Guard Of Honour: ಅಮೇರಿಕಾದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೇಮ್ಸ್ ಆಸ್ಟಿನ್ ಗೆ ಗಾರ್ಡ್ ಆಫ್ ಆನರ್ ಗೌರವ

US Defence Secretary Visit To India - ಆಸ್ಟಿನ್ ಮೂರು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ ಮತ್ತು ಈ ಅವಧಿಯಲ್ಲಿ ಚೀನಾ ವತಿಯಿಂದ ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಆಕ್ರಮಣಶೀಲತೆಯ ಮಧ್ಯೆ ನಿಕಟ ಪಾಲುದಾರರೊಂದಿಗೆ ಸಹಕಾರವನ್ನು ಹೆಚ್ಚಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆಸ್ಟಿನ್ ತನ್ನ ಮೊದಲ ಮೂರು ದೇಶಗಳ ವಿದೇಶ ಪ್ರವಾಸದ ಭಾಗವಾಗಿ ಭಾರತಕ್ಕೆ ಆಗಮಿಸಿದ್ದಾರೆ.

Written by - Nitin Tabib | Last Updated : Mar 20, 2021, 01:06 PM IST
  • ಅಮೇರಿಕಾದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೇಮ್ಸ್ ಆಸ್ಟಿನ್ ಭಾರತ ಭೇಟಿ.
  • ಸ್ವಾಗತ ಕೋರಿ ಗಾರ್ಡ್ ಆಫ್ ಆನರ್ ನೀಡಿ ಗೌರವಿಸಿದ ರಾಜನಾಥ್ ಸಿಂಗ್.
  • ಉಭಯ ದೇಶಗಳ ರಕ್ಷಣಾ ಸಂಬಂಧಗಳ ಬಲವರ್ಧನೆ ಕುರಿತು ಚರ್ಚೆ.
Guard Of Honour: ಅಮೇರಿಕಾದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೇಮ್ಸ್ ಆಸ್ಟಿನ್ ಗೆ ಗಾರ್ಡ್ ಆಫ್ ಆನರ್ ಗೌರವ title=
US Defence Secretary Meets PM Narendra Modi (File Photo)

ನವದೆಹಲಿ: US Defence Secretary Visit To India - ತಮ್ಮ ಮೊದಲ ಭಾರತ ಭೇಟಿಗೆ ಆಗಮಿಸಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರು ಇಂದು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದ್ದಾರೆ. ಇದರ ನಂತರ, ರಕ್ಷಣಾ ಸಚಿವ (Defence Minister) ರಾಜನಾಥ್ ಸಿಂಗ್ (Rajnath Singh) ಅವರು ಲಾಯ್ಡ್ ಆಸ್ಟಿನ್ ಅವರನ್ನು ವಿಜ್ಞಾನ ಭವನದಲ್ಲಿ ಸ್ವಾಗತಿಸಿದ್ದಾರೆ  ಮತ್ತು ಅವರಿಗೆ ಗಾರ್ಡ್ ಆಫ್ ಆನರ್ (Guard Of Honour) ನೀಡಿ ಗೌರವಿಸಿದ್ದಾರೆ.

ಉಭಯ ದೇಶಗಳ ರಕ್ಷಣಾ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ (US Defence Secretary) ಲಾಯ್ಡ್ ಜೇಮ್ಸ್ ಆಸ್ಟಿನ್ (Lloyd James Austin), ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಎನ್ಎಸ್ಎ ಅಜಿತ್ ದೋವಲ್ ಅವರೊಂದಿಗೆ ಸಂಕ್ಷಿಪ್ತವಾಗಿ ಚರ್ಚೆ ನಡೆಸಿದ್ದಾರೆ. ಬಿಡೆನ್ ಆಡಳಿತದ ಯಾವುದೇ ಉನ್ನತ ಕಾರ್ಯದರ್ಶಿಯ ಮೊದಲ ಭಾರತ ಭೇಟಿಯ ಭಾಗವಾಗಿ, ಯುಎಸ್ ರಕ್ಷಣಾ ಸಚಿವ ಆಸ್ಟಿನ್ ಮೂರು ದಿನಗಳ ಭೇಟಿಗಾಗಿ ಶುಕ್ರವಾರ ಭಾರತಕ್ಕೆ ಬಂದಿಳಿದಿದ್ದಾರೆ. ಇಂಡೋ-ಪೆಸಿಫಿಕ್ ಸೇರಿದಂತೆ ಈ ಪ್ರದೇಶದಲ್ಲಿ ಚೀನಾ ವತಿಯಿಂದ ಹೆಚ್ಚುತ್ತಿರುವ ಮಿಲಿಟರಿ ಆಕ್ರಮಣವನ್ನು ಗಮನದಲ್ಲಿಟ್ಟುಕೊಂಡು ದ್ವಿಪಕ್ಷೀಯ ರಕ್ಷಣಾ ಮತ್ತು ಭದ್ರತಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಅವರು ಹೊಂದಿದ್ದಾರೆ. 

