ನವದೆಹಲಿ: ಹನುಮಾನ್ ಜೀ ಜಾತಿಯ ಬಗ್ಗೆ ಇದೀಗ ಚರ್ಚೆ ಪ್ರಾರಂಭವಾಗಿದೆ. ಈಗ ಉತ್ತರ ಪ್ರದೇಶ ಸರ್ಕಾರದ ಸಚಿವ ಚೌಧರಿ ಲಕ್ಷ್ಮಿ ನಾರಾಯಣ್ ಹನುಮಾನ್ 'ಜಾಟ್' ಎಂದು ತಿಳಿಸಿದ್ದಾರೆ. 'ಜಾಟ್ ಸಮುದಾಯವು ಯಾರಾದರೂ ತೊಂದರೆಯಲ್ಲಿರುವವರನ್ನು ನೋಡಿದರೆ, ಯಾವುದೇ ಹಿಂಜರಿಕೆಯಿಲ್ಲದೆ ಅವರ ಸಹಾಯಕ್ಕಾಗಿ ಮುನ್ನುಗ್ಗುತ್ತಾರೆ' ಎಂದು ತಮ್ಮ ಹೇಳಿಕೆಗೆ ಸಚಿವರು ತಾರ್ಕಿತ ವಿವರಣೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಏಜೆನ್ಸಿ ANI ಯೊಂದಿಗಿನ ಮಾತನಾಡಿರುವ ಅವರು, "ನಾವು ಸ್ವಭಾವದ ಆಧಾರದ ಮೇಲೆ ಅವರ ವಂಶವನ್ನು ಪತ್ತೆ ಹಚ್ಚುತ್ತೇವೆ. ಅಗ್ರಸೇನ ಮಹಾರಾಜ ಸ್ವತಃ ವ್ಯಾಪಾರ ಮಾಡುತ್ತಿದ್ದರಿಂದ ಅವರನ್ನು ವೈಶ್ಯ ಜಾತಿಯವರು ಎಂದು ಹೇಳುತ್ತೇವೆ. 'ಜಾಟ್' ಸಮುದಾಯದವರ ಸ್ವಭಾವ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು.  ಯಾರಿಗಾದರೂ ಅನ್ಯಾಯವಾಗುತ್ತಿದ್ದರೆ, ಅವರು ಯಾರು? ಏನು? ಎಂದು ತಿಳಿಯದಿದ್ದರೂ ಅವರಿಗೆ ಸಹಾಯ್ ಮಾಡುತ್ತಾರೆ. ಅಂತೆಯೇ, ಹನುಮಾನ್ ಜೀ ಕೂಡ ರಾಮನ ಪತ್ನಿ ಸೀತಾ ಮಾತೆ ಅಪಹರಣವಾದ ಸಮಯದಲ್ಲಿ ಅವರಿಗೆ ಸಹಾಯ ಮಾಡಿದ್ದರು. ಆದ್ದರಿಂದ ನಾನು ಹನುಮಾನ್ ಜೀ ಅನ್ನು 'ಜಾಟ್' ಎಂದು ಹೇಳಿದೆ" ಎಂದಿದ್ದಾರೆ.



ಚೌಧರಿ ಲಕ್ಷ್ಮಿ ನಾರಾಯಣ್ ಅವರ ಹೇಳಿಕೆಯ ವಿಡಿಯೋ ನೋಡಿ...