ದೈನಂದಿನ ಡೇಟಾ ಲಿಮಿಟ್ ಇಲ್ಲ, ಜಿಯೋಗೆ ಟಕ್ಕರ್ ನೀಡಲು ಹೊಸ ಪ್ಲಾನ್ ಪರಿಚಯಿಸಿದ ಏರ್ಟೆಲ್

JIO v/S Airtel :  ಏರ್‌ಟೆಲ್ ತನ್ನ ಪ್ರಿಪೇಯ್ಡ್ ಬಳಕೆದಾರರಿಗಾಗಿ ಹೊಸ ಪ್ಲಾನ್ ವೊಂದನ್ನು ಪರಿಚಯಿಸಿದೆ. ಈ ಪ್ಲಾನ್ ನ ವಿಶೇಷತೆಯೆಂದರೆ ಬಳಕೆದಾರರು ಯಾವುದೇ ದೈನಂದಿನ ಮಿತಿಯಿಲ್ಲದೆ ಡೇಟಾವನ್ನು ಬಳಸಬಹುದಾಗಿದೆ.

Written by - Ranjitha R K | Last Updated : Jun 18, 2021, 11:02 AM IST
  • ಜಿಯೋಗೆ ಟಕ್ಕರ್ ನೀಡುವ ಪ್ಲಾನ್ ಪರಿಚಯಿಸಿದ ಏರ್ ಟೆಲ್
  • ಏರ್ ಟೆಲ್ ತಂದಿದೆ 456ರೂ. ಪ್ಲಾನ್
  • ಪ್ಲಾನ್ ನಲ್ಲಿ ಏನೆಲ್ಲಾ ಲಾಭ ತಿಳಿಯಿರಿ
ದೈನಂದಿನ ಡೇಟಾ ಲಿಮಿಟ್ ಇಲ್ಲ, ಜಿಯೋಗೆ ಟಕ್ಕರ್ ನೀಡಲು ಹೊಸ ಪ್ಲಾನ್ ಪರಿಚಯಿಸಿದ ಏರ್ಟೆಲ್ title=
ಏರ್ ಟೆಲ್ ತಂದಿದೆ 456ರೂ. ಪ್ಲಾನ್ (file photo)

ನವದೆಹಲಿ : ತಮ್ಮ ಬಳಕೆದಾರರಿಗೆ ಉತ್ತಮ ಯೋಜನೆಗಳನ್ನು ನೀಡುವ ಉದ್ದೇಶದಿಂದ ಟೆಲಿಕಾಂ ಕಂಪನಿಗಳ ನಡುವೆ ದೀರ್ಘಕಾಲದವರೆಗೆ ಕಠಿಣ ಸ್ಪರ್ಧೆ ನಡೆಯುತ್ತಿರುತ್ತದೆ. ಜಿಯೋ ತನ್ನ ಗ್ರಾಹಕರಿಗೆ ಪ್ರತಿದಿನ ಕೆಲವು ಹೊಸ ಯೋಜನೆಗಳನ್ನು (Jio recharge plans) ತರುತ್ತಿದೆ.  ಆದರೆ, ಇತರ ಕಂಪನಿಗಳು ಸಹ ಹಿಂದೆ ಉಳಿದಿಲ್ಲ. ಈಗ ಏರ್‌ಟೆಲ್ ತನ್ನ ಪ್ರಿಪೇಯ್ಡ್ ಬಳಕೆದಾರರಿಗಾಗಿ ಹೊಸ ಪ್ಲಾನ್ ವೊಂದನ್ನು (airtel plans) ಪರಿಚಯಿಸಿದೆ. ಈ ಪ್ಲಾನ್ ನ ವಿಶೇಷತೆಯೆಂದರೆ ಬಳಕೆದಾರರು ಯಾವುದೇ ದೈನಂದಿನ ಮಿತಿಯಿಲ್ಲದೆ ಡೇಟಾವನ್ನು ಬಳಸಬಹುದಾಗಿದೆ. ಜಿಯೋ ಇತ್ತೀಚೆಗೆ 447 ರೂಗಳ ಡೈಲಿ ಲಿಮಿಟ್ ಡೇಟಾ ಪ್ಲಾನ್ (daily limit data plan) ಆರಂಭಿಸಿತ್ತು. ಈ ಪ್ಲಾನ್ ನಲ್ಲಿ ಬಳಕೆದಾರರಿಗೆ ಡೇಟಾ ಲಿಮಿಟ್ ನೀಡುವುದಿಲ್ಲ. ಇದಕ್ಕೆ ಪ್ರತಿಕ್ರಿಯೆಯಾಗಿ, ಏರ್‌ಟೆಲ್ ಕೂಡಾ ಈಗ 456 ರೂಗಳ ಡೈಲಿ ಡೇಟಾ ಲಿಮಿಟ್ ಪ್ಲಾನ್ ಅನ್ನು ಲಾಂಚ್ ಮಾಡಿದೆ. 

