Aadhaar Card Photo Update - ಆಧಾರ್ ಕಾರ್ಡ್ ಇಂದು ಪ್ರತಿಯೊಬ್ಬ ಭಾರತೀಯರ ಜೀವನದ ಪ್ರಮುಖ ಭಾಗವಾಗಿದೆ. ಬ್ಯಾಂಕಿನಲ್ಲಿ ಖಾತೆ ತೆರೆಯುವುದರಿಂದ ಹಿಡಿದು  ತಮ್ಮ ಗುರುತನ್ನು ಸಾಬೀತುಪಡಿಸಲು, ಇಂದು ಆಧಾರ್ ಕಾರ್ಡ್ ಅಗತ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ, ಜನರು ಯಾವುದೇ ತೊಂದರೆ ಪಾರಾಗಲು ಜನರು ಕಾಲಕಾಲಕ್ಕೆ ತಮ್ಮ ಆಧಾರ್ ಮಾಹಿತಿ ನವೀಕರಿಸುವುದು ಆವಶ್ಯಕವಾಗಿದೆ.


COMMERCIAL BREAK
SCROLL TO CONTINUE READING

ಆಧಾರ್ ಪ್ರತಿಯೊಬ್ಬ ಭಾರತೀಯ ನಾಗರಿಕನ ಡೇಟಾ ಬೇಸ್ ಆಗಿದ್ದು ಇದರಲ್ಲಿ ವ್ಯಕ್ತಿಯ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಭಾವಚಿತ್ರದ ಜೊತೆಗೆ ನಾಗರಿಕನ ಬಯೋಮೆಟ್ರಿಕ್ ಮಾಹಿತಿ ಇತ್ಯಾದಿಗಳು ಸಂಗ್ರಹಿತವಾಗಿತ್ತವೆ. ಈ ಮಾಹಿತಿಯನ್ನು ನಾಗರಿಕರು ಕಾಲ-ಕಾಲಕ್ಕೆ ನವೀಕರಿಸುತ್ತಲೇ ಇರಬೇಕು. ವಯಸ್ಸು ಹೆಚ್ಚಾದಂತೆ ನಮ್ಮ ಚೆಹರೆ ಕೂಡ ಬದಲಾಗುತ್ತದೆ ಮತ್ತು ಆಧಾರ್(AADHAAR) ಗೆ ಲಗತ್ತಿಸಿರುವ ಭಾವಚಿತ್ರ ಹಳೆಯದಾಗುತ್ತದೆ. ಈ ಭಾವಚಿತ್ರವನ್ನು ಹೇಗೆ ಅಪ್ಡೇಟ್ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ 


ಇದನ್ನು ಓದಿ- Aadhaar Card ಕುರಿತು Alert ಜಾರಿಗೊಳಿಸಿದ UIDAI


ಎರಡು ವಿಧಾನದಿಂದ ನೀವು ಭಾವಚಿತ್ರವನ್ನು ನವೀಕರಿಸಬಹುದು (How To Update photo on Aadhaar Card)
1. ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ನೀವು ಈ ಕೆಲಸ ಮಾಡಬಹುದು 