ಇದನ್ನೂ ಓದಿ- ವಿಮಾನದ ಮೆಟ್ಟಿಲು ಏರುವ ವೇಳೆ 3 ಬಾರಿ ಎಡವಿದ ಅಮೇರಿಕ ಅಧ್ಯಕ್ಷ Joe Biden

ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಆಸ್ಟಿನ್ ಭೇಟಿ
ಇದಕ್ಕೂ ಮೊದಲು ನಿನ್ನೆ ಸಂಜೆ ಲಾಯ್ಡ್ ಜೇಮ್ಸ್,  ಪಿಎಂ ಮೋದಿಯವರನ್ನು (PM Narendra Modi) ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ಮತ್ತು ಆಸ್ಟಿನ್ ನಡುವಿನ ಚರ್ಚೆಯ ನಂತರ, ಯುಎಸ್ ರಕ್ಷಣಾ ಸಚಿವರು ದ್ವಿಪಕ್ಷೀಯ ರಕ್ಷಣಾ ಸಂಬಂಧವನ್ನು ಬಲಪಡಿಸಲು ವಾಷಿಂಗ್ಟನ್‌ನ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ ಎಂದು ಪ್ರಧಾನಿ ಕಚೇರಿ ಹೊರಡಿಸಿರುವ ತನ್ನ ಪ್ರಕಟಣೆಯಲ್ಲಿ ಹೇಳಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮತ್ತು ಅದರಾಚೆ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯ ಕಾರ್ಯತಂತ್ರದ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸುವ ಬಲವಾದ ನಂಬಿಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ-ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಕ್ಷಮಾಪಣೆಗೆ ಪಟ್ಟು ಹಿಡಿದ ರಷ್ಯಾ

ಪೂರ್ವ ಲಡಾಖ್ ನ ಎಲ್ಲಾ ಮುಖಾಮುಖಿ ಪ್ರದೇಶಗಳಲ್ಲಿ ಸೈನಿಕರನ್ನು ತೆರವುಗೊಳಿಸಲು ಭಾರತ ಮತ್ತು ಚೀನಾ ದೇಶಗಳು ಮುಂದಾದ ಹಿನ್ನೆಲೆ ಆಸ್ಟಿನ್ ಅವರ ಈ ಭೇಟಿ ಭಾರಿ ಮಹತ್ವಪಡೆದುಕೊಂಡಿದೆ. ಈಗಾಗಲೆ ಪ್ಯಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣದ ತೀರದಲ್ಲಿರುವ ಪ್ರದೇಶಗಳಿಂದ ಉಭಯ ದೇಶಗಳು  ತಮ್ಮ ಸೈನ್ಯವನ್ನು ಹಿಂಪಡೆಯುವ ಕೆಲಸ  ಪೂರ್ಣಗೊಳಿಸಿವೆ. ಆಸ್ಟಿನ್ ಮತ್ತು ಸಿಂಗ್ ಜನವರಿ 27 ರಂದು ದೂರವಾಣಿ ಸಂಭಾಷಣೆ ಮೂಲಕ ಮಾತುಕತೆ ನಡೆಸಿದ್ದರು. ಇಂಡೋ-ಯುಎಸ್ ರಕ್ಷಣಾ ಸಂಬಂಧಗಳು ಕಳೆದ ಕೆಲವು ವರ್ಷಗಳಲ್ಲಿ ಹೊಸ ಮಟ್ಟಕ್ಕೆ ತಲುಪಿವೆ. ಜೂನ್ 2016 ರಲ್ಲಿ ಯುಎಸ್ ಭಾರತಕ್ಕೆ 'ಪ್ರಮುಖ ರಕ್ಷಣಾ ಪಾಲುದಾರ' ಸ್ಥಾನಮಾನ ನೀಡಿತ್ತು ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-H-1B visa ಪಾಲಿಸಿ ಬಗ್ಗೆ ಬಿಡೆನ್ ಮಹತ್ವದ ನಿರ್ಧಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News