ನವದೆಹಲಿ: ಉತ್ತರ ಪ್ರದೇಶದ ಜನಸಂಖ್ಯಾ ನಿಯಂತ್ರಣ ಮಸೂದೆಗೆ ವಿಶ್ವ ಹಿಂದು ಪರಿಷತ್ ವಿರೋಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.ಪ್ರಸ್ತಾವಿತ ಉತ್ತರ ಪ್ರದೇಶದ ಮಸೂದೆಯು ಇದು ವಿವಿಧ ಸಮುದಾಯಗಳ ನಡುವಿನ ಅಸಮತೋಲನ ಹೆಚ್ಚಿಸಲು ಕಾರಣವಾಗಬಹುದು ಎಂದು ಅದು ಅಭಿಪ್ರಾಯಪಟ್ಟಿದೆ.


COMMERCIAL BREAK
SCROLL TO CONTINUE READING

ಉತ್ತರ ಪ್ರದೇಶದ ಜನಸಂಖ್ಯೆ (ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣ) ಮಸೂದೆ 2021 ಯಲ್ಲಿ ಪೋಷಕರಿಗೆ ಬದಲಾಗಿ ಮಗುವಿಗೆ ಬಹುಮಾನ ಅಥವಾ ಶಿಕ್ಷೆ ನೀಡುವ ಪ್ರಸ್ತಾವವನ್ನು ತೆಗೆದುಹಾಕುವಂತೆ ವಿಎಚ್‌ಪಿ ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರಕ್ಕೆ ಸೂಚಿಸಿದೆ.


ಇದನ್ನೂ ಓದಿ: ಸರ್ಕಾರದ ಮೆಗಾ ಯೋಜನೆ: ಮಹಿಳೆಯರಿಗೆ ಬಿಸಿನೆಸ್ ಪ್ರಾರಂಭಿಸಲು ಸುವರ್ಣಾವಕಾಶ


ಮಸೂದೆಯ ಮುನ್ನುಡಿಯಲ್ಲಿ ಇದು ಜನಸಂಖ್ಯೆಯನ್ನು ಸ್ಥಿರಗೊಳಿಸಲು ಮತ್ತು ಎರಡು ಮಕ್ಕಳ ನಿಯಮವನ್ನು ಉತ್ತೇಜಿಸುವ ಮಸೂದೆ ಎಂದು ಹೇಳುತ್ತದೆ.ವಿಶ್ವ ಹಿಂದೂ ಪರಿಷತ್ ಎರಡೂ ವಿಚಾರಗಳನ್ನು ಒಪ್ಪುತ್ತದೆ 'ಎಂದು ಸಂಘಟನೆಯ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ಸೋಮವಾರ ಉತ್ತರ ಪ್ರದೇಶ ರಾಜ್ಯ ಕಾನೂನು ಆಯೋಗಕ್ಕೆ (ಯುಪಿಎಸ್‌ಸಿಎಲ್) ಬರೆದ ಪತ್ರದಲ್ಲಿ ತಿಳಿಸಿದ್ದಾರೆ.ಆದಾಗ್ಯೂ, ಮಸೂದೆಯ 5, 6 (2) ಮತ್ತು 7 ಸೆಕ್ಷನ್, ಸಾರ್ವಜನಿಕ ಸೇವಕರು ಮತ್ತು ಇತರರಿಗೆ ಕುಟುಂಬದಲ್ಲಿ ಒಂದೇ ಮಗುವನ್ನು ಹೊಂದಲು ಪ್ರೇರೇಪಿಸುತ್ತದೆ, ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಈ ರಾಜ್ಯದಲ್ಲೀಗ ಶಾಪಿಂಗ್ ಮಾಲ್‌ಗಳಲ್ಲಿ ವಿದೇಶಿ ಮದ್ಯ ಲಭ್ಯ, ಆದರೆ...


