ನವದಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಬೈಕ್ ಸ್ಟಂಟ್ ಮಾಡುವ ವಿಡಿಯೋ(Bike Stunt Video)ಗಳನ್ನು ನೀವು ನೋಡಿರಬೇಕು. ಅನೇಕರು ಬೈಕ್ ಸ್ಟಂಟ್ ಮಾಡಲು ಹೋಗಿ ಎಡವಟ್ಟು ಮಾಡಿಕೊಳ್ಳುವುದನ್ನು ನೋಡಿ ನೀವು ನಕ್ಕಿರಬಹುದು. ಅದೇ ರೀತಿಯ ಮತ್ತೊಂದು ಬೈಕ್ ಸ್ಟಂಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಬೈಕ್ ಸ್ಟಂಟ್(Bike Stunt) ಮಾಡುವುದು ಜೀವಕ್ಕೆ ತುಂಬಾ ಅಪಾಯಕಾರಿ. ಈ ಬಗ್ಗೆ ಜನರಲ್ಲಿ ಎಷ್ಟೇ ಅರಿವು ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ. ಖಾಲಿ ರಸ್ತೆಯಲ್ಲಿ ಸ್ಟಂಟ್ ಮಾಡಲು ಹೋಗಿ ಅನೇಕರು ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳುತ್ತಾರೆ. ಮುಂಜಾಗೃತೆ ವಹಿಸದೆ ಮಾಡುವ ಈ ರೀತಿಯ ಬೈಕ್ ಸ್ಟಂಟ್ ಗಳಿಂದ ಪ್ರಾಣವನ್ನೇ ಕಳೆದುಕೊಳ್ಳುವ ಅಪಾಯ ಎದುರಾಗುತ್ತದೆ.  


ಇದನ್ನೂ ಓದಿ: Viral Video Of Holi: ಹೋಳಿ ಹಬ್ಬದ ದಿನ ನೀರಿನಿಂದ ತುಂಬಿದ ಬಲೂನ್ ತಾಕಿ ಆಟೋ ಪಲ್ಟಿ.. Video ನೋಡಿ


ಸಾಹಸ ಮಾಡಲು ಹೋಗಿ ಯುವಕನ ಪರದಾಟ!  



ಸದ್ಯ ವೈರಲ್ ಆಗುತ್ತಿರುವ ವಿಡಿಯೋ(Viral Video)ದಲ್ಲಿ ಬೈಕ್ ಮೇಲೆ ಸಾಹಸ ಮಾಡಲು ಹೋಗಿ ಯುವಕನೊಬ್ಬ ಪರದಾಡಿದ್ದಾನೆ. ಬೈಕ್ ಸ್ಟಂಟ್ ಮಾಡಲು ಹೋದ ಈ ವ್ಯಕ್ತಿ ತನ್ನ ಜೀವಕ್ಕೆ ಕುತ್ತು ತಂದುಕೊಂಡಿದ್ದ. ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. asikin_ali_07_g_k ಹೆಸರಿನ Instagram ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಸಖತ್ ವೈರಲ್ ಆಗಿದೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.


ಬೈಕ್ ಸ್ಟಂಟ್ ವಿಫಲವಾದಾಗ!


ಬೈಕ್ ಓಡಿ(Bike Riding)ಸುವಾಗ ತುಂಬಾ ಜಾಗರೂಕರಾಗಿರಬೇಕು, ಕೊಂಚ ಎಚ್ಚರ ತಪ್ಪಿದರೂ ಪ್ರಾಣವೇ ಹೋಗುತ್ತದೆ. ಅದೇ ರೀತಿ ಖಾಲಿ ಜಾಗದಲ್ಲಿ ಬೈಕ್ ತೆಗೆದುಕೊಂಡು ಹೋದ ಈ ಯುವಕ ಬೈಕ್ ಸ್ಟಂಟ್ ಮಾಡಲು ಯತ್ನಿಸಿದ್ದಾನೆ. ಮುಂಬದಿಯ ಬೈಕ್ ಚಕ್ರವನ್ನು ಮೇಲಕ್ಕೆತ್ತಿ ಸ್ಟಂಟ್ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಬ್ಯಾಲೆನ್ಸ್ ತಪ್ಪಿ ಬೈಕ್ ಆ ಕಡೆ, ಈ ಕಡೆ ಓಡಾಡಿದೆ. ಯುವಕ ಕೂಡ ಬೈಕ್ ಗಟ್ಟಿಯಾಗಿ ಹಿಡಿದುಕೊಂಡು ಅದರ ಮೇಲೆಯೇ ಬ್ಯಾಲೆನ್ಸ್ ಮಾಡಿದ್ದಾನೆ.


ಇದನ್ನೂ ಓದಿ: 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮಾಡಿಸಬಹುದು PAN Card : ಹೇಗೆ ಇಲ್ಲಿದೆ


ಹೇಗೋ ಬೈಕ್ ಮೇಲಿನ ಸಮತೋಲನ ಕಾಯ್ದುಕೊಂಡ ಯುವಕ ಬೈಕ್ ಸ್ಟಂಟ್(Bike Stunt) ವಿಫಲವಾದರೂ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಒಂದು ವೇಳೆ ಬೈಕ್ ಸ್ಕಿಡ್ ಆಗಿ ಪಲ್ಟಿ ಹೊಡೆದಿದ್ದರೆ ಯುವಕನ ತಲೆ ಒಡೆದು ಮಿದುಳೇ ಹೊರಬರುತ್ತಿತ್ತು. ಈ ವಿಡಿಯೋ ನೋಡಿದರೆ ನಿಮಗೆ ನಗು ಬರಬಹುದು. ಆದರೆ ಬೈಕ್ ಸ್ಟಂಟ್ ಮಾಡುವವರಿಗೆ ಇದೊಂದು ಉತ್ತಮ ಪಾಠವಾಗಿದೆ. ಬೈಕ್ ಸ್ಟಂಟ್(Bike Stunt) ಮಾಡುವುದೇ ಅಪಾಯಕಾರಿ, ಹೀಗಾಗಿ ಪ್ರಾಣದ ಜೊತೆ ಯುವಕರು ಚೆಲ್ಲಾಟವಾಡಬಾರದು ಅನ್ನೋ ಸಂದೇಶವನ್ನು ಈ ವಿಡಿಯೋ ಸಾರಿದೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.