Vadodara Rape - `SUV ಗಳಲ್ಲಿ ರೇಪ್ ಮಾಡುವಷ್ಟು ಜಾಗ ಇರುತ್ತಾ?` RTO ಪ್ರಶ್ನಿಸಿದ ವಡೋದರಾ ಕ್ರೈಂ ಬ್ರಾಂಚ್
Vadodara Rape: ಈ ಕುರಿತು ಹೇಳಿಕೆ ನೀಡಿರುವ ಕ್ರೈಂ ಬ್ರಾಂಚ್ ಅಧಿಕಾರಿಯೊಬ್ಬರು, ರೇಪ್ ನಂತಹ ಒಂದು ಘಟನೆಯನ್ನು ವಾಹನದ ಹಿಂದಿನ ಸೀಟ್ ನಲ್ಲಿ ನಡೆಸಬಹುದೇ ಎಂಬುದನ್ನು ಪತ್ತೆಹಚ್ಚುವ ಪ್ರಯತ್ನ ಇದಾಗಿದೆ. ಇದಲ್ಲದೆ ವಾಹನದಲ್ಲಿ ರೇಪ್ ಮಾಡಿದರೆ, ಸಂತ್ರಸ್ತೆ ಓಡುವ ಪ್ರಯತ್ನ ನಡೆಸಿದ್ದಾಳೆಯೇ ಅಥವಾ ಇಲ್ಲ ಎಂಬುದನ್ನೂ ಕೂಡ ಪತ್ತೆಹಚ್ಚುವುದು ಇದರ ಉದ್ದೇಶ ಎಂದು ಹೇಳಿದ್ದಾರೆ.
ವಡೋದರಾ: Vadodara Rape - ಗುಜರಾತ್ (Gujrat) ನಿಂದ ಒಂದು ವಿಚಿತ್ರ ಘಟನೆ ವರದಿಯಾಗಿದೆ. ವಡೋದರಾ ರೋಡ ಟ್ರಾನ್ಸ್ಪೋರ್ಟ್ ಆಫೀಸಗೆ ಅಲ್ಲಿನ ಲೋಕಲ್ ಕ್ರೈಂ ಬ್ರಾಂಚ್ ಪೊಲೀಸರು ವಿಚಿತ್ರ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಹೌದು, ಅಲ್ಲಿನ ಕ್ರೈಂ ಬ್ರಾಂಚ್ ಪೊಲೀಸರು RTOನಿಂದ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (SUV) ಗಳಲ್ಲಿ ರೇಪ್ ನಡೆಸುವಷ್ಟು ಜಾಗ ಇರುತ್ತದೆಯಾ? ಎಂಬುದನ್ನು ತಿಳಿಯಲು ಬಯಸಿದೆ. ಇದಲ್ಲದೆ ಯಾವುದೇ ಒಂದು ವಾಹನದಲ್ಲಿ ಸೆಂಟ್ರಲ್ ಲಾಕಿಂಗ್ ವ್ಯವಸ್ಥೆ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕೂಡ ಕ್ರೈಂ ಬ್ರಾಂಚ್ ತಿಳಿಯಲು ಬಯಸಿದೆ.
ಆಂಗ್ಲ ಮಾಧ್ಯಮದ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯೊಂದರ ಪ್ರಕಾರ ಟೊಯೋಟಾ ಫಾರ್ಚ್ಯೂನರ್ ವಾಹನಕ್ಕೆ ಸಂಬಂಧಿಸಿದಂತೆ ಪೊಲೀಸರು ಈ ವಿಚಾರಣೆಯನ್ನು ನಡೆಸಿದ್ದಾರೆ. ಭಾವೇಶ್ ಪಟೇಲ್ ಈ ವಾಹನದ ಮಾಲೀಕರಾಗಿದ್ದಾರೆ. ಅವರು ಪಾರದಾ ಮುನಿಸಿಪಲ್ ಕಾರ್ಪೋರೇಶನ್ ನ ಸದಸ್ಯರು ಹಾಗೂ APMCಯ ಮಾಜಿ ನಿರ್ದೇಶಕರಾಗಿದ್ದರು. ಅವರು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾರೆ. ಸಾಮಾನ್ಯವಾಗಿ ಯಾವುದೇ ಒಂದು ಅಪಘಾತದ ಬಳಿಕ RTO ವಾಹನದ ಫಿಟ್ನೆಸ್ ಗೆ ಸಂಬಂಧಿಸಿದಂತೆ ಮಾತ್ರ ಸರ್ಟಿಫಿಕೆಟ್ ನೀಡುತ್ತದೆ. ಇದನ್ನು ಬಿಟ್ಟು ವಾಹನದಲ್ಲಿ ಜಾಗ ಎಷ್ಟಿದೆ ಅಥವಾ ಇತರ ಯಾವುದೇ ಮಾಹಿತಿಯನ್ನು ಅದು ನೀಡುವುದಿಲ್ಲ.