- ಮೊದಲನೆಯದಾಗಿ, ಗೂಗಲ್‌ಗೆ ಹೋಗಿ UIDAI ಅಧಿಕೃತ ವೆಬ್‌ಸೈಟ್ ತೆರೆಯಿರಿ.
- ಇದರ ನಂತರ, ನಿಮಗೆ ವೆಬ್ ಸೈಟ್ ನ ಎಡಭಾಗದಲ್ಲಿ  ಗೆಟ್ ಆಧಾರ್ ಕಾಣಿಸಿಕೊಳ್ಳಲಿದೆ. ಅದರಲ್ಲಿ ನೀವು ಆಧಾರ್ ದಾಖಲಾತಿ / ನವೀಕರಣ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ.
- ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿದ ನಂತರ, ಆಧಾರ್ ದಾಖಲಾತಿ ಕೇಂದ್ರಕ್ಕೆ ಹೋಗಿ ಅದನ್ನು ಸಲ್ಲಿಸಿ.
- ನಿಮ್ಮ ಬಯೋಮೆಟ್ರಿಕ್ ಡೇಟಾವನ್ನು ನೀವು ಮತ್ತೆ ಕೇಂದ್ರದಲ್ಲಿ ನವೀಕರಿಸಬೇಕಾಗುತ್ತದೆ.
- ಈ ಪ್ರಕ್ರಿಯೆಯು ನಿಮ್ಮ ಫೋಟೋ, ಫಿಂಗರ್‌ಪ್ರಿಂಟ್, ರೆಟಿನಾ ಸ್ಕ್ಯಾನ್ ಅನ್ನು ಒಳಗೊಂಡಿರುತ್ತದೆ.
- ಇದನ್ನು ಮಾಡುವುದರಿಂದ, ನಿಮ್ಮ ಆಧಾರ್ ವಿವರಗಳನ್ನು ನವೀಕರಿಸಲಾಗುತ್ತದೆ.
- ನವೀಕರಿಸಿದ ಚಿತ್ರದೊಂದಿಗೆ, ನೀವು ಸುಮಾರು 90 ದಿನಗಳಲ್ಲಿ ಹೊಸ ಆಧಾರ್ ಕಾರ್ಡ್ ಪಡೆಯುವಿರಿ.


ಇದನ್ನು ಓದಿ- mAadhaar Appನಲ್ಲಿ ಹೆಚ್ಚಿನ ಸೇವೆ ಪಡೆಯುವುದು ಹೇಗೆ ಎಂದು ತಿಳಿಯಿರಿ


2. ಪೋಸ್ಟ್ ಮುಖಾಂತರ ನೀವು ಆಧಾರ್ ಕಾರ್ಡ್ ನ ಭಾವಚಿತ್ರ ಚೇಂಜ್ ಮಾಡಬಹುದು
- ಮೊದಲನೆಯದಾಗಿ, ನೀವು ಯುಐಡಿಎಐ ಪೋರ್ಟಲ್‌ಗೆ ಹೋಗಿ ಅಲ್ಲಿಂದ 'ಆಧಾರ್ ಕಾರ್ಡ್ ನವೀಕರಣ ತಿದ್ದುಪಡಿ' ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
- ಈಗ ಆ ಫಾರ್ಮ್ ಕೇಳಿದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
- ಇದರ ನಂತರ, ಯುಐಡಿಎಐನ ಪ್ರಾದೇಶಿಕ ಕಚೇರಿಯ ಹೆಸರಿನಲ್ಲಿ ಆಧಾರ್ ಕಾರ್ಡ್ ನವೀಕರಿಸಲು ನೀವು ಪತ್ರ ಬರೆಯಬೇಕು.
- ನಿಮ್ಮ ಸ್ವ-ದೃಡಿಕೃತ  ಫೋಟೋವನ್ನು (ಸಹಿ ಮಾಡುವ ಮೂಲಕ) ಅರ್ಜಿಯೊಂದಿಗೆ ಲಗತ್ತಿಸಿ.
- ಇದರ ನಂತರ, ಯುಐಡಿಎಐ ಕಚೇರಿಯ ವಿಳಾಸವನ್ನು ಬರೆಯುವ ಮೂಲಕ ಫಾರ್ಮ್ ಮತ್ತು ಪತ್ರ ಎರಡನ್ನೂ ಪೋಸ್ಟ್ ಮಾಡಿ.
- ಆನ್‌ಲೈನ್ ಸೈಟ್‌ನಿಂದ ನಿಮ್ಮ ಹತ್ತಿರದ ಯುಐಡಿಎಐ ಕೇಂದ್ರದ ವಿಳಾಸವನ್ನು ನೀವು ಪಡೆಯಬಹುದು.
- ಎರಡು ವಾರಗಳಲ್ಲಿ ನೀವು ಹೊಸ ಛಾಯಾ ಚಿತ್ರದೊಂದಿಗೆ ಹೊಸ ಆಧಾರ್ ಕಾರ್ಡ್ ಪಡೆಯುವಿರಿ. 


ಇದನ್ನು ಓದಿ- Big Aadhaar card update! ನಿಮ್ಮ ಮಾಹಿತಿಯನ್ನು ಆನ್ ಲೈನ್ ನಲ್ಲಿಯೇ ಬದಲಾಯಿಸಬಹುದು...!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.