WATCH:ಪಾರ್ಲೆ-ಜಿ ಬಿಸ್ಕತ್ನಿಂದ ತಯಾರಿಸಬಹುದು ಬರ್ಫಿ, ವಿಡಿಯೋ ವೈರಲ್
ಪಾರ್ಲೆ-ಜಿ ಬಿಸ್ಕೆಟ್ನಿಂದ (Parle-G biscuits) ವ್ಯಕ್ತಿಯೊಬ್ಬ ಬರ್ಫಿ ತಯಾರಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿದೆ. ಕ್ಲಿಪ್ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದೆ.
ಆಹಾರದ ವಿಷಯಕ್ಕೆ ಬಂದರೆ, ಅಂತರ್ಜಾಲದಲ್ಲಿ ವಿಚಿತ್ರ ಭಕ್ಷ್ಯಗಳನ್ನು ಒಳಗೊಂಡ ಹಲವಾರು ವಿಡಿಯೋಗಳಿವೆ. ಈ ಕ್ಲಿಪ್ಗಳು ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ಸೆಳೆಯುತ್ತವೆ. ಅವರು ಭಕ್ಷ್ಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ.
ಇಲ್ಲೊಬ್ಬ ವ್ಯಕ್ತಿಯು ಪಾರ್ಲೆ-ಜಿ ಬಿಸ್ಕತ್ ಗಳಿಂದ ಬರ್ಫಿಯನ್ನು ತಯಾರಿಸುತ್ತಿರುವ ಕ್ಲಿಪ್ ವೈರಲ್ ಆಗಿದೆ. ಬರ್ಫಿಯನ್ನು ತಯಾರಿಸುವ ಸಂಪೂರ್ಣ ಪ್ರಕ್ರಿಯೆಯನ್ನು ತೋರಿಸುವ ವಿಡಿಯೋವನ್ನು ಬ್ಲಾಗರ್ ಕರಣ್ ಸಿಂಘಾಲ್ ಅವರು Instagram ನಲ್ಲಿ 'thefoodattacker' ಎಂಬ ಖಾತೆಯ ಹೆಸರಿನಿಂದ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ, ಸಿಂಘಾಲ್ ಪಾರ್ಲೆ-ಜಿ ಬಿಸ್ಕೆಟ್ ಅನ್ನು ದೇಸಿ ತುಪ್ಪದಲ್ಲಿ ಹುರಿಯುತ್ತಿರುವುದನ್ನು ಕಾಣಬಹುದು. ಹುರಿದ ನಂತರ, ಅದನ್ನು ಪುಡಿ ಮಾಡುತ್ತಾರೆ. ನಂತರ ಅವರು ಸಕ್ಕರೆ ಪಾಕವನ್ನು ತಯಾರಿಸುವುದನ್ನು ಕಾಣಬಹುದು. ಅದಕ್ಕೆ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡುತ್ತಾರೆ. ನಂತರ, ಪಾರ್ಲೆ-ಜಿ ಬಿಸ್ಕತ್ತುಗಳ ಪೇಸ್ಟ್ ಅನ್ನು ಹಾಲಿಗೆ ಸೇರಿಸಲಾಗುತ್ತದೆ ಮತ್ತು ಹಲ್ವಾ ತರಹದ ಮಿಶ್ರಣವನ್ನು ತಯಾರಿಸಲಾಗುತ್ತದೆ. ಬಳಿಕ ತಟ್ಟೆಗೆ ಹಾಕಿ ಅದನ್ನು ತುಂಡುಗಳಾಗಿ ಕತ್ತರಿಸಲಾಗುತ್ತದೆ.
ಪಾರ್ಲೆ-ಜಿ ಬರ್ಫಿಗೆ ನೆಟಿಜನ್ಗಳು ಪ್ರತಿಕ್ರಿಯೆ:
ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ನಂತರ ಈ ವಿಡಿಯೋ 82,000 ಲೈಕ್ಗಳನ್ನು ಮತ್ತು ಹಲವಾರು ಪ್ರತಿಕ್ರಿಯೆಗಳನ್ನು ಗಳಿಸಿದೆ. ಕೆಲವು ಬಳಕೆದಾರರು ಭಕ್ಷ್ಯದ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸಿದರು. ಇತರರು ಭಕ್ಷ್ಯವನ್ನು ಮಾಡಲು ಪ್ರಯತ್ನಿಸುವುದಾಗಿ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 56ನೇ ವಯಸ್ಸಿನಲ್ಲೂ ಕಟ್ಟುಮಸ್ತಾದ ದೇಹ ಹೊಂದಿರುವ ಸಲ್ಮಾನ್ ಖಾನ್.. ಇದೇ ಅವರ Fitness secret.!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.