ನವದೆಹಲಿ: ದೇಶಾದ್ಯಂತ ಇಂದು 70ನೇ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. 1947ರ ಆಗಸ್ಟ್ 15ರಂದು ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ, ಸುಸೂತ್ರ ಆಡಳಿತಕ್ಕಾಗಿ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿಸಿ 1950ರ ಜನವರಿ 26ರಂದು ಜಾರಿಗೆ ತಂದ ದಿನ. ಈ ಐತಿಹಾಸಿಕ ದಿನದಂದು ಪ್ರತಿವರ್ಷ ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಈ ಸಂದರ್ಭದಲ್ಲಿ ದೇಶ ಭಕ್ತಿ ಮತ್ತು ದೇಶಪ್ರೇಮವನ್ನು ಸಾರುವ ಸುಪ್ರಸಿದ್ಧ ದೇಶಭಕ್ತಿ ಗೀತೆಗಳು ನಿಮವಾಗಿ...


ಮಾ ತುಜೆ ಸಲಾಂ...
ಸಂ
ಗೀತ ಮಾತ್ರಿಕ ಎಂದೇ ಕರೆಯಲಾಗುವ ಎ.ಆರ್.ರೆಹಮಾನ್ ನಿರ್ದೇಶನದಲ್ಲಿ ಮೂಡಿಬಂದಿರುವ ವಂದೇ ಮಾತರಂ ಆಲ್ಬಂನ 'ಮಾ ತುಜೆ ಸಲಾಂ...' ಹಾಡು ಇಡೀ ದೇಶದ ಜನತೆಯಲ್ಲಿ ದೇಶದ ಬಗ್ಗೆ ಹೆಮ್ಮೆ, ದೇಶಪ್ರೇಮ, ದೇಶಭಕ್ತಿಯನ್ನು ಹುಟ್ಟಿಸಿ, ರಾಷ್ಟ್ರೀಯ ಏಕತೆ ಸಾರುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 


ಯೇ ಜೊ ದೇಸ್ ಹೈ ತೇರಾ...
2004ರಲ್ಲಿ ಬಿಡುಗಡೆಯಾದ ಬಾಲಿವುಡ್ ಸಿನಿಮಾ ಸ್ವದೇಶ್ ಚಿತ್ರದ 'ಯೇ ಜೊ ದೇಸ್ ಹೈ ತೇರಾ...' ಹಾಡು ಗಣರಾಜ್ಯೋತ್ಸವಕ್ಕೆ ಹೇಳಿಮಾಡಿಸಿದಂತಿದೆ. ಈ ಹಾಡಿಗೆ ಸಂಗೀತ ನಿರ್ದೇಶನವನ್ನು ಎ.ಆರ್.ರೆಹಮಾನ್ ಮಾಡಿದ್ದು, ಶಾರೂಕ್ ಖಾನ್ ಅಭಿನಯಿಸಿದ್ದಾರೆ.


ಮೇರೆ ರಂಗ್ ದೇ ಬಸಂತಿ ಚೋಲಾ...
ಬಾಲಿವುಡ್'ನ 'ದಿ ಲೆಜೆಂಡ್ ಆಫ್ ಭಗತ್ ಸಿಂಗ್' ಚಿತ್ರದ 'ಮೇರೆ ರಂಗ್ ದೇ ಬಸಂತಿ ಚೋಲಾ...' ಹಾಡು ಹಳೆಯದಾದರೂ ಅದಕ್ಕೆ ನೂತನ ಸಂಗೀತ ಸಂಯೋಜನೆ ಮಾಡಿ ಚಿತ್ರಿಸಲಾಗಿದೆ. ಈ ಹಾಡು ದೇಶಾದ್ಯಂತ ಹಾಡು ದೇಶಪ್ರೇಮಿಗಳ ಮನ ಗೆದ್ದಿದೆ. ಎ.ಆರ್.ರೆಹಮಾನ್ ನಿರ್ದೇಶನದಲ್ಲಿ ಸೋನು ನಿಗಮ್ ಹಾಡಿರುವ ಈ ಹಾಡು ಗಣರಾಜ್ಯೋತ್ಸವಕ್ಕೆ ಹೇಳಿ ಮಾಡಿಸಿದಂತಿದೆ. 


ಯೇ ಮೇರೆ ಪ್ಯಾರೆ ವತನ್...
1961ರಲ್ಲಿ ಬಿಡುಗಡೆಯಾದ ಮನ್ನಾ ದೇ ಅವರ 'ಯೇ ಮೇರೆ ಪ್ಯಾರೆ ವತನ್...' ಹಾಡು ನಿಜಕ್ಕೂ ದೇಶ ಭಕ್ತಿಯ ಪ್ರತೀಕವಾಗಿದೆ. 


ಭಾರತ್ ಹಮ್ಕೋ ಜಾನ್ ಸೆ ಪ್ಯಾರಾ ಹೈ...
90 ರ ದಶಕದ ಆರಂಭದಲ್ಲಿ ಕಾಶ್ಮೀರವನ್ನು ಪ್ರದರ್ಶಿಸುವ 'ರೋಜಾ' ಚಿತ್ರದ ಈ ಮೆಲೋಡಿ ಹಾಡು, ದೇಶದ ಬಗ್ಗೆ ಹೆಮ್ಮೆ ಮೂಡಿಸುತ್ತದೆ. ರಾಷ್ಟ್ರೀಯತೆಯ ಉತ್ಸಾಹವನ್ನು ಪ್ರತಿ ಪ್ರಜೆಯಲ್ಲೂ ಗರಿಗೆದರುವಂತೆ ಮಾಡುತ್ತದೆ.


ಇವಿಷ್ಟೇ ಅಲ್ಲದೆ, 'ಸರ್ಫರೋಶ್'ನಿಂದ 'ಝಿಂದಗಿ ಮೌತ್ ನಾ ಬಂಜಾಯೆ', 'ರಂಗ್ ದೆ ಬಸಂತಿ' ಟೈಟಲ್ ಸಾಂಗ್, 'ಚಕ್ ದೇ! ಇಂಡಿಯಾ' ಟೈಟಲ್ ಸಾಂಗ್, ಶಂಕರ್ ಮಹಾದೇವನ್ ಅವರ' ಹಿಂದೂಸ್ಥಾನ್ ಮೇರಿ ಜಾನ್ 'ಮತ್ತು ಫನ್ನಾ ಚಿತ್ರದ 'ದೇಶ್ ರಂಗೀಲಾ' ಸಹೋದರತ್ವ ಮತ್ತು ಏಕತೆಯನ್ನು ಸಾರುತ್ತವೆ.