ನವದೆಹಲಿ : ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ (RC), ಫಿಟ್ನೆಸ್ ಪ್ರಮಾಣಪತ್ರ ಸೇರಿದಂತೆ ಇತರ ಮೋಟಾರು ವಾಹನ ದಾಖಲೆಗಳ ಸಿಂಧುತ್ವವನ್ನು ಸರ್ಕಾರ ಮತ್ತೊಮ್ಮೆ ಹೆಚ್ಚಿಸಿದೆ. ಕೊರೋನಾ ಎರಡನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು, ಈ ಎಲ್ಲಾ ದಾಖಲೆಗಳು ಈಗ ಸೆಪ್ಟೆಂಬರ್ 30ರವರೆಗೆ ಮಾನ್ಯವಾಗಿರುತ್ತವೆ. ಈ ಮೊದಲು, ಈ ಎಲ್ಲಾ ದಾಖಲೆಗಳ ಸಿಂಧುತ್ವವು ಜೂನ್ 30ರಂದು ಮುಕ್ತಾಯಗೊಳ್ಳುತ್ತಿತ್ತು. ಸರ್ಕಾರದ ಈ ಹೆಜ್ಜೆಯಿಂದ ಕೋಟ್ಯಂತರ ಜನರಿಗೆ ದೊಡ್ಡ ರಿಲೀಫ್ ಸಿಕ್ಕಂತೆ ಆಗಿದೆ.


COMMERCIAL BREAK
SCROLL TO CONTINUE READING

ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯ(MoRTH) ಹೊರಡಿಸಿದ ಆದೇಶದ ಪ್ರಕಾರ, ಫೆಬ್ರವರಿ 1, 2020 ರಂದು ಅವಧಿ ಮುಗಿದಿದ್ದ ಮತ್ತು ಲಾಕ್ ಡೌನ್ ನಿರ್ಬಂಧಗಳಿಂದಾಗಿ ನವೀಕರಿಸಲು ಸಾಧ್ಯವಾಗದ ಈ ದಾಖಲೆಗಳನ್ನು ಈಗ 30 ಸೆಪ್ಟೆಂಬರ್ 2021 ರವರೆಗೆ ಮಾನ್ಯವೆಂದು ಪರಿಗಣಿಸಲಾಗುವುದು. ಈ ಸಂಬಂಧ ಸಚಿವಾಲಯದಿಂದ ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ಆದೇಶ ಹೊರಡಿಸಲಾಗಿದೆ. ಈ ಕಾರಣದಿಂದಾಗಿ, ನಾಗರಿಕರು ಸಾರಿಗೆ ಸಂಬಂಧಿತ ಸೇವೆಗಳಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸಬಾರದು ಎಂದು ಅವರಿಗೆ ತಿಳಿಸಲಾಗಿದೆ.


SBI ಗ್ರಾಹಕರಿಗೊಂದು ಮಹತ್ವದ ಮಾಹಿತಿ : ತಪ್ಪದೇ ಈ 3 ಕೆಲಸಗಳನ್ನ ಮಾಡಿ


ಈ ಕಷ್ಟದ ಸಮಯದಲ್ಲಿ ಕೆಲಸ ಮಾಡುವ ಸಾಗಣೆದಾರರು ಮತ್ತು ಇತರ ಸಂಸ್ಥೆಗಳು ಯಾವುದೇ ರೀತಿಯ ಕಿರುಕುಳ ಅಥವಾ ತೊಂದರೆಯನ್ನು ಎದುರಿಸದಂತೆ ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ರಾಜ್ಯಗಳು(States) ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇದನ್ನು ಜಾರಿಗೆ ತರುವಂತೆ ತಿಳಿಸಿದೆ.


ಇದನ್ನೂ ಓದಿ :IT Sector Layoffs:30 ಲಕ್ಷ ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆಯೇ..? ಯಾಕೆ..?


