ಹೌಡಿ ಮೋದಿ! `ಗ್ರೇಟ್ ಡೇ` ಎಂದು ಟ್ವೀಟ್ ಮಾಡಿದ ಡೊನಾಲ್ಡ್ ಟ್ರಂಪ್ !
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೌಡಿ ಮೋದಿಯಲ್ಲಿ ಮಾತನಾಡಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.
ನವದೆಹಲಿ: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೌಡಿ ಮೋದಿಯಲ್ಲಿ ಮಾತನಾಡಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.
'ನಾವು ಹೂಸ್ಟನ್‌ಗೆ ಹೋಗುತ್ತೇವೆ ಮತ್ತು ಪ್ರಧಾನಿ ಮೋದಿಯವರೊಂದಿಗೆ ತುಂಬಿರುವ ದೊಡ್ಡ ಕ್ರೀಡಾಂಗಣದಲ್ಲಿರುತ್ತೇವೆ' ಎಂದು ಶ್ರೀ ಟ್ರಂಪ್ ಅವರು ಹೂಸ್ಟನ್‌ಗೆ ತೆರಳುವ ಮೊದಲು ಶ್ವೇತಭವನದ ದಕ್ಷಿಣ ಲಾನ್ಸ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವೀಕರಿಸಲು ಭಾರತೀಯ ಸಮುದಾಯವು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಟ್ರಂಪ್ ಭಾಗವಹಿಸಲಿದ್ದಾರೆ.
'ಮೋದಿ ತಮ್ಮೊಂದಿಗೆ ಬರುತ್ತಿರಾ ಎಂದು ಕೇಳಿದರು ಅದಕ್ಕೆ ನಾನು ಒಪ್ಪಿಕೊಂಡಿದ್ದೇನೆ ಮತ್ತು ನಾವು ಒಳ್ಳೆಯ ಸಮಯವನ್ನು ಹೊಂದಲಿದ್ದೇವೆ' ಎಂದು ಟ್ರಂಪ್ ಹೇಳಿದರು. ಇನ್ನೊಂದೆಡೆ ಟ್ರಂಪ್ ಟ್ವೀಟ್ ಮಾಡಿ 'ನನ್ನ ಸ್ನೇಹಿತನೊಂದಿಗೆ ಇರಲು ಹೂಸ್ಟನ್‌ನಲ್ಲಿರುತ್ತೇನೆ. ಟೆಕ್ಸಾಸ್‌ನಲ್ಲಿ ಉತ್ತಮ ದಿನವಾಗಲಿದೆ!' ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಹೌಡಿ ಮೋದಿ ಕಾರ್ಯಕ್ರಮದಲ್ಲಿ ಮೋದಿ ಭಾಷಣದ ಜೊತೆ ಭಾರತ ಮತ್ತು ಅಮೆರಿಕಾದ ಸಾಂಸ್ಕೃತಿಕ ಪ್ರದರ್ಶನದ ಕಾರ್ಯಕ್ರಮಗಳು ನಡೆಯಲಿವೆ.