Uttarakhand Glacier Tragedy: ಚಮೋಲಿಯಲ್ಲಿ ಗ್ಲೇಶಿಯರ್ ಕುಸಿತ, ಭಾರಿ ಪ್ರಮಾಣದ ಹಾನಿಯ ಅಲರ್ಟ್ ಜಾರಿ
Uttarakhand Glacier Tragedy: ಉತ್ತರಾಖಂಡದ ಚಮೋಲಿಯಲ್ಲಿ ದೊಡ್ಡ ಘಟನೆಯೊಂದು ಸಂಭವಿಸಿದೆ. ಚಮೋಲಿ ನಂದಾದೇವಿ ನ್ಯಾಷನಲ್ ಪಾರ್ಕ್ ಅಡಿ ಬರುವ ಕೋರ್ ಜೋನ್ ನಲ್ಲಿರುವ ಗ್ರೆಸಿಯರ್ ಕುಸಿದ ಕಾರಣ ರೈನಿಗಾಂವ್ ಬಳಿ ಇರುವ ರಿಷಿ ಗಂಗಾ ತಪೋವನ್ ಹೈಡ್ರೋ ಪ್ರೋಜೆತ್ಕ್ ಡ್ಯಾಮ್ ಒಡೆದಿದೆ.
ಚಮೋಲಿ : Uttarakhand Glacier Tragedy - ಉತ್ತರಾಖಂಡದ ಚಮೋಲಿಯಲ್ಲಿ ದೊಡ್ಡ ಘಟನೆಯೊಂದು ಸಂಭವಿಸಿದೆ. ಚಮೋಲಿ ನಂದಾದೇವಿ ನ್ಯಾಷನಲ್ ಪಾರ್ಕ್ ಅಡಿ ಬರುವ ಕೋರ್ ಜೋನ್ ನಲ್ಲಿರುವ ಗ್ರೆಸಿಯರ್ ಕುಸಿದ ಕಾರಣ ರೈನಿಗಾಂವ್ ಬಳಿ ಇರುವ ರಿಷಿ ಗಂಗಾ ತಪೋವನ್ ಹೈಡ್ರೋ ಪ್ರೋಜೆತ್ಕ್ ಡ್ಯಾಮ್ ಒಡೆದಿದೆ. ಘಟನೆಯಲ್ಲಿ ಈ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುವ ಕಾರ್ಮಿಕರು ಹರಿದುಹೋದ ಭೀತಿ ವ್ಯಕ್ತಪಡಿಸಲಾಗುತ್ತಿದೆ. ಆದರೆ ಆಡಳಿತ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
7th pay commission : ಕೇಂದ್ರ ಸರ್ಕಾರಿ ನೌಕರರಿಗೆ ಧನಾಗಮನ..! ಎಷ್ಟಾಗಲಿದೆ ವೇತನ ?
ವದಂತಿಗಳಿಂದ ದೂರವಿರಲು ಸಿಎಮ್ ಸೂಚನೆ
ಘಟನೆಯ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಉತ್ತರಾಖಂಡ್ (Uttarakhand) ಮುಖ್ಯಮಂತ್ರಿ ತ್ರಿವೆಂದ್ರ್ ಸಿಂಗ್ ನಾಗರಿಕರಿಗೆ ವದಂತಿಗಳಿಂದ ದೂರವಿರಲು ಸಲಹೆ ನೀಡಿದ್ದಾರೆ. ಈ ಕುರಿತು ಬರೆದುಕೊಂಡಿರುವ ಅವರು 'ಚಮೋಲಿ ಜಿಲ್ಲೆಯಿಂದ ಭೀಕರ ಘಟನೆಯೊಂದು ವರದಿಯಾಗಿದೆ. ಜಿಲ್ಲಾಡಳಿತ, ಪೋಲೀಸ್ ವಿಭಾಗ ಹಾಗೂ ವಿಪತ್ತು ನಿರ್ವಹಣಾ ವಿಭಾಗಕ್ಕೆ ಸ್ಥಿತಿಯನ್ನು ನಿಯಂತ್ರಿಸಲು ಆದೇಶ ನೀಡಲಾಗಿದೆ. ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬೇಡಿ. ಸರ್ಕಾರ ಅತ್ಯಾವಶ್ಯಕ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಅತಿಯಾದರೆ ಅಮೃತವೂ ವಿಷ.! ಈ ಆರು ಕಾರಣಗಳಿದ್ದರೆ ನೀವು ನಿಂಬೆಯಿಂದ ದೂರವಿರಲೇ ಬೇಕು..!
ಹರಿದ್ವಾರದಲ್ಲಿ ಗ್ರಾಮವೊಂದನ್ನು ಖಾಲಿಗೊಳಿಸಲಾಗಿದೆ
ಚಮೋಲಿಯಲ್ಲಿ ಗ್ಲೇಶಿಯರ್ ಕುಸಿತದ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಹರಿದ್ವಾರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಲರ್ಟ್ ಜಾರಿಗೊಳಿಸಲಾಗಿದೆ. ಅಪಾಯದ ಮುನ್ಸೂಚನೆ ಹಿನ್ನೆಲೆ ಹರಿದ್ವಾರದ ಡಿಎಮ್ ಗಂಗಾ ತಟದಲ್ಲಿರುವ ಪ್ರದೇಶಗಳನ್ನು ಖಾಲಿಗೊಳಿಸಲು ನಿರ್ದೇಶನಗಳನ್ನು ನೀಡಿದ್ದಾರೆ. ಇದೆ ತಿಂಗಳು ಹರಿದ್ವಾರದಲ್ಲಿ ಕುಂಭಮೇಳ ಆಯೋಜಿಸಲಾಗುತ್ತಿದೆ ಹಾಗೂ ಅದರ ತಯಾರಿಗಳು ಕೂಡ ಭರದಿಂದ ಸಾಗಿವೆ.
ಇದನ್ನು ಓದಿ- Gold Price : ಕುಸಿದಿದೆ ಅಷ್ಟೇ ಅಲ್ಲ ಇನ್ನಷ್ಟು ಕುಸಿಯಲಿದೆ ಚಿನ್ನದ ಬೆಲೆಕ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.