ಏರ್ಟೆಲ್ 456ರೂ. ಪ್ಲಾನ್ : 
ಈ ಏರ್‌ಟೆಲ್ ಯೋಜನೆಯೊಂದಿಗೆ (Airtel recharge plans), ಬಳಕೆದಾರರು ಯಾವುದೇ ದೈನಂದಿನ ಮಿತಿಯಿಲ್ಲದೆ 50GB ಡೇಟಾವನ್ನು ಪಡೆಯುತ್ತಾರೆ.  ಅಂದರೆ ಬಳಕೆದಾರನು ಸಂಪೂರ್ಣ ಡೇಟಾವನ್ನು ಒಟ್ಟಿಗೆ  ಬಳಸಬಹುದು. ಈ ಯೋಜನೆಯು 60 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಇದಲ್ಲದೆ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಸೌಲಭ್ಯ ಮತ್ತು ದಿನಕ್ಕೆ 100 ಎಸ್‌ಎಂಎಸ್ ಸಹ ನೀಡಲಾಗುತ್ತದೆ. ಇನ್ನು ಇದರ ತರ ಪ್ರಯೋಜನಗಳೆಂದರೆ, ಈ Airtel Prepaid Plan ನೊಂದಿಗೆ ಉಚಿತ ಹೆಲೋಟ್ಯೂನ್, Amazon Prime Video ದ 30 ದಿನಗಳ ಮೊಬೈಲ್ ಎಡಿಷನ್ ನ ಫ್ರೀ ಟ್ರಯಲ್, Airtel Xstream Premium, ವಿಂಕ್ ಮ್ಯೂಸಿಕ್, Shaw Academy  ಒಂದು ವರ್ಷದ ಫ್ರೀ ಆನ್ ಲೈನ್ ಕೋರ್ಸ್,  ಮೂರು ತಿಂಗಳವರೆಗೆ Apollo 24/7 Circle ನ ಲಾಭ ಮತ್ತು 100 ರೂ ಕ್ಯಾಶ್‌ಬ್ಯಾಕ್ ಸಿಗುತ್ತದೆ. 

ಇದನ್ನೂ ಓದಿ : iPhone ಕಳೆದುಹೋಗಿದೆಯೇ, ಅದನ್ನು ಹುಡುಕಲು/ಡೇಟಾ ಅಳಿಸಲು ಇಲ್ಲಿದೆ ಸುಲಭ ಮಾರ್ಗ

ಜಿಯೋದ 447ರೂ. ಪ್ಲಾನ್ : 
ಏರ್‌ಟೆಲ್‌ನ ರೂ 456 ಯೋಜನೆ ಜಿಯೋನ 447 ರೂ ಯೋಜನೆಗಿಂತ 9 ರೂ ದುಬಾರಿ. Jio Freedom Planನಲ್ಲಿಯೂ  50 ಜಿಬಿ ಡೇಟಾವನ್ನು ನೀಡಲಾಗುತ್ತಿದೆ ಮತ್ತು ಈ ಯೋಜನೆಯ ಸಿಂಧುತ್ವವು 60 ದಿನಗಳವರೆಗೆ ಇರುತ್ತದೆ. ಇದರೊಂದಿಗೆ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ನೀಡಲಾಗುತ್ತದೆ. ಇತರ ಪ್ರಯೋಜನಗಳ ಬಗ್ಗೆ ಹೇಳುವುದಾದರೆ, Jio Cinema ಜಿಯೋ ಕ್ಲೌಡ್, ಜಿಯೋ ಟಿವಿ (Jio Tv,), ಜಿಯೋ ಸೆಕ್ಯುರಿಟಿ ಮತ್ತು ಜಿಯೋ ನ್ಯೂಸ್‌ಗೆ ಉಚಿತ ಆಕ್ಸಸ್ ನೀಡಲಾಗುತ್ತದೆ.

ಇದನ್ನೂ ಓದಿ : Google ಬಳಕೆದಾರರಿಗೆ ಸಿಹಿ ಸುದ್ದಿ : ಗೂಗಲ್‌ನಿಂದ 'Photos Hide' ಸೌಲಭ್ಯ, ಇಲ್ಲಿದೆ ಮಾಹಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News