ ಮಹತ್ವದ ಬೆಳವಣಿಗೆ


ಮುದ್ರೆಯೋತ್ತಿದ ಸೆನೆಟರ್ ಗಳು
ಮತ್ತೊಂದೆಡೆ ಡೊನಾಲ್ಡ್ ಟ್ರಂಪ್ ಅವರು ಕೆಲವು ವಲಸೆರಹಿತ ವೀಸಾಗಳಿಗೆ ವಿಧಿಸಿದ್ದ ನಿಷೇಧವನ್ನು ತೆರೆವುಗೊಳಿಸುವಂತೆ ಐವರು ಡೆಮೋಕ್ರಾಟ್ ಸೆನೆಟರ್‌ಗಳು ಬಿಡೆನ್ ಅವರನ್ನು ಕೋರಿದ್ದಾರೆ.  ಇವುಗಳಲ್ಲಿ ಎಚ್ -1 ಬಿ ವೀಸಾ ಸೇರಿದ್ದು, ಇದು ಭಾರತೀಯ ಐಟಿ ವೃತ್ತಿಪರರಲ್ಲಿ ಬಹಳ ಜನಪ್ರಿಯವಾಗಿದೆ. ಈ ನಿಷೇಧದಿಂದಾಗಿ ಅಮೆರಿಕದ ಉದ್ಯೋಗದಾತರು, ಅವರ ವಿದೇಶಿ ಮೂಲದ ವೃತ್ತಿಪರ ಉದ್ಯೋಗಿಗಳು ಮತ್ತು ಅವರ ಕುಟುಂಬಗಳು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಯುಎಸ್ ಸೆನೆಟರ್‌ಗಳು ಹೇಳಿದ್ದಾರೆ. 2020 ರ ಜೂನ್‌ನಲ್ಲಿ ಟ್ರಂಪ್ (Donald Trump) ಮಾಡಿದ್ದ ಘೋಷಣೆ -10052 ಮೂಲಕ ಎಚ್ -1 ಬಿ, ಎಲ್ -1, ಹೆಚ್ -2 ಬಿ ಮತ್ತು ಜೆ -1 ವೀಸಾಗಳ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ.


ಇದನ್ನೂ ಓದಿ-ವಿಮಾನದ ಮೆಟ್ಟಿಲು ಏರುವ ವೇಳೆ 3 ಬಾರಿ ಎಡವಿದ ಅಮೇರಿಕ ಅಧ್ಯಕ್ಷ Joe Biden


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.