ವರದಿಗಳ ಪ್ರಕಾರ RTO ಅಧಿಕಾರಿಗಳೇ ಈ ರೀತಿಯ ಪ್ರಶ್ನೆಗೆ ಬೆಚ್ಚಿಬಿದ್ದಿದ್ದಾರೆ. ಈ ಕುರಿತು ಪತ್ರಿಕೆಗೆ ಹೇಳಿಕೆ ನೀಡಿರುವ RTO ಅಧಿಕಾರಿಯೊಬ್ಬರು' RTO ಕೇವಲ ಗಣತೀಯ ವರದಿ ಮಾತ್ರ ನೀಡಬಹುದಾಗಿದೆ. ಆ ಜಾಗದಲ್ಲಿ ಅಪರಾಧ ನಡೆಸಬಹುದೇ ಅಥವಾ ಇಲ್ಲವೇ ಎಂಬುದನ್ನು ಇಲಾಖೆ ನಿಶ್ಚಿತವಾಗಿ ವಿಚಾರ ನಡೆಸುವುದಿಲ್ಲ. ಅಪರಾಧ ಸಾಬೀತು ಪಡಿಸುವ ಕೆಲಸ ಪೋಲೀಸರದ್ದಾಗಿರುತ್ತದೆ' ಎಂದು ಅವರು ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಕ್ರೈಂ ಬ್ರಾಂಚ್ ಅಧಿಕಾರಿ ದಿವಾನ್ ಸಿನ್ವಾಲಾ, ಈ ಪ್ರಶ್ನೆಗಳ ಮೂಲಕ ವಾಹನದ ಹಿಂದಿನ ಸೀಟ್ ನಲ್ಲಿ ರೇಪ್ ನಂತಹ ಯಾವುದೇ ಒಂದು ಘಟನೆ ನಡೆಸಬಹುದಾ ಎಂಬುದನ್ನು ತಿಳಿದುಕೊಳ್ಳುವುದು ಇದರ ಹಿಂದಿನ ಉದ್ದೇಶ ಎಂದಿದ್ದಾರೆ. 'ಕಾರಿನಲ್ಲಿರುವ ಜನರು ಹಾಗೂ ಜಾಗ ಅಪರಾಧ ಕೃತ್ಯ ಎಸಗಲು ಸಾಕಾಗುತ್ತದೆಯಾ ಎಂಬುದು ಕೂಡ ಇದರ ಹಿಂದಿನ ಒಂದು ಕಾರಣ' ಎಂದು ವಾಲಾ ಹೇಳಿದ್ದಾರೆ. ಇದಲ್ಲದೆ ಕ್ರೈಂ ಬ್ರಾಂಚ್ ಅಧಿಕಾರಿಗಳು ಆರೋಪಿ ಹಾಗೂ ಮಹಿಳೆಯ ಎತ್ತರದ ಕುರಿತು ಕೂಡ ಚೌಕಾಸಿ ನಡೆಸಿದ್ದಾರೆ. ಇದಲ್ಲದೆ ಘಟನೆಯ ಸಂದರ್ಭದಲ್ಲಿ ಒಂದು ವೇಳೆ ವಾಹನ ನಿಂತಿದ್ದರೆ, ಮಹಿಳೆ ಓಡಿಹೋಗಲು ಯಾಕೆ ಪ್ರಯತ್ನಿಸಿಲ್ಲ? ಮತ್ತು ಇದೆ ಕಾರಣದಿಂದ ವಾಹನದ ಸೆಂಟ್ರಲ್ ಲಾಕಿಂಗ್ ಸಿಸ್ಟಂ ಕುರಿತು ವಿಚಾರಿಸಲಾಗಿದೆ ಎಂದು ವಾಲಾ ಹೇಳಿದ್ದಾರೆ.
