ಗೋಹತ್ಯೆ ವಿರುದ್ಧ ಅತ್ಯಂತ ಕಠಿಣ ಕಾನೂನು ಜಾರಿಗೆ ತಂದ ಯೋಗಿ ಸರ್ಕಾರ

ಯುಪಿ ಸರ್ಕಾರದ ಸಂಸದೀಯ ವ್ಯವಹಾರಗಳ ಸಚಿವ ಸುರೇಂದ್ರ ಖನ್ನಾ ಮಾತನಾಡಿ, ಯೋಗಿ ಸರ್ಕಾರವು ಗೋ-ವಧೆ ತಡೆ ತಿದ್ದುಪಡಿ ಮಸೂದೆ 2020 ಅನ್ನು ಅಂಗೀಕರಿಸಿದೆ. ಈ ಕಾನೂನಿನೊಂದಿಗೆ ಉತ್ತರ ಪ್ರದೇಶದಲ್ಲಿ ಗೋಹತ್ಯೆ ವಿರುದ್ಧದ ಕಾನೂನು ಹೆಚ್ಚು ಕಟ್ಟುನಿಟ್ಟಾಗಿದೆ ಎಂದು ಹೇಳಿದರು.

Last Updated : Aug 24, 2020, 10:25 AM IST
  • ಗೋ-ಹತ್ಯೆ ತಡೆ ತಿದ್ದುಪಡಿ ಮಸೂದೆ 2020 ಅನ್ನು ಅಂಗೀಕರಿಸಿದ ಉತ್ತರ ಪ್ರದೇಶ ಸರ್ಕಾರ
  • ಹೊಸ ಕಾನೂನು ಗೋಹತ್ಯೆಗೆ 3 ರಿಂದ 10 ವರ್ಷಗಳ ಜೈಲು ಶಿಕ್ಷೆ ಮತ್ತು 5 ಲಕ್ಷ ದಂಡ ವಿಧಿಸುತ್ತದೆ.
ಗೋಹತ್ಯೆ ವಿರುದ್ಧ ಅತ್ಯಂತ ಕಠಿಣ ಕಾನೂನು ಜಾರಿಗೆ ತಂದ ಯೋಗಿ ಸರ್ಕಾರ title=

ಲಕ್ನೋ: ಗೋಹತ್ಯೆ ವಿರುದ್ಧ ಯೋಗಿ ಸರ್ಕಾರ (Yogi Government) ಹೊಸ ಮತ್ತು ಅತ್ಯಂತ ಕಠಿಣ ಕಾನೂನನ್ನು ಜಾರಿಗೆ ತಂದಿದೆ. ಈಗ ಗೋಹತ್ಯೆ ಆರೋಪದ ಮೇಲೆ ಸಿಕ್ಕಿಬಿದ್ದವರು ಕೂಡ 3 ರಿಂದ 10 ವರ್ಷಗಳ ಕಾಲ ಜೈಲಿಗೆ ಹೋಗುತ್ತಾರೆ. ಗೋ-ಹತ್ಯೆ ಮಾಡಿದವರ ​​ಆಸ್ತಿಯನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಮತ್ತು ಅವರ ಗುರುತಿನ ಪೋಸ್ಟರ್‌ಗಳನ್ನು ಗಲಭೆಕೋರರಂತೆ ಹಾಕಲಾಗುವುದು. 

ಈ ನಿಟ್ಟಿನಲ್ಲಿ ಉತ್ತರ ಪ್ರದೇಶ (Uttar Pradesh) ಸರ್ಕಾರದ ಸಂಸದೀಯ ವ್ಯವಹಾರಗಳ ಸಚಿವ ಸುರೇಂದ್ರ ಖನ್ನಾ ಮಾತನಾಡಿ,  ಗೋ-ವಧೆ ತಡೆ ತಿದ್ದುಪಡಿ ಮಸೂದೆ 2020 ಅನ್ನು ಅಂಗೀಕರಿಸಿದೆ. ಈ ಕಾನೂನಿನೊಂದಿಗೆ ಉತ್ತರ ಪ್ರದೇಶದಲ್ಲಿ ಗೋಹತ್ಯೆ ವಿರುದ್ಧದ ಕಾನೂನು ಹೆಚ್ಚು ಕಟ್ಟುನಿಟ್ಟಾಗಿದೆ ಎಂದು ಹೇಳಿದರು.

ಇನ್ನು ಮುಖ್ಯವಾದ ವಿಷಯವೆಂದರೆ ಉತ್ತರ ಪ್ರದೇಶದಲ್ಲಿ ಗೋಹತ್ಯೆಯ ಅಪರಾಧವು ಜಾಮೀನು ರಹಿತವಾಗಿರುತ್ತದೆ. ಹೊಸ ಕಾನೂನು 3 ರಿಂದ 10 ವರ್ಷಗಳ ಜೈಲು ಶಿಕ್ಷೆ ಮತ್ತು ಗೋಹತ್ಯೆಗೆ 5 ಲಕ್ಷ ದಂಡ ವಿಧಿಸುತ್ತದೆ. ಈ ಕಾನೂನನ್ನು ಉಲ್ಲಂಘಿಸಿದವರಿಗೆ 7 ವರ್ಷ ಜೈಲು ಶಿಕ್ಷೆ ಮತ್ತು 3 ಲಕ್ಷ ವರೆಗೆ ದಂಡ ವಿಧಿಸಲಾಗುತ್ತದೆ. ಗೋ ಹತ್ಯೆ ಆರೋಪ ಸಾಬೀತಾದರೆ ಮೊದಲ ಬಾರಿಗೆ 3 ರಿಂದ 10 ವರ್ಷ ಶಿಕ್ಷೆ ವಿಧಿಸುವ ಅವಕಾಶವಿದೆ. 3 ಲಕ್ಷ ರೂ.ಗಳಿಂದ 5 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ. ಎರಡನೇ ಬಾರಿಗೆ ಗೋಹತ್ಯೆಯ ಆರೋಪವೆಂದು ಸಾಬೀತಾದರೆ ದಂಡ ಮತ್ತು ಶಿಕ್ಷೆ ಎರಡನ್ನೂ ಅನುಭವಿಸಬೇಕಾಗುತ್ತದೆ. ದರೋಡೆಕೋರ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಮತ್ತು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಇದಲ್ಲದೆ ಯೋಗಿ ಸರ್ಕಾರವು ಈಗ ಹಸು ಕಳ್ಳಸಾಗಣೆಗೆ ಸಂಬಂಧಿಸಿದ ಅಪರಾಧಿಗಳ ಸಾರ್ವಜನಿಕ ಪೋಸ್ಟರ್‌ಗಳನ್ನು ಸಹ ಹಾಕಲಿದೆ. ಹಸು ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ವಾಹನಗಳ ಚಾಲಕರು, ನಿರ್ವಾಹಕರು ಮತ್ತು ಮಾಲೀಕರನ್ನು ಸಹ ಈ ಕಾನೂನಿನಡಿಯಲ್ಲಿ ಆರೋಪಿಗಳನ್ನಾಗಿ ಮಾಡಲಾಗುವುದು ಮತ್ತು ಕಳ್ಳಸಾಗಾಣಿಕೆದಾರರಿಂದ ರಕ್ಷಿಸಿದ ಹಸುಗಳ ನಿರ್ವಹಣೆಗೆ ಒಂದು ವರ್ಷದ ವೆಚ್ಚವನ್ನು ಸಹ ಆರೋಪಿಗಳಿಂದ ಪಡೆಯಲಾಗುತ್ತದೆ ಎಂದು ಹೇಳಲಾಗಿದೆ.

Trending News