ಉತ್ತರ ಪ್ರದೇಶದ ಒಟ್ಟು ಫಲವತ್ತತೆ ದರವನ್ನು (ಟಿಎಫ್‌ಆರ್) ನಿರ್ದಿಷ್ಟ ಸಮಯದೊಳಗೆ 1.7 ಕ್ಕೆ ಇಳಿಸಲು ಪ್ರಯತ್ನಿಸುವ ಮಸೂದೆಯ ಉದ್ದೇಶವನ್ನು ಮರುಪರಿಶೀಲಿಸುವಂತೆ ಅವರು ಯುಪಿಎಸ್‌ಸಿಎಲ್‌ಗೆ ಸೂಚಿಸಿದ್ದಾರೆ.ವಿಎಚ್‌ಪಿ ಕಾರ್ಯಕಾರಿ ಅಧ್ಯಕ್ಷರು ತಮ್ಮ ಸಲಹೆಗಳಲ್ಲಿ, ಜನಸಂಖ್ಯೆಯ ಸ್ಥಿರತೆಯನ್ನು ಸಾಧಿಸಲು ಎರಡು ಮಕ್ಕಳ ನೀತಿಯನ್ನು ಸೂಕ್ತವೆಂದು ಪರಿಗಣಿಸಲಾಗಿದೆ.ತನ್ನ ಸಂತಾನೋತ್ಪತ್ತಿ ಜೀವನದಲ್ಲಿ ಮಹಿಳೆಗೆ ಜನಿಸಿದ ಮಕ್ಕಳ ಸರಾಸರಿ ಸಂಖ್ಯೆ ಎರಡಕ್ಕಿಂತ ಹೆಚ್ಚಾದಾಗ ಸಮಾಜದಲ್ಲಿನ ಜನಸಂಖ್ಯೆಯು ಸ್ಥಿರವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಗೋಹತ್ಯೆ ವಿರುದ್ಧ ಅತ್ಯಂತ ಕಠಿಣ ಕಾನೂನು ಜಾರಿಗೆ ತಂದ ಯೋಗಿ ಸರ್ಕಾರ


1980 ರಲ್ಲಿ ಚೀನಾ ಒಂದು ಮಗು ನೀತಿಯನ್ನು ಅಳವಡಿಸಿಕೊಂಡಿತ್ತು, ಆದರೆ ಅಂತಹ ಪರಿಸ್ಥಿತಿಯನ್ನು ಎದುರಿಸಲು ಮೂರು ದಶಕಗಳಲ್ಲಿ ಅದನ್ನು ಹಿಂತೆಗೆದುಕೊಳ್ಳಬೇಕಾಯಿತು ಎಂದು ಅವರು ಹೇಳಿದರು.


"ಅಸ್ಸಾಂ ಮತ್ತು ಕೇರಳದಂತಹ ರಾಜ್ಯಗಳಲ್ಲಿ ಇದು ಆತಂಕಕಾರಿಯಾಗುತ್ತಿದೆ, ಅಲ್ಲಿ ಜನಸಂಖ್ಯೆಯ ಒಟ್ಟಾರೆ ಬೆಳವಣಿಗೆ ಕುಸಿದಿದೆ. ಈ ಎರಡೂ ರಾಜ್ಯಗಳಲ್ಲಿ, ಹಿಂದೂಗಳ ಟಿಎಫ್ಆರ್ 2.1 ಕ್ಕಿಂತ ಕಡಿಮೆಯಾಗಿದೆ, ಆದರೆ ಮುಸ್ಲಿಮರ ಸಂಖ್ಯೆ ಅಸ್ಸಾಂನಲ್ಲಿ 3.16 ಮತ್ತು 2.33  ಕೇರಳದಲ್ಲಿ ಇದೆ.ಆದ್ದರಿಂದ ಉತ್ತರ ಪ್ರದೇಶವು ಆ ಪರಿಸ್ಥಿತಿಗೆ ಬರುವುದನ್ನು ತಪ್ಪಿಸಬೇಕು ಎಂದು 'ಅಲೋಕ್ ಕುಮಾರ್ ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.