ನವದೆಹಲಿ: ಉತ್ತರ ಪ್ರದೇಶದ ರಾಮ್ಪುರದಲ್ಲಿ ಎಸ್ಬಿಐ ಶಾಖೆಯಲ್ಲಿ ಮೂರು ಲಕ್ಷ ರೂಪಾಯಿಗಳ ಕಳ್ಳತನ ಸಂಭವಿಸಿದೆ. ಆಶ್ಚರ್ಯಕರವಾಗಿ, 12-ವರ್ಷದ ಬಾಲಕ ಈ ಕಳ್ಳತನದಲ್ಲಿ ತನ್ನ ಕೈಚಳಕ ತೋರಿಸಿದ್ದಾನೆ. ಇಡೀ ಘಟನೆಯನ್ನು ಬ್ಯಾಂಕಿನಲ್ಲಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಹಿಡಿಯಲಾಯಿತು. ಪೊಲೀಸರು ಸಿ.ಸಿ.ಟಿ.ವಿ. ತುಣುಕನ್ನು ಹುಡುಕಿದಾಗ, ಬ್ಯಾಂಕಿನಿಂದ ಹಣ ತುಂಬಿದ್ದ ಚೀಲವನ್ನು ಬಾಲಕ ತೆಗೆದುಕೊಂಡು ಹೋಗುತ್ತಿರುವುದು ಬೆಳಕಿಗೆ ಬಂದಿದೆ. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಅಲ್ಲದೆ, ಆರೋಪಿ ಮಗುವಿನ ಹುಡುಕಾಟ ಚುರುಕುಗೊಂಡಿದೆ.


COMMERCIAL BREAK
SCROLL TO CONTINUE READING

ಸಿ.ಸಿ.ಟಿ.ವಿ ತುಣುಕಿನಲ್ಲಿ, ಚೀಲ ಕದ್ದೊಯ್ಯುತ್ತಿರುವ ಬಾಲಕ ಕೆಂಪು ಮತ್ತು ಕಪ್ಪು ಟಿ ಷರ್ಟು ಮತ್ತು ನೀಲಿ ಜೀನ್ಸ್ ಧರಿಸಿರುವುದು ಕಂಡುಬಂದಿದೆ. ಸಿಬ್ಬಂದಿ ಜೊತೆಗೆ ಬ್ಯಾಂಕಿನಲ್ಲಿ ಸಾಕಷ್ಟು ಜನರು ಇದ್ದರು. ಏತನ್ಮಧ್ಯೆ, ಬಾಲಕ ಚೀಲವನ್ನು ತೆಗೆದುಕೊಂಡು ನಂತರ ತ್ವರಿತವಾಗಿ ಬ್ಯಾಂಕಿನಿಂದ ಹೊರ ಓಡಿರುವುದು ದೃಶ್ಯದಲ್ಲಿ ಸೆರೆಯಾಗಿದೆ.



ಈ ಘಟನೆಯಲ್ಲಿ ತಮ್ಮ ಹಣ ಕಳೆದುಕೊಂಡ ವ್ಯಕ್ತಿ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಆತನ ದೂರಿನಲ್ಲಿ, ಮೂರು ಲಕ್ಷ ರೂಪಾಯಿಗಳನ್ನು ಕಳುವಾದ ಚೀಲದಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು ತಕ್ಷಣ ಪ್ರಕರಣದ ಬಗ್ಗೆ ಮಾಹಿತಿ ಪಡೆದರು. ಪೊಲೀಸರು ಬ್ಯಾಂಕ್ ಶಾಖೆಗೆ ತಲುಪಿದಾಗ ಸಿ.ಸಿ.ಟಿ.ವಿ ದೃಶ್ಯಗಳನ್ನು ಕಂಡುಹಿಡಿದ ನಂತರ ಒಬ್ಬ ಬಾಲಕನಿಂದ ಈ ಕಳ್ಳತನ ಸಂಭವಿಸಿರುವುದನ್ನು ಕಂಡು ಆಶ್ವರ್ಯಚಕಿತರಾದರು. ವೀಡಿಯೊ ಹೊರಬಂದ ನಂತರ, ಇದು ಹೆಚ್ಚು ವೈರಲ್ ಆಗುತ್ತಿದೆ. ಅದೇ ಸಮಯದಲ್ಲಿ ಪೊಲೀಸರು ಆರೋಪಿ ಮಗುವನ್ನು ಹುಡುಕಲಾರಂಭಿಸಿದ್ದಾರೆ.