Mangalore - Bangalore Vande Bharat train : ದೇಶದ ಬಹುತೇಕ ಭಾಗಗಳಲ್ಲಿ ವಂದೇ ಭಾರತ್‌ ರೈಲು ಸಂಚಾರ ಪ್ರಾರಂಭವಾಗಿದೆ. ಜನರು ಈ ರೈಲಿನ ಕುರಿತು ಭಾರಿ ಬೇಡಿಕೆಯನ್ನು ಇಟ್ಟಿದ್ದು,  ಬೇರೆ ಕಡೆಗೂ ವಿಸ್ತರಿಸುವಂತೆ  ಕೇಳಿಬರುತ್ತಿವೆ. ಬೆಂಗಳೂರು-ಮಂಗಳೂರು ಮಾರ್ಗದಲ್ಲೂ ವಂದೇ ಭಾರತ್‌ ರೈಲು ಸೇವೆಯ ದಿನಾಂಕದ ಬಗ್ಗೆ ನಳಿನ್‌ ಕುಮಾರ್‌ ಕಟೀಲ್‌ ಅವರು ಮಹತ್ವದ ಸುಳಿವು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಬಹು ನಿರೀಕ್ಷಿತ ಮಂಗಳೂರು-ಬೆಂಗಳೂರು ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಜೂನ್‌ನಲ್ಲಿ ಆರಂಭವಾಗುವ ನಿರೀಕ್ಷೆ ಇದೆ, ಮಂಗಳೂರು ಸೆಂಟ್ರಲ್‌ ಮತ್ತು ತಿರುವನಂತಪುರಂ ಮಾರ್ಗದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಿದ ಸಂದರ್ಭದಲ್ಲಿ, ಸಂಸದ ನಳಿನ್‌ ಕುಮಾರ್‌ ಕಟೀಲ್‌ ಈ ಮಾಹಿತಿಯನ್ನು ನೀಡಿದ್ದಾರೆ. 


ಇದನ್ನು ಓದಿ : Lok Sabha Elections 2024: ಕರ್ನಾಟಕದಲ್ಲಿ ಏ.26 & ಮೇ 7ರಂದು ಎರಡು ಹಂತಗಳಲ್ಲಿ ಮತದಾನ


ಮೇ ಅಂತ್ಯದೊಳಗೆ ವಿಶೇಷವಾಗಿ 22 ಕಿಲೋ ಮೀಟರ್‌ ಶಿರಾಡಿ ವ್ಯಾಪ್ತಿಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ವಂದೇ ಭಾರತ್‌ ರೈಲಿಗೆ ಬೇಡಿಕೆಗೆ ಕೇಂದ್ರ ಸರ್ಕಾರದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಬೇಡಿಕೆ ಕೊನೆಗೂ ಈಡೇರಿದಂತಾಗಿದೆ. ಪ್ರಸ್ತುತ ಈ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ನಡೆಯುತ್ತಿದ್ದು, ಇನ್ನು ಎಲ್ಲವೂ ಅಂದುಕೊಂಡಂತೆ ನಡೆದರೆ ಜೂನ್‌ನಲ್ಲಿ ರೈಲು ಸಂಚಾರ ಆರಂಭ ಆಗಬಹುದು ಎಂದು ಕಟೀಲ್‌ ಅವರು ತಿಳಿಸಿದರು. 


ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ಮಾರ್ಚ್‌ 12) ದೇಶದ ವಿವಿಧ ಮಾರ್ಗಗಳಲ್ಲಿ 10 ಹೊಸ ವಂದೇ ಭಾರತ್ ರೈಲುಗಳನ್ನು ಉದ್ಘಾಟಿಸಿದ್ದಾರೆ. ಹಾಗಾದರೆ ಯಾವ್ಯಾವ ಮಾರ್ಗಗಳಲ್ಲಿ ಈ ರೈಲು , ಯಾವ ಸಮಯದಲ್ಲಿ ಸಂಚರಿಸುತ್ತದೆ ಎನ್ನುವ ಮಾಹಿತಿಯನ್ನು ತಿಳಿಯಿರಿ.


ಇದನ್ನು ಓದಿ : ಏಪ್ರಿಲ್ 19 ರಂದು ಚುನಾವಣೆ..! 7 ಹಂತಗಳ ಮತದಾನದ ದಿನಾಂಕ ಇಲ್ಲಿದೆ ನೋಡಿ


ಮೈಸೂರು-ಡಾ ಎಂಜಿಆರ್ ಸೆಂಟ್ರಲ್ (ಚೆನ್ನೈ), ಸಿಕಂದರಾಬಾದ್-ವಿಶಾಖಪಟ್ಟಣಂ, ಅಹಮದಾಬಾದ್-ಮುಂಬೈ ಸೆಂಟ್ರಲ್, ಪಾಟ್ನಾ-ಲಕ್ನೋ, ನ್ಯೂ ಜಲ್ಪೈಗುರಿ-ಪಾಟ್ನಾ, ಲಕ್ನೋ-ಡೆಹ್ರಾಡೂನ್, ಪುರಿ-ವಿಶಾಖಪಟ್ಟಣಂ, ರಾಂಚಿ-ವಾರಣಾಸಿ, ಖಜುರಾಹೊ-ದೆಹಲಿ (ನಿಜಾಮುದ್ದೀನ್), ಕಲಬುರಗಿ-ಸರ್‌.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ಹತ್ತು ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆhttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.