ಇದನ್ನೂ ಓದಿ- Delhi Lockdown : ರಾಷ್ಟ್ರ ರಾಜಧಾನಿಯಲ್ಲಿ ಮೇ 17ರ ವರೆಗೆ ಮತ್ತೆ ಲಾಕ್‌ಡೌನ್ ವಿಸ್ತರಣೆ..!
ಭಾವೇಶ್ ಪಟೇಲ್ ನನ್ನು ಸ್ಥಳೀಯ ಪ್ರಭಾವಿ ನಾಯಕ ಎಂದು ಪರಿಗಣಿಸಲಾಗುತ್ತದೆ ಮತ್ತು ಇನ್ನೂ 18 ಪ್ರತ್ಯೇಕ ಪ್ರಕರಣಗಳಲ್ಲಿ ಆತನ ವಿರುದ್ಧ ತನಿಖೆ ನಡೆಯುತ್ತಿದೆ. ರೇಪ್ ನಡೆದಿರುವ ಈ ಘಟನೆ ಏಪ್ರಿಲ್ 26 ರಿಂದ ಏಪ್ರಿಲ್ 27ರ ಮಧ್ಯರಾತ್ರಿ ಸಂಭವಿಸಿದೆ. . ಏಪ್ರಿಲ್ 30 ರಂದು ಈ ಘಟನೆಯ ಬಗ್ಗೆ ಪೊಲೀಸರಿಗೆ ದೂರು ಬಂದಿದೆ. ಇದರ ನಂತರ ಮೇ 2 ರಂದು ಆರೋಪಿಗಳನ್ನು ರಾಜಸ್ಥಾನದಿಂದ ಬಂಧಿಸಲಾಗಿದೆ. ಪಟೇಲ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇದನ್ನೂ ಓದಿ- Surendra Singh : ಕೊರೋನಾ ಹರಡುವಿಕೆಯನ್ನ ತಡೆಯಲು ಗೋ ಮೂತ್ರ ಕುಡಿಯಿರಿ : ಬಿಜೆಪಿ ಶಾಸಕ
'ಸಂತ್ರಸ್ತೆ ನೀಡಿರುವ ದೂರಿನ ಸತ್ಯವನ್ನು ಸಾಬೀತುಪಡಿಸಲು ನಾವು ಆರ್‌ಟಿಒ ನಿರ್ದಿಷ್ಟವಾಗಿ ಮುಖ್ಯವಾದ ಎರಡು ಅಂಶಗಳ ಬಗ್ಗೆ ವಿಚಾರಿಸುತ್ತಿದ್ದೇವೆ. ಒಂದು ಕೇಂದ್ರ ಲಾಕಿಂಗ್ ವ್ಯವಸ್ಥೆಯಾಗಿದ್ದು, ಅದನ್ನು ಚಾಲಕನ ಕಡೆಯಿಂದ ಮಾತ್ರ ನಿರ್ವಹಿಸಬಹುದಾಗಿದೆ ಮತ್ತು ಇನ್ನೊಂದು ಕಾರಿನ ಮುಂಭಾಗದ ಸೀಟಿನ ಪುಶ್‌ಬ್ಯಾಕ್ ಆಗಿದೆ, ಇದರ ಸಹಾಯದಿಂದ ಆರೋಪಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಲು ಕಾಲಿನ ಜಾಗವನ್ನು ಸೃಷ್ಟಿಸಿದ್ದಾನೆ. ಈ ಎರಡು ಅಂಶಗಳಿಗೆ ಉತ್ತರ ದೊರೆತ ನಂತರ, ನಾವು ಈ ವಿಷಯವನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ' ಎಂದು ವಡೋದರಾ ಪೊಲೀಸ್ ಇನ್ಸ್ಪೆಕ್ಟರ್ ಸುಧೀರ್ ದೇಸಾಯಿ ಪತ್ರಿಕೆಗೆ ನೀಡಿದ ತಮ್ಮ ಹೇಳಿಕೆಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ- ಕಂಪ್ಲೀಟ್ ಲಾಕ್ ಡೌನ್ ಅನುಷ್ಠಾನಕ್ಕೆ ಬರುತ್ತಾ..? ಐಎಂಎ ಹೇಳಿದ್ದೇನು..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.