ನವದೆಹಲಿ: ವಿಶೇಷ ಸಂದರ್ಭಗಳಲ್ಲಿ ಸ್ನೇಹಿತರೊಂದಿಗೆ ಹೊರಗೆ ಹೋಗೋದು ಅಂದ್ರೆ ಎಷ್ಟು ಖುಷಿ ಅಲ್ವ. ಈ ಸಮಯದಲ್ಲಿ ನಾವು ಮೊದಲು ರೆಸ್ಟೋರೆಂಟ್ ಗೆ ಹೋಗಿ ಅಲ್ಲಿ ಆರ್ಡರ್ ಮಾಡೋದು ಕಾಫಿ ಅಥವಾ ಸೂಪ್.. ಆದರೆ ಈ ವೀಡಿಯೋ ನೋಡಿದ ಬಳಿಕ ನೀವು ಸೂಪ್ ಆರ್ಡರ್ ಮಾಡೋದನ್ನೇ ಬಿಟ್ಟುಬಿಡುತ್ತೀರಿ. 


COMMERCIAL BREAK
SCROLL TO CONTINUE READING

ಚೀನಿ ರೆಸ್ಟೋರೆಂಟ್ ಒಂದರಲ್ಲಿ ಟೇಬಲ್ ಮೇಲೆ ಇಟ್ಟಿದ್ದ ಬಿಸಿಬಿಸಿ ಸೂಪ್ ನಿಂದ ಏನೋ ವಾಸನೆ ಬರುತ್ತಿರುವುದು ಕಂಡು ಬಂತು. ಆದರೆ ಅದೇನೆಂದು ನೋಡುವಷ್ಟರಲ್ಲಿ ಆ ಬೌಲ್ ಬ್ಲಾಸ್ಟ್ ಆಗಿ ಹೋಯಿತು. ಆ ಸ್ಫೋಟ ಎಷ್ಟು ತೀವ್ರವಾಗಿತ್ತೆಂದರೆ ಗ್ರಾಹಕ ಮತ್ತು ವೇಟರ್ ಮುಖದ ಮೇಲೆಲ್ಲಾ ಸೂಪ್ ಚೆಲ್ಲಿತ್ತು.. ಆ ವೀಡಿಯೋ ನೀವೂ ನೋಡಿ...



ಸೂಪ್ ನಲ್ಲಿ ಸ್ಫೋಟವಾಗುತ್ತಿದ್ದಂತೆ ಅಲ್ಲಿದ್ದವರೆಲ್ಲಾ ಬೆಚ್ಚಿ ದೂರ ಸರೀದ್ದರು. ಆದರೆ, ನಿಜಕ್ಕೂ ಅಲ್ಲಿ ನಡೆದಿದ್ದೇನೆಂದರೆ, ಗ್ರಾಹಕರು ಆಹಾರ ಸೇವಿಸುತ್ತಿರುವಾಗ ಅವರ ಬಳಿಯಿದ್ದ ಹಗುರವಾದ ಲೈಟರ್ ಸೂಪ್ ಒಳಗೆ ಬಿದ್ದಿತ್ತು. ಅದನ್ನು ವೈಟರ್ ಹೊರತೆಗೆಯಲು ಪ್ರಯತ್ನಿಸುತ್ತಿದ್ದಾಗ, ಬಿಸಿಬಿಸಿ ಸೂಪ್ ಒಳಗೆ ಬಿದ್ದ ಲೈಟರ್ ಸ್ಫೋಟಗೊಂಡಿದ್ದಾಗಿ ತಿಳಿದುಬಂದಿದೆ.  ಸದ್ಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.