ಉತ್ತರಾಖಂಡ: ಮೇಘಸ್ಫೋಟದಿಂದ ಚಮೋಲಿ ಸೇತುವೆ ಕುಸಿತ
ಭಾರೀ ಮಳೆಯಿಂದಾಗಿ ಸೇತುವೆಗಳಷ್ಟೇ ಅಲ್ಲದೆ, ಪ್ರಾಥಮಿಕ ಶಾಲೆಯ ಅಡುಗೆಮನೆಯ ಒಂದು ಭಾಗವೂ ಸಹ ಕುಸಿದಿದೆ.
ಚಮೋಲಿ: ಮೇಘಸ್ಫೋಟದಿಂದಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಇಲ್ಲಿನ 6 ಸೇತುವೆಗಳು ಕುಸಿದ ಪರಿಣಾಮ ಸಾವಿರಾರು ಪ್ರವಾಸಿಗಳು ತಮ್ಮ ಸ್ಥಲಿಗಳಿಗೆ ತೆರಳಲು ಸಾಧ್ಯವಾಗದೆ ಸಿಲುಕಿಕೊಂಡಿದ್ದಾರೆ. .
ಭಾರೀ ಮಳೆಯಿಂದಾಗಿ ಸೇತುವೆಗಳಷ್ಟೇ ಅಲ್ಲದೆ, ಪ್ರಾಥಮಿಕ ಶಾಲೆಯ ಅಡುಗೆಮನೆಯ ಒಂದು ಭಾಗವೂ ಸಹ ಕುಸಿದಿದೆ. ಮಳೆಯಿಂದಾಗಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಿಗೆ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಏತನ್ಮಧ್ಯೆ, ಹವಾಮಾನ ಇಲಾಖೆಯು ಮುಂದಿನ ಕೆಲವು ದಿನಗಳವರೆಗೆ ಚಮೋಲಿಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಕನಿಷ್ಠ ಮತ್ತು ಗರಿಷ್ಠ ತಾಪಮಾನವು 15 ಡಿಗ್ರಿ ಸೆಲ್ಸಿಯಸ್ ಮತ್ತು 27 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹೇಳಿದೆ.