ಮೊರಾದಾಬಾದ್ : ಉತ್ತರ ಪ್ರದೇಶದಲ್ಲಿ (Uttar Pradesh) ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ (Assembly Elections) ಸಂಬಂಧಿಸಿದಂತೆ ಎಲ್ಲಾ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಈ ನಡುವೆ, ಯುಪಿಯ ಮೊರಾದಾಬಾದ್‌ನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್ (CM Yogi Adityanath), ಅಖಿಲೇಶ್ ಯಾದವ್ (Akhilesh Yadav) ವಿರುದ್ದ ಕಿಡಿಕಾರಿದ್ದಾರೆ.  ಸರ್ದಾರ್ ಪಟೇಲ್ ಅವರು ದೇಶವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಆದರೆ, ಅಖಿಲೇಶ್ ಯಾದವ್,  ಸರ್ದಾರ್ ಪಟೇಲ್ ಅವರನ್ನು ಮುಹಮ್ಮದ್ ಅಲಿ ಜಿನ್ನಾ (Muhammad Ali Jinnah) ಅವರೊಂದಿಗೆ ಹೋಲಿಕೆ ಮಾಡಿ ಮಾತನಾಡಿರುವುದು ನಾಚಿಕೆಗೇಡು ಎಂದು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಅಖಿಲೇಶ್ ಯಾದವ್ ನಾಚಿಕೆಗೇಡಿನ ಹೇಳಿಕೆ - ಸಿಎಂ ಯೋಗಿ
ರಾಷ್ಟ್ರವನ್ನು ಒಂದುಗೂಡಿಸಲು ಶ್ರಮಿಸಿದ  ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಜಿನ್ನಾ ಜೊತೆ ಹೋಲಿಸುತ್ತಿರುವುದು ನಾಚಿಗೇಡಿನ ವಿಚಾರ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (CM Yogi Adityanath) ಹೇಳಿದ್ದಾರೆ. ಭಾರತದ ಜನರು ವಿಭಜನೆಯನ್ನು ಸಹಿಸಿಕೊಳ್ಳುವುದಿಲ್ಲ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ (Akhilesh Yadav) ಭಾರತದ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಯೋಗಿ ಆದಿತ್ಯನಾಥ್  ಒತ್ತಾಯಿಸಿದ್ದಾರೆ.


ಇದನ್ನೂ ಓದಿ : Sameer Wankhede ಬಳಿಕ Devendra Fadnavis ಮೇಲೆ ಹರಿಹಾಯ್ದ Nawab Malikರಿಂದ ಗಂಭೀರ ಆರೋಪ


"ಸಮಾಜವಾದಿ ಪಕ್ಷಕ್ಕೆ ಸಾರ್ವಜನಿಕರ ಬಗ್ಗೆ ಕಾಳಜಿ ಇಲ್ಲ" :
2017ರ ಮೊದಲು 4,500 ಮಂದಿಗೂ ವಸತಿ ಸಿಗುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಅವರಿಗೆ ಕುಟುಂಬವೇ ರಾಜ್ಯವಾಗಿತ್ತು. ಯಾವ ಕುಟುಂಬದ ಹಿತದ ಚಿಂತೆಯೂ ಇರಲಿಲ್ಲ. ಆದರೆ ನಮ್ಮ ಸರ್ಕಾರ 45 ಸಾವಿರ ಜನರಿಗೆ ಮನೆ ಒದಗಿಸಿ ಕೊಡುವ ಕೆಲಸ ಮಾಡಿದೆ. ಹಿಂದಿನ ಸರ್ಕಾರ ಜನರ ಬಗ್ಗೆ ಕಾಳಜಿ ಹೊಂದಿರಲಿಲ್ಲ ಎಂದು ಹೇಳಿದ್ದಾರೆ.


ಇದು ತಾಲಿಬಾನಿ (Talibani) ಮನಸ್ಥಿತಿ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಪ್ರತಿ ಕ್ಷಣವೂ ಒಡೆಯುವ ಪ್ರಯತ್ನವೇ ನಡೆಯುತ್ತಿರುತ್ತದೆ. ಮೊದಲನೆಯದಾಗಿ, ಜಾತಿ ಮತ್ತು ಇತರ ಭರವಸೆಗಳ ಹೆಸರಿನಲ್ಲಿಒಡೆದಾಳುವ ಪ್ರಯತ್ನ ನಡೆಯಿತು. ತಮ್ಮ ಯೋಜನೆಗಳಲ್ಲಿ ಯಶಸ್ವಿಯಾಗದಿದ್ದಾಗ, ಮಹಾನ್ ಪುರುಷರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಇಡೀ ಸಮಾಜವನ್ನೇ ಅವಮಾನಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಯೋಗಿ ಹೇಳಿದ್ದಾರೆ. 


ಇದನ್ನೂ ಓದಿ : ದೀಪಾವಳಿಗೂ ಮುನ್ನ ಬೆಲೆ ಏರಿಕೆ ಬಿಸಿ, LPG ಬೆಲೆಯಲ್ಲಿ 265 ರೂ. ಗಳ ಹೆಚ್ಚಳ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