ಕೊರೋನಾ(Corona) ಹಿನ್ನೆಲೆಯಲ್ಲಿ, ಸರ್ಕಾರವು ಚಾಲನಾ ಪರವಾನಗಿ, RC ಮತ್ತು ಫಿಟ್ನೆಸ್ ಪ್ರಮಾಣಪತ್ರದಂತಹ ದಾಖಲೆಗಳ ಸಿಂಧುತ್ವವನ್ನು ಅನೇಕ ಬಾರಿ ಹೆಚ್ಚಿಸಿದೆ. ಈ ಮೊದಲು, ಈ ಎಲ್ಲಾ ದಾಖಲೆಗಳು ಜೂನ್ 30, 2021ರವರೆಗೆ ಮಾನ್ಯವಾಗಿದ್ದವು. ಈ ಹಿಂದೆ, ರಸ್ತೆ ಮತ್ತು ಸಾರಿಗೆ ಸಚಿವಾಲಯವು 30 ಮಾರ್ಚ್-2020, 9 ಜೂನ್-2020, 24 ಆಗಸ್ಟ್-2020, 27 ಡಿಸೆಂಬರ್-2020, 26 ಮಾರ್ಚ್-2021 ರಂದು ಸಹ ಸಲಹೆಗಳನ್ನು ನೀಡಿತ್ತು.


ಇದನ್ನೂ ಓದಿ :Corona 3rd Wave : 2 ರಿಂದ 4 ವಾರದ ಒಳಗಡೆ ಕೊರೋನಾ 3ನೇ ಅಲೆ : ತಜ್ಞರ ಎಚ್ಚರಿಕೆ


ಲಾಕ್ ಡೌನ್(Lockdown) ನ ನಿರ್ಬಂಧಗಳಿಂದಾಗಿ, ಅಗತ್ಯ ವಸ್ತುಗಳ ಸಾಗಣೆ ಮತ್ತು ಉತ್ಪಾದನೆ ಸುಗಮವಾಗಿ ನಡೆಯಬೇಕು ಎಂದು ಸರ್ಕಾರ ಹೇಳುತ್ತದೆ. ಆದ್ದರಿಂದ ಈ ದಾಖಲೆಗಳ ಸಿಂಧುತ್ವವನ್ನು ವಿಸ್ತರಿಸಲಾಗಿದೆ. ಮೋಟಾರು ವಾಹನ ದಾಖಲೆಗಳ ನವೀಕರಣದಲ್ಲಿ ನಾಗರಿಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಸರ್ಕಾರಕ್ಕೆ ತಿಳಿದಾಗ, ಅವರ ಸಿಂಧುತ್ವವನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.


ಇದನ್ನೂ ಓದಿ : ದೈನಂದಿನ ಡೇಟಾ ಲಿಮಿಟ್ ಇಲ್ಲ, ಜಿಯೋಗೆ ಟಕ್ಕರ್ ನೀಡಲು ಹೊಸ ಪ್ಲಾನ್ ಪರಿಚಯಿಸಿದ ಏರ್ಟೆಲ್


ಪ್ರಸ್ತುತ, ಯುಪಿ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಚಾಲನಾ ಪರವಾನಗಿಗಳನ್ನು(Driving Licence) ಮಾಡುವ ಕೆಲಸ ಪ್ರಾರಂಭವಾಗಿದೆ. ಆದರೆ ಈಗ ಹೊಸ ಪರವಾನಗಿಗಳನ್ನು ಮಾತ್ರ ಮಾಡಲಾಗುತ್ತಿದೆ. ಪರವಾನಗಿ ನವೀಕರಣ, ಕಲಿಕಾ ಪರವಾನಗಿ ಬಹಳ ಸಮಯ ಕಾಯಬೇಕಾಗಬಹುದು. ಅವಧಿ ಮೀರಿದ ಮೋಟಾರು ವಾಹನ ದಾಖಲೆಗಳ ಸಿಂಧುತ್ವವು ಜೂನ್ 30ರಂದು ಕೊನೆಗೊಳ್ಳುತ್ತಿತ್ತು, ನಂತರ ಭವಿಷ್ಯದಲ್ಲಿ ತಮ್ಮ ವಾಹನಗಳ ದಾಖಲೆಗಳನ್ನು ಹೇಗೆ ಪಡೆಯುತ್ತಾರೆ ಎಂಬ ಬಗ್ಗೆ ಜನರ ಮನಸ್ಸಿನಲ್ಲಿ ಆತಂಕವಿತ್ತು. ಆದ್ರೇ ಇದೀಗ ಈ ದಾಖಲೆಗಳ ಸಿಂಧುತ್ವ ಅವಧಿಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಮಾಡಿ, ದೇಶದ ಕೋಟ್ಯಂತರ ಜನರಿಗೆ ಬಿಗ್ ರಿಲೀಫ್ ನೀಡಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.