ನವದೆಹಲಿ: ಕಾಶ್ಮೀರಿ ಪಂಡಿತರನ್ನು ಕಣಿವೆ ರಾಜ್ಯದಿಂದ ಹೊರಹಾಕಿ ಇಂದಿಗೆ 30 ವರ್ಷಗಳು ಗತಿಸಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್, 30 ವರ್ಷಗಳ ಹಿಂದೆ ಇದೆ ದಿನ ಕಾಶ್ಮೀರದ ಆತ್ಮವಾಗಿದ್ದ ಕಾಶ್ಮೀರಿ ಪಂಡಿತರನ್ನು ಅವರ ಮನೆಯಿಂದ ಹೊರಹಾಕಿ, 'ಗಜ್ವಾ ಎ ಹಿಂದ್'ಗೆ ಪ್ರಯತ್ನಿಸಲಾಗಿತ್ತು. 


COMMERCIAL BREAK
SCROLL TO CONTINUE READING

ಇದಕ್ಕೆ ಸಂಬಂಧಿಸಿದಂತೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಗಿರಿರಾಜ್ ಸಿಂಗ್, "30 ವರ್ಷಗಳ ಹಿಂದೆ ಇಂದಿನ ದಿನವೇ ದೇಶದ ಕೊರಳಿನ ಮೇಲೆ ದಾಳಿ ನಡೆಸಿ, ಕಾಶ್ಮೀರದ ಆತ್ಮವಾಗಿದ್ದ ಕಾಶ್ಮೀರಿ ಪಂಡಿತರನ್ನು ಮನೆಯಿಂದ ಹೊರಹಾಕಿ 'ಗಜ್ವಾ ಎ ಹಿಂದ್'ಗೆ ಪ್ರಯತ್ನ ನಡೆಸಲಾಗಿತ್ತು" ಎಂದಿದ್ದಾರೆ.



ಈ ವೇಳೆ ದೇಶದಲ್ಲಿ "ತುಷ್ಟೀಕರಣದ ರಾಜಕೀಯ ನಡೆಸುವ ಶಕ್ತಿಗಳು ಅವರಿಗೆ ಸಾಥ್ ನೀಡಲಿಲ್ಲ. ಆದ್ದರಿಂದ ಒಂದೇ ರಾತ್ರಿಯಲ್ಲಿ ಕಾಶ್ಮೀರಿ ಪಂಡಿತರು ತಮ್ಮದೇ ದೇಶದಲ್ಲಿ ನಿರಾಶ್ರಿತರಾಗಿದ್ದರು. ಇದೀಗ ಕಾಶ್ಮೀರಿ ಪಂಡಿತರು ಮತ್ತೆ ಕಾಶ್ಮೀರಕ್ಕೆ ವಾಪಸ್ ಆಗಲಿದ್ದು, ಕಾಶ್ಮೀರದ ದಾಲ್ ಸರೋವರ ಬಳಿಯಿಂದ ಮತ್ತೊಮ್ಮೆ ವೇದ-ಮಂತ್ರಗಳು ಮೊಳಗಲಿವೆ" ಎಂದು ಗಿರಿರಾಜ್ ಹೇಳಿದ್ದಾರೆ.


ಕಾಶ್ಮೀರಿ ಪಂಡಿತರು ಯಾವಾಗ ವಾಪಸ್ಸಾಗಲಿದ್ದಾರೆ?
30 ವರ್ಷಗಳ ಹಿಂದೆ ಇಂದಿನ ದಿನವೇ ಜಮ್ಮು ಮತ್ತು ಕಾಶ್ಮೀರದಿಂದ ಕಾಶ್ಮೀರಿ ಪಂಡಿತರು ಪಲಾಯನಗೈದಿದ್ದರು. ಏತನ್ಮಧ್ಯೆ ಹಲವು ಸರ್ಕಾರಗಳು, ಋತುಗಳು ಹಾಗೂ ಪೀಳಿಗೆಗಳು ಬದಲಾದರೂ ಕೂಡ ಕಾಶ್ಮೀರಿ ಪಂಡಿತರ ವಾಪಸಾತಿ ಹಾಗೂ ನ್ಯಾಯಕ್ಕಾಗಿ ಇಂದಿಗೂ ಕೂಡ ಹೋರಾಟ ನಡೆಯುತ್ತಲೇ ಇವೆ. 


ಹೊಸ ವರ್ಷದ ಜನವರಿ ತಿಂಗಳು ವಿಶ್ವಾದ್ಯಂತ ಇರುವ ಜನರಿಗೆ ಹೊಸ ಆಸೆ, ಹೊಸ ಹುಮ್ಮಸ್ಸು ಹೊತ್ತು ತಂದರೂ ಕೂಡ, ಕಾಶ್ಮೀರಿ ಪಂಡಿತರ ಪಾಲಿಗೆ ದುಃಖ, ನೋವು ಹಾಗೂ ನಿರಾಶೆಯನ್ನೇ ಹೊತ್ತು ತಂದಿದೆ. 1990ರ ಜನವರಿ 19ರಂದು ನಡೆದ ಘಟನೆ ಇದರ ಪ್ರತೀಕವಾಗಿ ಇಂದಿಗೂ ಮುಂದುವರೆದಿದೆ. ಜಿಹಾದಿ ಇಸ್ಲಾಮಿಕ್ ಸಂಘಟನೆಗಳು ಕಾಶ್ಮೀರ ಪಂಡಿತರ ಮೇಲೆ ಯಾವ ರೀತಿ ಅತ್ಯಾಚಾರ ನಡೆಸಿದ್ದವು ಎಂದರೆ, ಅವರ ಬಳಿ ಕೇವಲ ಮೂರು ಆಯ್ಕೆಗಳು ಮಾತ್ರ ಉಳಿದುಕೊಂಡಿದ್ದವು-ಧರ್ಮ ಪರಿವರ್ತನೆ, ಸಾವು ಬಿಟ್ಟರೆ ಪಲಾಯನ. ಈ ಪಂಡಿತರು ಇಂದಿಗೂ ಕೂಡ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. 2020ನೇ ವರ್ಷ ಹೊಸ ಯುಗದ ಆರಂಭವಾಗಿದ್ದು, 30 ವರ್ಷಗಳ ಬಳಿಕವೂ ಕೂಡ ಈ ಸಮುದಾಯದ ಜನರ 'ಘರ್ ವಾಪಸಿ' ಅಷ್ಟೊಂದು ಸುಲಭದ ಮಾತಲ್ಲ ಎನ್ನಲಾಗುತ್ತಿದೆ. ಆದರೆ, ಹೊಸ ಆಸೆಯ ಕಿರಣವೊಂದು ಅವರ ಬಾಳಿನಲ್ಲಿ ನಿಶ್ಚಿತ ಮೂಡಿದೆ.